Dailyhunt Logo
  • Light mode
    Follow system
    Dark mode
    • Play Story
    • App Story
ಗಾಳಿ ರಭಸಕ್ಕೆ ನಿಯಂತ್ರಣ ತಪ್ಪಿ ಬಿದ್ದ ಬೈಕ್‌ : ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಸಾವು

ಗಾಳಿ ರಭಸಕ್ಕೆ ನಿಯಂತ್ರಣ ತಪ್ಪಿ ಬಿದ್ದ ಬೈಕ್‌ : ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಸಾವು

ಈ ಸಂಜೆ 13 hrs ago

Bike fell out of control due to strong winds: Mother sitting on the back died

ಕೊಳ್ಳೇಗಾಲ,ಜು.2- ಮಗನ ಜೊತೆಯಲ್ಲಿ ಬೈಕಿನಲ್ಲಿ ಬರುವಾಗ ರಭಸವಾಗಿ ಬೀಸಿದ ಗಾಳಿ ಬೈಕ್‌ ಸವಾರನ ನಿಯಂತ್ರಣ ತಪ್ಪಿ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ತೇರಂಬಳ್ಳಿ ಸಮೀಪ ಜರುಗಿದೆ.ಪಟ್ಟಣದ ಕೊಳ್ಳೇಗಾಲ ಮೋಳೆಯ ಮುನಿಯಮ (52) ಮೃತ ದುರ್ದೈವಿ.

ಮಗ ದಿಲೀಪ್‌ನ ಜೊತೆ ಸ್ವಗ್ರಾಮ ಕೊಳ್ಳೇಗಾಲ ಮೋಳೆಯಿಂದ ಟಗರುಪುರ ಮೋಳೆಗೆ ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ 212 ರಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಬೀಸಿದ ಗಾಳಿಗೆ ಬೈಕ್‌ ಅಲುಗಾಡಿದೆ. ಆ ವೇಳೆ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದು ಅತಿಯಾದ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಪ್ರಜ್ಞೆ ತಪ್ಪಿದರು.

ಕೂಡಲೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ವೈದ್ಯರಿಂದ ಪರಿಶೀಲಿಸಿದಾಗ ದಾರಿ ಮಧ್ಯೆ ಮೃತಪಟ್ಟಿರುವುದು ಖಚಿತಪಡಿಸಿದರು.ಈ ವಿಷಯ ತಿಳಿದ ತಕ್ಷಣವೇ ಗ್ರಾಮಾಂತರ ಠಾಣೆಯ ಎ ಎಸ್‌‍ ಐ ಶಂಕರ್‌ ಮತ್ತು ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಇಲ್ಲಿನ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲ,ಜು.2- ಮಗನ ಜೊತೆಯಲ್ಲಿ ಬೈಕಿನಲ್ಲಿ ಬರುವಾಗ ರಭಸವಾಗಿ ಬೀಸಿದ ಗಾಳಿ ಬೈಕ್‌ ಸವಾರನ ನಿಯಂತ್ರಣ ತಪ್ಪಿ ಹಿಂಬದಿಯಲ್ಲಿ ಕುಳಿತಿದ್ದ ತಾಯಿ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ತೇರಂಬಳ್ಳಿ ಸಮೀಪ ಜರುಗಿದೆ.ಪಟ್ಟಣದ ಕೊಳ್ಳೇಗಾಲ ಮೋಳೆಯ ಮುನಿಯಮ (52) ಮೃತ ದುರ್ದೈವಿ.

Dailyhunt
Disclaimer: This content has not been generated, created or edited by Dailyhunt. Publisher: eesanje