Dailyhunt Logo
  • Light mode
    Follow system
    Dark mode
    • Play Story
    • App Story
ಗೊರೂರು ಪಂಕಜ ಅವರಿಗೆ ಕೈಯ್ಯಾರ ಕಿಞ್ಞಣ್ಣರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪ್ರದಾನ

ಗೊರೂರು ಪಂಕಜ ಅವರಿಗೆ ಕೈಯ್ಯಾರ ಕಿಞ್ಞಣ್ಣರೈ ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪ್ರದಾನ

ಈ ಸಂಜೆ 3 days ago

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಸಂಘಟಿತ ಪ್ರಯತ್ನಗಳು ಅಗತ್ಯವಾಗಿವೆ ಎಂದು ಸಮಾಜ ಸೇವಕರಾದ ಶ್ರೀನಿವಾಸ ಬಹುದ್ದೂರ್ ಅವರು ಹೇಳಿದರು.ಕಾಸರಗೋಡು ದಸರಾ ಅಂಗವಾಗಿ ಗಡಿನಾಡು ಕಾಸರಗೋಡಿನ ಪಾಂಗೋಡಿನಲ್ಲಿ ಕನ್ನಡ ಭವನದ ವತಿಯಿಂದ ನಡೆದ ಕನ್ನಡ ಸಾಂಸ್ಕೃತಿಕೋತ್ಸವ ಮತ್ತು ಕವಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪರ ಸಂಘ-ಸಂಸ್ಥೆಗಳು ಹಾಗೂ ಸಾಹಿತ್ಯಿಕ ವೇದಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಡಾ. ಎಂ. ಜಿ. ಆರ್. ಅರಸು ಅವರು, ಕವಿ ಸಮ್ಮೇಳನವು ಕವಿಗಳ ಸೃಜನಶೀಲ ಅಭಿವ್ಯಕ್ತಿಗೆ ಮಾತ್ರ ಸೀಮಿತವಾಗದೆ, ಕನ್ನಡದ ಮನಸ್ಸುಗಳನ್ನು ಬೆಸೆಯುವ ಹಾಗೂ ಭಾಷೆಯ ಮೇಲಿನ ಪ್ರೀತಿಯನ್ನು ಗಟ್ಟಿಗೊಳಿಸುವ ಸಾಂಸ್ಕೃತಿಕ ವೇದಿಕೆಯಾಗಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬೆಂಗಳೂರಿನ ಖ್ಯಾತ ಕವಯತ್ರಿ ಗೊರೂರು ಪಂಕಜ ಅವರಿಗೆ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗೊರೂರು ಪಂಕಜ ಅವರು, ಗಡಿನಾಡು ಪ್ರದೇಶಗಳಲ್ಲಿ ಹೆಚ್ಚು ಹೆಚ್ಚು ಕನ್ನಡದ ಕಾರ್ಯಕ್ರಮ ನಡೆಸುವ ಮೂಲಕ ಕನ್ನಡದ ಅಸ್ಮಿತೆಯನ್ನು ಸ್ಥಾಪಿಸುವ ಜೊತೆಗೆ ಸಂಸ್ಕೃತಿಯನ್ನು ಉಳಿಸುವುದು, ಕನ್ನಡಿಗರ ಆತ್ಮ ಗೌರವವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು ಎಂದು ಅಭಿಪ್ರಾಯ ಪಟ್ಟರು.

ಗಡಿನಾಡಿನ ಕನ್ನಡಿಗರು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ವಿಚಾರದಲ್ಲಿ ಜಾಗೃತರಾಗಿರಬೇಕು ಎಂದು ತಿಳಿಸಿದ ಗೊರೂರು ಪಂಕಜ ಅವರು, ಕಾಸರಗೋಡಿನಲ್ಲಿ ಕನ್ನಡದ ಕಾಯಕವನ್ನು ನಿರಂತರವಾಗಿ ನಡೆಸುತ್ತಿರುವ ಕನ್ನಡ ಭವನದ ರುವಾರಿ ಡಾ. ವಾಮನರಾವ್ ಬೇಕಲ್ ಅವರು ತಮ್ಮ ಮನೆಯನ್ನೇ ಕನ್ನಡಮಯವಾಗಿಸಿದ್ದಾರೆ. ಯಾರೇ ಕನ್ನಡಿಗರು ಅಲ್ಲಿ ಹೋಗಿ ಉಳಿಯುವ ಅವಕಾಶ ಕಲ್ಪಿಸಿರುವುದು ಪ್ರಶಂಸನೀಯ ಎಂದು ವಾಮನರಾವ್ ಅವರ ಸೇವೆಯನ್ನು ಸ್ಮರಿಸಿದರು.

ಸಮಾಜ ಸೇವಕರಾದ ಶ್ರೀನಿವಾಸ ಬಹುದ್ದೂರ್, ಡಾ. ವಾಮನರಾವ್ ಬೇಕಲ್, ಜೆ. ಪಿ. ಅರಸ್, ಕವಿ ಜಯಪ್ಪ ಹೊನ್ನಾಳಿ, ಸೀತಾಲಕ್ಷ್ಮೀ ವರ್ಮಾ, ಸಂಧ್ಯಾರಾಣಿ ಟೀಚರ್, ವಸಂತ ಕೆರೆಮನೆ ಇತರರು ಉಪಸ್ಥಿತರಿದ್ದರು.

ಬೆಂಗಳೂರು: ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಸಂಘಟಿತ ಪ್ರಯತ್ನಗಳು ಅಗತ್ಯವಾಗಿವೆ ಎಂದು ಸಮಾಜ ಸೇವಕರಾದ ಶ್ರೀನಿವಾಸ ಬಹುದ್ದೂರ್ ಅವರು ಹೇಳಿದರು.ಕಾಸರಗೋಡು ದಸರಾ ಅಂಗವಾಗಿ ಗಡಿನಾಡು ಕಾಸರಗೋಡಿನ ಪಾಂಗೋಡಿನಲ್ಲಿ ಕನ್ನಡ ಭವನದ ವತಿಯಿಂದ ನಡೆದ ಕನ್ನಡ ಸಾಂಸ್ಕೃತಿಕೋತ್ಸವ ಮತ್ತು ಕವಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಡಿನಾಡಿನಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡಪರ ಸಂಘ-ಸಂಸ್ಥೆಗಳು ಹಾಗೂ ಸಾಹಿತ್ಯಿಕ ವೇದಿಕೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.

Dailyhunt
Disclaimer: This content has not been generated, created or edited by Dailyhunt. Publisher: eesanje