Dailyhunt
ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಗೆ ಆಸ್ಕರ್ ಪ್ರಶಸ್ತಿ

ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಗೆ ಆಸ್ಕರ್ ಪ್ರಶಸ್ತಿ

ಈ ಸಂಜೆ 4 years ago

ಲಾಸ್‍ಏಂಜಲಿಸ್,ಏ.26-ಖ್ಯಾತ ಹಾಲಿವುಡ್ ನಟ ಅಂಥೋಣಿ ಹಾಪ್ಕಿನ್ಸ್ ಈ ಭಾರಿಯ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.ದಾ ಫಾದರ್ ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಹಾಪ್ಕಿನ್ಸ್ ಅವರಿಗೆ ಆಸ್ಕರ್ ಉತ್ತಮ ನಟ ಪ್ರಶಸ್ತಿ ಒಲಿದುಬಂದಿದೆ.

ಮಾ ರೈನ್ಸಿಸ್ ಬ್ಲಾಕ್ ಬಾಟಮ್ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದ ದಿವಂಗತ ಚಾದ್‍ವಿಕ್ ಬೋಸ್‍ಮನ್ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸುವ ಸಾಧ್ಯತೆಗಳಿತ್ತು ಎಂದೇ ಭಾವಿಸಲಾಗಿತ್ತು.ಆದರೆ, ಈ ಎಲ್ಲಾ ಊಹಾಪೋಹಗಳನ್ನು ಮೀರಿ ಹಾಪ್ಕಿನ್ಸ್ ಅವರು ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಚಾದ್‍ವಿಕ್ ಬೋಸ್‍ಮನ್ ಅವರು ಕಳೆದ ವರ್ಷ ಕ್ಯಾನ್ಸರ್‍ಗೆ ಬಲಿಯಾಗಿದ್ದರು. ಅವರಿಗೆ ಈ ಭಾರಿಯ ಆಸ್ಕರ್ ಸಿಗಬಹುದೆಂದು ಸಿನಿ ಪಂಡಿತರು ಅಭಿಪ್ರಾಯಪಟ್ಟಿದ್ದರು.

ಇವರ ಜೊತೆಗೆ ಸೌಂಡ್ ಆಫ್ ಮೆಟಲ್ ಚಿತ್ರದ ನಟನೆಗಾಗಿ ರೀಜ್ ಅಹಮದ್ ಅವರು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದರು.

ಅದೇ ರೀತಿ ಫ್ರಾನ್ಸ್‍ನ ಖ್ಯಾತ ನಟಿ ಮ್ಯಾಕ್ ಡೋರ್ಮಾಂಡ್ ಅವರು ನೋ ಮ್ಯಾಡ್‍ಲ್ಯಾಂಡ್ ಚಿತ್ರದ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje