H.D. Deve Gowda completes 30 years as Prime Minister on May 31
ಬೆಂಗಳೂರು, ಮೇ 28- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿ ಮೇ 31ಕ್ಕೆ 30 ವರ್ಷಗಳು ಪೂರ್ಣಗೊಳ್ಳುತ್ತವೆ. ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ದೇವೇಗೌಡರು ಪಾತ್ರರಾಗಿದ್ದಾರೆ.
1996ರ ಜೂನ್ ಒಂದರಂದು ಭಾರತದ 11 ಪ್ರಧಾನ ಮಂತ್ರಿಯಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕರಿಸಿ 11 ತಿಂಗಳುಗಳ ಕಾಲ ಕಳಂಕ ರಹಿತ ಆಡಳಿತ ನಡೆಸಿದ್ದರು.
ಕಾಂಗ್ರೆಸ್ ಪಕ್ಷವು ತೃತೀಯ ರಂಗಕ್ಕೆ ನೀಡಿದ್ದ ಬೆಂಬಲ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ಬಹುಮತ ಸಾಬೀತಾಗದೇ 1997ರ ಏಪ್ರಿಲ್ 21ರಂದು ಅವರು ಪ್ರಧಾನಿ ಹುದ್ದೆಯಿಂದ ನಿರ್ಗಮಿಸಿದರು.
ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವೇಗೌಡರಿಗೆ ತಾವು ಬಯಸದೇ ಇದ್ದರೂ ತೃತೀಯ ರಂಗದ ನಾಯಕತ್ವ ವಹಿಸಲು ಮತ್ತು ಪ್ರಧಾನಮಂತ್ರಿ ಗದ್ದುಗೆಗೇರುವ ಅವಕಾಶ 1996ರ ಮೇನಲ್ಲಿ ಒದಗಿ ಬಂದಿತು. ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು 1996ರ ಮೇ 30ರಂದು ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ದೇವೇಗೌಡರು ರಾಜೀನಾಮೆ ನೀಡಿದ್ದರು.
ಪ್ರಧಾನಿಯಾಗಿ ಜಾರಿಗೆ ತಂದ ತ್ವರಿತ ನೀರಾವರಿ ಯೋಜನೆ ರೈತ ಸಮುದಾಯಕ್ಕೆ ದೊರೆತ ಬಹು ದೊಡ್ಡ ಕೊಡುಗೆಯಾಯಿತು. ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಮಹಿಳಾ ಮೀಸಲಾತಿಯೂ ರಾಷ್ಟ್ರಕ್ಕೆ ಮಾದರಿಯಾಯಿತು. ಶಾಸನ ಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಪ್ರಯತ್ನಕ್ಕೆ ನಾಂದಿ ಹಾಡಿತು. ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿಯಾಗಿ ಮಾಡಿರುವ ಹತ್ತು ಹಲವು ಕಾರ್ಯಗಳು ಜನರ ಮನಸ್ಸಿನಲ್ಲಿವೆ ಎಂದರೆ ತಪ್ಪಾಗಲಾರದು.
ಸಕ್ರಿಯ ರಾಜಕಾರಣಕ್ಕೆ:
ಹೆಚ್.ಡಿ.ದೇವೇಗೌಡರು 1933ರ ಮೇ 18ರಂದು ಕರ್ನಾಟಕದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿ ಗ್ರಾಮದಲ್ಲಿ ಜನಿಸಿದರು. ಸಿವಿಲ್ ಎಂಜಿನಿಯರಿಂಗ್ ಡಿಪ್ಲೊಮಾ ಪಡೆದಿರುವ ದೇವೇಗೌಡರು 20 ವರ್ಷದ ಯುವಕರಾಗಿದ್ದಾಗಲೇ ಸಕ್ರಿಯ ರಾಜಕಾರಣಕ್ಕೆ ಧುಮುಕಿದರು. 1953ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರಿ 1962ರ ತನಕ ಆ ಪಕ್ಷದಲ್ಲೇ ಸದಸ್ಯರಾಗಿ ಉಳಿದಿದ್ದರು.
ಮಧ್ಯಮ ವರ್ಗದ ಕೃಷಿಕ ಕುಟುಂಬದ ಹಿನ್ನೆಲೆಯಿಂದ ಬಂದ ಗೌಡರಿಗೆ ರೈತನ ಬದುಕಿನ ಕಷ್ಟಗಳು ಚೆನ್ನಾಗಿ ಅರ್ಥವಾಗಿದ್ದವು. ಯುವ ಗೌಡರು, ಬಡ ರೈತರು, ಸೌಲಭ್ಯ ವಂಚಿತರು ಹಾಗೂ ಸಮಾಜದ ದುರ್ಬಲ ವರ್ಗಗಳ ಒಳಿತಿಗಾಗಿ ತಾವೊಬ್ಬ ಹೋರಾಟಗಾರನಾಗುವುದಾಗಿ ಘೋಷಿಸಿದ್ದರು.
ಪ್ರಜಾಸತ್ತಾತಕ ವ್ಯವಸ್ಥೆಯ ಕೆಳ ಸ್ತರದಿಂದ ಆರಂಭಿಸಿದ ಅವರ ಹೋರಾಟದ ಬದುಕು ರಾಜಕೀಯ ರಂಗದಲ್ಲಿ ಹಂತ ಹಂತವಾಗಿ ಮೇಲೇರಿತು. ಆಂಜನೇಯ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಬಡಜನರ ಸೇವೆಯಲ್ಲಿ ಜನಪ್ರಿಯರಾಗಿದ್ದರು. ನಂತರ ಗೌಡರು ಹೊಳೆನರಸೀಪುರ ತಾಲ್ಲೂಕು ಅಭಿವೃದ್ಧಿ ಮಂಡಳಿಯ ಸದಸ್ಯರಾದರು.
ಸಮಾಜದಲ್ಲಿನ ಅಸಮಾನತೆಗಳನ್ನು ಸರಿಪಡಿಸುವ ಆಶಯದೊಂದಿಗೆ ಸದಾ ಆದರ್ಶ ರಾಜ್ಯವೊಂದರ ಕನಸು ಕಾಣುತ್ತಿದ್ದರು. ಕೇವಲ 28 ವರ್ಷಗಳಿದ್ದಾಗ ಯುವ ದೇವೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು ಹಾಗೂ 1962ರಲ್ಲಿ ಕರ್ನಾಟಕ ವಿಧಾನಸಭೆ ಸದಸ್ಯರಾಗಿ ಆಯ್ಕೆಯಾದರು. ವಿಧಾನಸಭೆಯಲ್ಲಿ ಪರಿಣಾಮಕಾರಿ ಭಾಷಣಗಾರರಾಗಿ ಹಿರಿಯರೂ ಸೇರಿದಂತೆ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹೊಳೆನರಸೀಪುರ ಕ್ಷೇತ್ರದಿಂದ ಸತತ ಮೂರು ಬಾರಿ ವಿಧಾನಸಭೆಗೆ ಚುನಾಯಿತರಾಗಿದ್ದರು.
ವಿರೋಧ ಪಕ್ಷದ ನಾಯಕ:
ಮಾರ್ಚ್ 1972 ರಿಂದ ಮಾರ್ಚ್ 1976 ಹಾಗೂ ನವೆಂಬರ್ 1976 ರಿಂದ ಡಿಸೆಂಬರ್ 1977ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿ ಗೌಡರು ಮೆಚ್ಚುಗೆಗೆ ಪಾತ್ರರಾದರು. ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ ಅನೇಕ ನೀರಾವರಿ ಯೋಜನೆಗಳು ಅನುಷ್ಠಾನಗೊಂಡವು. ನೀರಾವರಿಗೆ ಸಾಕಷ್ಟು ಹಣಕಾಸು ಮಂಜೂರಾತಿ ನೀಡದಿದ್ದನ್ನು ಪ್ರತಿಭಟಿಸಿ 1987ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಸ್ವಾತಂತ್ರ್ಯ ಮತ್ತು ಸಮಾನತೆಯ ಹರಿಕಾರರಾದ ಅವರು 1975-76ರಲ್ಲಿ ಕೇಂದ್ರ ಸರ್ಕಾರದ ಮೇಲೆ ಆಕ್ರೋಶಗೊಂಡರು ಹಾಗೂ ತುರ್ತು ಪರಿಸ್ಥಿತಿಯ ದಿನಗಳಲ್ಲಿ ಜೈಲು ವಾಸ ಅನುಭವಿಸಿದರು. ದೇವೇಗೌಡರು ಈ ಅವಧಿಯಲ್ಲಿ ಹೆಚ್ಚು ಕಾಲ ಓದುವುದರಲ್ಲಿ ತೊಡಗಿ ತಮ ಜ್ಞಾನವನ್ನು ಇನ್ನಷ್ಟು ಸಮೃದ್ಧಗೊಳಿಸಿದರು. ನಿರಂತರ ಓದುವಿಕೆ ಹಾಗೂ ಆ ಅವಧಿಯಲ್ಲಿ ಕಾರಾಗೃಹದಲ್ಲಿದ್ದ ಭಾರತೀಯ ರಾಜಕಾರಣದ ಇತರ ಮುತ್ಸದ್ದಿಗಳ ಒಡನಾಟವು ಅವರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ನೆರವಾಯಿತು. ಬಂಧಮುಕ್ತರಾದ ನಂತರ ಅವರು ಸದೃಢ ವ್ಯಕ್ತಿಯಾಗಿ ಹೊರ ಹೊಮಿದರು.
ಲೋಕಸಭೆಯಲ್ಲಿ ರೈತಪರ ದನಿ:
1991ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದ ಅವರು ವಿಶೇಷವಾಗಿ ರೈತರು ಒಳಗೊಂಡಂತೆ ರಾಜ್ಯದ ಸಮಸ್ಯೆಗಳನ್ನು ಪ್ರಸ್ತಾಪಿಸುವಲ್ಲಿ ಮುಂಚೂಣಿಯಲ್ಲಿದ್ದರು. ಸಂಸತ್‌ನಲ್ಲಿ ರೈತರ ಬವಣೆ ಮತ್ತು ಸಂಕಷ್ಟಗಳ ಮೇಲೆ ಬೆಳಕು ಚೆಲ್ಲಿ ಕೃಷಿಕರ ದನಿಯಾದರು. ಸಂಸತ್ ಮತ್ತು ಅದರ ಸಂಸ್ಥೆಗಳ ಘನತೆ ಮತ್ತು ಗೌರವಗಳನ್ನು ಎತ್ತಿ ಹಿಡಿಯುವಲ್ಲಿಯೂ ಸಹ ಗೌಡರು ಹೆಸರು ಮಾಡಿದರು.
ಕರ್ನಾಟಕದ 14ನೇ ಮುಖ್ಯಮಂತ್ರಿ:
ದೇವೇಗೌಡರು 1994ರಲ್ಲಿ ರಾಜ್ಯ ಜನತಾದಳದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.1994ರಲ್ಲಿ ರಾಜ್ಯದಲ್ಲಿ ಜನತಾದಳವು ಅಧಿಕಾರಕ್ಕೆ ಬರುವಲ್ಲಿ ಗೌಡರು ಮಹತ್ವದ ಪಾತ್ರ ವಹಿಸಿದ್ದರು. 1994ರ ಡಿಸೆಂಬರ್ 11ರಂದು ಗೌಡರು ಜನತಾದಳ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿ ಕರ್ನಾಟಕದ 14ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದಿಂದ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.
ತಮ ಸಕ್ರಿಯ ರಾಜಕಾರಣ ಮತ್ತು ಬೇರುಮಟ್ಟದ ಭದ್ರ ಬುನಾದಿಯಿಂದಾಗಿ ರಾಜ್ಯ ಎದುರಿಸುತ್ತಿದ್ದ ಅನೇಕ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ನೇರವಾಗಿ ಕೈಗೆತ್ತಿಕೊಂಡರು. ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದಕ್ಕೆ ಗೌಡರು ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾದರು.
ವಿದೇಶಿ ಬಂಡವಾಳ :
1995ರಲ್ಲಿ ದೇವೇಗೌಡರು ಸ್ವಿಟ್ಜರ್ಲೆಂಡ್‌ಗೆ ಪ್ರವಾಸ ಕೈಗೊಂಡು, ಅಂತಾರಾಷ್ಟ್ರೀಯ ಆರ್ಥಿಕ ತಜ್ಞರ ಸಮಾವೇಶದಲ್ಲಿ ಪಾಲ್ಗೊಂಡರು. ಯೂರೋಪ್ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಗೆ ಇವರು ಕೈಗೊಂಡ ಪ್ರವಾಸವು ಓರ್ವ ಸಮರ್ಪಣಾ ಮನೋಭಾವದ ರಾಜಕಾರಣಿಯ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಅವರ ಸಿಂಗಾಪುರ ಪ್ರವಾಸವು ರಾಜ್ಯಕ್ಕೆ ತುಂಬಾ ಅಗತ್ಯವಾದ ವಿದೇಶಿ ಬಂಡವಾಳವನ್ನು ತರುವಲ್ಲಿ ಯಶಸ್ವಿಯಾಗಿದ್ದು, ಅದು ಅವರ ವ್ಯಾವಹಾರಿಕ ಜಾಣೆಯನ್ನು ಸಾಬೀತುಪಡಿಸುತ್ತದೆ.
1989ರಲ್ಲಿ ದೇವೇಗೌಡರು ಸ್ಪರ್ಧಿಸಿದ ಎರಡು ಕ್ಷೇತ್ರಗಳಲ್ಲಿ ಪರಾಭವಗೊಂಡು ತಮ ರಾಜಕೀಯ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ಸೋಲಿನ ರುಚಿ ಕಂಡರು. ಸದಾ ಚಟುವಟಿಕೆಯಿಂದ ಇರುತ್ತಿದ್ದ ಅವರು ಶಾಸನಸಭೆಯ ಗ್ರಂಥಾಲಯದಲ್ಲಿ ಪುಸ್ತಕಗಳು ಮತ್ತು ನಿಯತಕಾಲಿಕಗಳನ್ನು ತಿರುವಿ ಹಾಕುತ್ತಿದ್ದರು.1967ರಲ್ಲಿ ನಡೆದ ಮರು ಚುನಾವಣೆ ಅವರಿಗೆ ಹೆಚ್ಚು ವಿಶ್ವಾಸ ನೀಡಿತು ಹಾಗೂ 1969ರಲ್ಲಿ ಕಾಂಗ್ರೆಸ್ ಪಕ್ಷವು ಇಬ್ಭಾಗವಾದಾಗ, ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್ (ಒ) ಪಕ್ಷವನ್ನು ಸೇರಿದರು. ಆ ಪಕ್ಷ ಕರ್ನಾಟಕದಲ್ಲಿ ಅಧಿಕಾರದಲ್ಲಿತ್ತು. ಆದರೆ, ಗೌಡರು 1971ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ (ಒ) ಪಕ್ಷದ ಗೆಲುವಿನ ಬಳಿಕ ಇಂದಿರಾಗಾಂಧಿ ಅವರ ಅಲೆಯನ್ನು ಮೊಟಕುಗೊಳಿಸುವ ಪ್ರತಿಪಕ್ಷದ ಓರ್ವ ನಾಯಕರಾಗಿ ಹೊರಹೊಮಿದರು. 93 ವಸಂತಗಳನ್ನು ಪೂರ್ಣಗೊಳಿಸಿ 94ನೇ ವಸಂತಕ್ಕೆ ಪಾದಾರ್ಪಣೆ ಮಾಡಿರುವ ಅವರು, ಈಗಲೂ ರಾಜಕೀಯದಿಂದ ದೂರ ಸರಿದಿಲ್ಲ. ಪಕ್ಷ ಸಂಘಟನೆಯ ನಿಟ್ಟಿನಲ್ಲಿ ಕಾರ್ಯಕರ್
ಬೆಂಗಳೂರು, ಮೇ 28- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿಯಾಗಿ ಮೇ 31ಕ್ಕೆ 30 ವರ್ಷಗಳು ಪೂರ್ಣಗೊಳ್ಳುತ್ತವೆ. ಪ್ರಧಾನಿ ಹುದ್ದೆ ಅಲಂಕರಿಸಿದ ಏಕೈಕ ಕನ್ನಡಿಗ ಎಂಬ ಹೆಗ್ಗಳಿಕೆಗೆ ದೇವೇಗೌಡರು ಪಾತ್ರರಾಗಿದ್ದಾರೆ. 1996ರ ಜೂನ್ ಒಂದರಂದು ಭಾರತದ 11 ಪ್ರಧಾನ ಮಂತ್ರಿಯಾಗಿ ದೇವೇಗೌಡರು ಪ್ರಮಾಣ ವಚನ ಸ್ವೀಕರಿಸಿ 11 ತಿಂಗಳುಗಳ ಕಾಲ ಕಳಂಕ ರಹಿತ ಆಡಳಿತ ನಡೆಸಿದ್ದರು.

