Dailyhunt
ಇಂದು ವಿಶ್ವ ಫಿಜಿಯೋಥೆರಪಿ ದಿನ

ಇಂದು ವಿಶ್ವ ಫಿಜಿಯೋಥೆರಪಿ ದಿನ

ಈ ಸಂಜೆ 4 years ago

ಬೆಂಗಳೂರು, ಸೆ.8- ಪ್ರತಿ ವರ್ಷ ಸೆ.8ರಂದು ಆಯೋಜಿಸಲಾಗುವ ವಿಶ್ವ ಪಿಸಿಯೋಥೆರಪಿ (ಭೌತಚಿಕಿತ್ಸೆ) ದಿನದ ಅಂಗವಾಗಿ ಕೋವಿಡ್ 19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವವರು ಅನುಭವಿಸುತ್ತಿರುವ ಕುತ್ತಿಗೆ, ಬೆನ್ನು ಮತ್ತು ಕಣ್ಣುಗಳ ಮೇಲೆ ಅತಿಯಾದ ಒತ್ತಡ ಮತ್ತು ಶ್ರಮ ಕುರಿತ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅವುಗಳನ್ನು ತಪ್ಪಿಸುವುದಕ್ಕಾಗಿ ಕುಳಿತುಕೊಳ್ಳುವ ಭಂಗಿಯ ದಕ್ಷತಾಶಾಸ್ತ್ರ ಕುರಿತಂತೆ ಅನುಸರಿಸುವ ಅಗತ್ಯವಿರುವ ಸಲಹೆಗಳನ್ನು ಸ್ಪೆಷಲಿಸ್ಟ್ ಆಸ್ಪತ್ರೆ ಬಿಡುಗಡೆ ಮಾಡಿದೆ.

ಈಗ ಹರಡಿರುವ ಸಾಂಕ್ರಾಮಿಕ ಅನೇಕ ವೃತ್ತಿಪರರಿಗೆ ಮನೆಯಿಂದಲೇ ಕೆಲಸ ಮಾಡ ಬೇಕಾದ ಒತ್ತಡಕ್ಕೆ ದೂಡಿದೆ. ಅನೇಕ ಪ್ರಕರಣಗಳಲ್ಲಿ ಮನೆಯಲ್ಲಿನ ವಾತಾವರಣ ಕಚೇರಿಯ ಪರಿಸರದೊಂದಿಗೆ ಹೊಂದಿಕೊಳ್ಳುವುದಿಲ್ಲ. ಇದರ ಫಲಿತಾಂಶವಾಗಿ 20ರಿಂದ 45 ವರ್ಷ ವಯಸ್ಸಿನವರಲ್ಲಿ ಕುತ್ತಿಗೆ ಮತ್ತು ಬೆನ್ನು ನೋವಿನಿಂದ ಬಳಲುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ನಾವು ಕಾಣುತ್ತಿದ್ದೇವೆ.

ಮನೆಯಿಂದ ಕೆಲಸ ಮಾಡುವ ಸಂಸ್ಕøತಿಯು ನಾವು ಕೆಲಸ ಮಾಡುವ ರೀತಿಯನ್ನು ಬದಲಾಯಿಸಿದೆ. ಇದರಿಂದ ಸೂಕ್ತವಲ್ಲದ ಭಂಗಿಯಲ್ಲಿ ಹೆಚ್ಚಿನ ಗಂಟೆಗಳವರೆಗೆ ಈ ವೃತ್ತಿಪರರು ಕುಳಿತು ಕೆಲಸ ಮಾಡುವುದು ಹೆಚ್ಚಾಗಿದೆ. ನಿಮ್ಮ ಭಂಗಿಯನ್ನು ನಿಗದಿತ ಅವಧಿಗೊಮ್ಮೆ ಪರೀಕ್ಷಿಸುವುದು ಬಹಳ ಮುಖ್ಯವಾಗಿರುತ್ತದೆ.

ದಕ್ಷತಾಶಾಸ್ತ್ರಕ್ಕೆ ತಕ್ಕದ್ದಲ್ಲದ ಹಾಗೂ ತಪ್ಪಾದ ಭಂಗಿ ಸಂಬಂಧಿತ ಗಾಯಗಳನ್ನು ತಪ್ಪಿಸಲು ಕೆಲವು ಸಲಹೆಗಳು ಇಲ್ಲಿವೆ. ಇವುಗಳಲ್ಲಿ ಲ್ಯಾಪ್‍ಟಾಪನ್ನು ಕಣ್ಣಿನ ಎತ್ತರಕ್ಕೆ ಸರಿಯಾಗಿರುವಂತೆ ಇಡುವುದು ಬೆನ್ನಿಗೆ ಬೆಂಬಲ ಲಭಿಸಲು ಕುರ್ಚಿಯ ಮೇಲೆ ಗಟ್ಟಿಯಾದ ದಿಂಬು ಇಟ್ಟುಕೊಳ್ಳುವುದು ಮತು ಸರಳವಾದ ಸೆಚಿಂಗ್ ವ್ಯಾಯಾಮಗಳು ಸೇರಿವೆ. ಭುಜಗಳು ಆರಾಮವಾಗಿರಬೇಕು, ಕೈಗಳ ಮೇಲ್ಭಾಗಗಳು ದೇಹದ ಎರಡೂ ಭಾಗದಲ್ಲಿ ಸಾಮಾನ್ಯ ರೀತಿಯಲ್ಲಿ ನೇತಾಡುವಂತೆ ಇರಬೇಕು.

ಮೊಣಕೈಗಳು ದೇಹಕ್ಕೆ ಹತ್ತಿರವಾಗಿರಬೇಕು. 90ರಿಂದ 120 ಡಿಗ್ರಿಗಳ ಕೋನದಲ್ಲಿ ಬಾಗಿರಬೇಕು. ಪಾದಗಳು ಸಂಪೂರ್ಣವಾಗಿ ನೆಲದ ಅಥವಾ ಫುಟ್‍ರೆಸ್ಟ್ ಮೇಲಿರಬೇಕು. ಮಂಡಿಗಳು ಸುಮಾರು ಸೊಂಟದ ಎತ್ತರದಲ್ಲಿಯೇ ಇರಬೇಕು. ಕಣ್ಣುಗಳ ಮೇಲೆ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸೂಕ್ತ ರೀತಿಯ ಬೆಳಕಿನ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತದೆ.

ನಿಮ್ಮ ಕುತ್ತಿಗೆ ಅಥವಾ ಬೆನ್ನುಗಳಲ್ಲಿ ಒಂದು ವಾರಕ್ಕೂ ಹೆಚ್ಚಿನ ಅವಧಿಗೆ ನೋವು ಕಾಡಿದಲ್ಲಿ ಅಥವಾ ಚಲನೆಯ ನಷ್ಟ ಅಥವಾ ಚಲನೆಯಲ್ಲಿ ತೊಂದರೆ ಆಗುವ ಅನುಭವವಾಗುವುದು ಅಥವಾ ಸಂವೇದನೆಗಳಲ್ಲಿ ಬದಲಾವಣೆ ಕಂಡು ಬಂದಲ್ಲಿ ವೈದ್ಯರನ್ನು ಭೇಟಿಯಾಗುವುದು ಮುಖ್ಯ. ಅಲ್ಲದೇ ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಜೀವನದ ಗುಣಮಟ್ಟದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಬಹುದು.

ಲ್ಯಾಪ್‍ಟಾಪ್ ಅನ್ನು ತೊಡೆಯ ಮೇಲೆ, ಹೆಚ್ಚು ಎತ್ತರ ಅಥವಾ ಹೆಚ್ಚು ಕೆಳಮಟ್ಟದ ಸ್ಥಳದಲ್ಲೂ ಇಟ್ಟುಕೊಳ್ಳಬಾರದು. ವಿಕಾರವಾದ ಭಂಗಿಗಳು ಮಾಂಸಖಂಡಗಳ ಸೆಳೆತ. ನರಗಳು ಸೆಟೆದುಕೊಳ್ಳುವುದು ಮತ್ತು ಅತಿಯಾದ ನೋವು ಉಂಟಾಗುವುದಕ್ಕೆ ದಾರಿಯಾಗಬಹುದು ಎನ್ನುತ್ತಾರೆ ಸ್ಪೆಷಲಿಸ್ಟ್ ಹಾಸ್ಪಿಟಲ್ ಪಿಸಿಯೋಥೆರಪಿ ವಿಭಾಗದ ಮುಖ್ಯಸ್ಥೆ ಡಾ. ಹರಿಪ್ರಿಯ.

Dailyhunt
Disclaimer: This content has not been generated, created or edited by Dailyhunt. Publisher: eesanje