Dailyhunt Logo
  • Light mode
    Follow system
    Dark mode
    • Play Story
    • App Story
ಇರಾನ್‌ ಮೇಲೆ ಮತ್ತೊಂದು ದಾಳಿ ನಡೆಸಿದ ಅಮೆರಿಕ

ಇರಾನ್‌ ಮೇಲೆ ಮತ್ತೊಂದು ದಾಳಿ ನಡೆಸಿದ ಅಮೆರಿಕ

ಈ ಸಂಜೆ 57 mins ago

US strikes Iran targets for second time in three days

ವಾಷಿಂಗ್ಟನ್‌, ಮೇ 28 (ಎಪಿ): ಅಮೆರಿಕ ಪಡೆಗಳು ಇರಾನ್‌ನ ಕೆಲ ಭಾಗ ಗುರಿಯಾಗಿಸಿ ದಾಳಿ ನಡೆಸಿವೆ.ಅಮೆರಿಕ ಅಧಿಕಾರಿಗಳು ಇದನ್ನು ಖಚಿತಗೊಳಿಸಿದೆ ಆದರೆ ಇದಕ್ಕೂ ಮೊದಲು ಇರಾನ್‌ ದಾಳಿ ಮಾಡಲು ಬಂದ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ.

ಅಧಿಕಾರಿಗಳ ಪ್ರಕಾರ, ಅಮೆರಿಕ ಸೆಂಟ್ರಲ್‌ ಕಮಾಂಡ್‌ ಪಡೆಗಳು ಹೋರ್ಮುಜ್‌ ಜಲಸಂಧಿಯ ಸುತ್ತಮುತ್ತ ಅಪಾಯ ಉಂಟುಮಾಡುತ್ತಿದ್ದ ಇರಾನ್‌ನ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಿವೆ.

ಇದೇ ವೇಳೆ, ಐದನೇ ಡ್ರೋನ್‌ ಅನ್ನು ಹಾರಿಸಲು ಸಿದ್ಧವಾಗಿದ್ದ ಇರಾನ್‌ನ ಭೂ ನಿಯಂತ್ರಣ ಕೇಂದ್ರದ ಮೇಲೂ ಅಮೆರಿಕ ಪಡೆಗಳು ದಾಳಿ ನಡೆಸಿವೆ. ಈ ಕೇಂದ್ರವು ಬಂದರ್‌ ಅಬ್ಬಾಸ್‌‍ ಪ್ರದೇಶದಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇರಾನ್‌ ಈಗ ದುರ್ಬಲ ಸ್ಥಿತಿಯಲ್ಲಿ ಮಾತುಕತೆ ನಡೆಸುತ್ತಿದೆ ಎಂದು ಟ್ರಂಪ್‌ ಹೇಳಿದ ಕೆಲವೇ ಗಂಟೆಗಳ ಬಳಿಕ ನಡೆದಿವೆ. ಸುಮಾರು ಮೂರು ತಿಂಗಳಿನಿಂದ ಮುಂದುವರಿದಿರುವ ಈ ಸಂಘರ್ಷ ಜಾಗತಿಕ ಆರ್ಥಿಕತೆಯಲ್ಲೂ ಆತಂಕ ಮೂಡಿಸಿದೆ.

ಕ್ಯಾಬಿನೆಟ್‌ ಸಭೆಯ ಆರಂಭದಲ್ಲಿ ಮಾತನಾಡಿದ ಟ್ರಂಪ್‌‍, ಒಪ್ಪಂದ ಶೀಘ್ರದಲ್ಲೇ ಸಾಧ್ಯವಾಗಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಬಹುತೇಕ ಒಪ್ಪಂದದ ಹಂತಕ್ಕೆ ಬಂದಿವೆಎಂದೂ ಅವರು ಹೇಳಿದ್ದರು. ಆದರೆ ಮಾತುಕತೆಗಳು ಇನ್ನೂ ಅಂತಿಮ ಹಂತ ತಲುಪಿಲ್ಲ.ಹೋರ್ಮುಜ್‌ ಜಲಸಂಧಿಯನ್ನು ಮರುತೆರೆಯುವ ಹಾಗೂ ಇರಾನ್‌ನ ಅಣು ಸಾಮರ್ಥ್ಯವನ್ನು ಸಾಕಷ್ಟು ಮಟ್ಟಿಗೆ ಕುಗ್ಗಿಸಲಾಗಿದೆ ಎಂದು ಘೋಷಿಸಬಹುದಾದ ಒಪ್ಪಂದವೊಂದನ್ನು ಸಾಧಿಸುವುದು ಟ್ರಂಪ್‌ ಉದ್ದೇಶವಾಗಿದೆ. ರಿಪಬ್ಲಿಕನ್‌ ಪಕ್ಷಕ್ಕೆ ರಾಜಕೀಯವಾಗಿ ಅಪ್ರಿಯವಾಗಿರುವ ಈ ಸಂಘರ್ಷವನ್ನು ಅಂತ್ಯಗೊಳಿಸಲು ಅವರು ಬಯಸುತ್ತಿದ್ದಾರೆ.

ಆದರೆ ಪ್ರಸ್ತುತ ರೂಪುಗೊಳ್ಳುತ್ತಿರುವ ಒಪ್ಪಂದದಲ್ಲಿ ಹಲವು ಪ್ರಮುಖ ವಿಷಯಗಳನ್ನು ಮುಂದಿನ ಹಂತಕ್ಕೆ ಮುಂದೂಡಲಾಗಿದೆ. ಇದರಿಂದ ಇರಾನ್‌ನ ಕಠಿಣ ನಿಲುವಿನ ನಾಯಕರು ದುರ್ಬಲಗೊಂಡಿದ್ದರೂ ಮತ್ತಷ್ಟು ಧೈರ್ಯಗೊಂಡು ಹೊರಹೊಮಬಹುದು ಎಂಬ ಟೀಕೆಗಳು ಕೇಳಿಬರುತ್ತಿವೆ. ಟ್ರಂಪ್‌ ಅವರ ಸ್ವಂತ ಬೆಂಬಲಿಗರಲ್ಲಿಯೂ ಅಸಮಾಧಾನ ವ್ಯಕ್ತವಾಗುತ್ತಿದೆ.

ಇದೀಗ ಅಮೆರಿಕ ಕಾಂಗ್ರೆಸ್‌‍ ನಿಯಂತ್ರಣ ನಿರ್ಧರಿಸುವ ಮಧ್ಯಂತರ ಚುನಾವಣೆಗಳೂ ಸಮೀಪಿಸುತ್ತಿವೆ. ಇಂಧನ ಬೆಲೆ ಏರಿಕೆ ಮತ್ತು ಜೀವನ ವೆಚ್ಚ ಹೆಚ್ಚಳ ಅಮೆರಿಕ ಮತದಾರರ ಮನೋಭಾವವನ್ನು ದುರ್ಬಲಗೊಳಿಸುತ್ತಿದೆ ಎಂಬ ಆತಂಕ ರಿಪಬ್ಲಿಕನ್‌ ಪಕ್ಷದಲ್ಲಿದೆ.ಆದರೆ ಮಧ್ಯಂತರ ಚುನಾವಣೆಗಳು ತನ್ನ ಇರಾನ್‌ ನೀತಿಯನ್ನು ಪ್ರಭಾವಿಸುವುದಿಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದರು.

ನನಗೆ ಮಧ್ಯಂತರ ಚುನಾವಣೆಗಳ ಬಗ್ಗೆ ಚಿಂತೆಯೇ ಇಲ್ಲಎಂದು ಟ್ರಂಪ್‌ ಹೇಳಿದರು.ಇನ್ನೂ ಕೆಲಸ ಬಾಕಿಯಿದೆ ಎಂದು ಒಪ್ಪಿಕೊಂಡರೂ, ಅಂತಿಮವಾಗಿ ಒಪ್ಪಂದ ಸಾಧ್ಯವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಈ ಮಾತುಕತೆಗಳು ಇನ್ನಷ್ಟು ಸಂಕೀರ್ಣವಾಗಲು ಕಾರಣವಾಗಿದ್ದು,ಅಮೆರಿಕ ಪಡೆಗಳು ದಕ್ಷಿಣ ಇರಾನ್‌ನ ಕ್ಷಿಪಣಿ ಉಡಾವಣೆ ಕೇಂದ್ರಗಳು ಮತ್ತು ಸಮುದ್ರದಲ್ಲಿ ಮೈನ್‌ ಅಳವಡಿಸುತ್ತಿದ್ದ ದೋಣಿಗಳ ಮೇಲೆ ನಡೆಸಿದ ರಕ್ಷಣಾತಕ ದಾಳಿಗಳು ಎಂದು ಪೆಂಟಗನ್‌ ಹೇಳಿದೆ.ಬುಧವಾರದ ಹೊಸ ದಾಳಿಗಳು ಮಾತುಕತೆಗಳಿಗೆ ಮತ್ತಷ್ಟು ಅಡಚಣೆ ಉಂಟುಮಾಡುವ ಸಾಧ್ಯತೆ ಇದೆ.ಟ್ರಂಪ್‌ ಅವರ ಕೆಲವು ಬೆಂಬಲಿಗರೂ ಈ ಬೆಳವಣಿಗೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ವಾಷಿಂಗ್ಟನ್‌, ಮೇ 28 (ಎಪಿ): ಅಮೆರಿಕ ಪಡೆಗಳು ಇರಾನ್‌ನ ಕೆಲ ಭಾಗ ಗುರಿಯಾಗಿಸಿ ದಾಳಿ ನಡೆಸಿವೆ.ಅಮೆರಿಕ ಅಧಿಕಾರಿಗಳು ಇದನ್ನು ಖಚಿತಗೊಳಿಸಿದೆ ಆದರೆ ಇದಕ್ಕೂ ಮೊದಲು ಇರಾನ್‌ ದಾಳಿ ಮಾಡಲು ಬಂದ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಹೇಳಿದೆ. ಅಧಿಕಾರಿಗಳ ಪ್ರಕಾರ, ಅಮೆರಿಕ ಸೆಂಟ್ರಲ್‌ ಕಮಾಂಡ್‌ ಪಡೆಗಳು ಹೋರ್ಮುಜ್‌ ಜಲಸಂಧಿಯ ಸುತ್ತಮುತ್ತ ಅಪಾಯ ಉಂಟುಮಾಡುತ್ತಿದ್ದ ಇರಾನ್‌ನ ನಾಲ್ಕು ಡ್ರೋನ್‌ಗಳನ್ನು ಹೊಡೆದುರುಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: eesanje