Monday, 06 Sep, 5.02 pm ಈ ಸಂಜೆ

ರಾಷ್ಟ್ರೀಯ ಸುದ್ದಿ
ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್ ಕೋಣೆಯ ಗದ್ದಲ

ರಾಂಚಿ, ಸೆ. 6- ಅಧಿವೇಶನ ಆರಂಭವಾಗುವ ಮುನ್ನ, ಬಿಜೆಪಿ ಶಾಸಕರು ವಿಧಾನಸೌಧದ ಪ್ರವೇಶದ್ವಾರದ ಮೆಟ್ಟಿಲುಗಳ ಮೇಲೆ ಕುಳಿತು ಹನುಮಾನ್ ಚಾಲೀಸಾ ಮತ್ತು ಹರೇ ರಾಮ ಎಂದು ಘೋಷಣೆಗಳನ್ನು ಕೂಗಿದರು. ದಿನದ ಕಲಾಪ ಆರಂಭವಾದ ತಕ್ಷಣ, ಬಿಜೆಪಿ ಸದಸ್ಯರು ಜೈ ಶ್ರೀ ರಾಮ ಎಂದು ಘೋಷಣೆ ಕೂಗುತ್ತಾ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ.

ಜಾರ್ಖಂಡ್ ವಿಧಾನಸಭೆಯಲ್ಲಿ ನಮಾಜ್ ಕೊಠಡಿಯ ಹಂಚಿಕೆಗೆ ಸಂಬಂಧಿಸಿದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದ್ದರು. ಸ್ಪೀರ್ಕ ರವೀಂದ್ರ ನಾಥ್ ಮಹತೋ ಅವರು ಬಿಜೆಪಿ ಸದಸ್ಯರನ್ನು ನಿಮ್ಮ ಸ್ಥಾನಗಳಿಗೆ ಹಿಂತಿರುಗಿ. ನೀವು ದಯವಿಟ್ಟು ಸಭಾಪತಿಯೊಂದಿಗೆ ಸಹಕರಿಸಿ ಎಂದು ಒತ್ತಾಯಿಸಿದರು.

ಆದರೆ, ಗದ್ದಲ ಮುಂದುವರಿದಂತೆ, ಸ್ಪೀರ್ಕ ಸದನವನ್ನು ಮಧ್ಯಾಹ್ನ 12.45 ಕ್ಕೆ ಮುಂದೂಡಿದರು. ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಹೇಮಂತ್ ಸೊರೆನ್ ಮತ್ತು ಸ್ಪೀರ್ಕ ಅವರ ಪ್ರತಿಕೃತಿಗಳನ್ನು ದಹಿಸಿದರು.

ನಮಾಜ್ ಮಾಡಲು ಸ್ಪೀರ್ಕ ರೂಮ್ ಸಂಖ್ಯೆ ಟಿಡಬ್ಲ್ಯೂ 348 ಅನ್ನು ಹಂಚಿಕೆ ಮಾಡಿದ್ದಾರೆ, ವಿಧಾನಸಭಾ ಆವರಣದಲ್ಲಿ ಹನುಮಾನ್ ದೇವಸ್ಥಾನ ಮತ್ತು ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಬಿಜೆಪಿ ಬೇಡಿಕೆ ಇಟ್ಟಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top