ಬೆಂಗಳೂರು , ಜು -26 ಕನ್ನಡ ಚಿತ್ರರಂಗದ ಧ್ರುವತಾರೆ ಅಭಿನಯ ಶಾರದೆ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ರವರಿಗೆ ಗಾನ ನಮನದ ಮೂಲಕ ಅವರ "ಆತ್ಮಕ್ಕೆ ಶಾಂತಿ ಕೋರಿ ಜ್ಯೋತಿ ಬೆಳಗಿಸಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಇಂದು ಶ್ರದ್ದಾಂಜಲಿ ಅರ್ಪಿಸಲಾಯಿತು, ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ.ರಾಮಲಿಂಗಾರೆಡ್ಡಿ ರವರು ದಿವಂಗತ ಶ್ರೀಮತಿ. ಜಯಂತಿ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿ ಜಯಂತಿ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದರು,
ನಾವೆಲ್ಲರು ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಜಯಂತಿ ಅವರ ಅಭಿನಯದ ಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸುತ್ತಿದ್ದೆವು ಚಿತ್ರರಂಗಕ್ಕೆ ಹಾಗೂ ಕಲೆಗೆ ಅತ್ಯಂತ ಶಕ್ತಿಯನ್ನು ತುಂಬಿ ನೈಜ್ಯ ನಟನೆಯ ಮೂಲಕ ಇಡೀ ಚಿತ್ರರಂಗಕ್ಕೆ ಹಾಗೂ ಕಲಾರಸಿಕರಿಗೆ ನೆಚ್ಚಿನ ನಾಯಕಿಯಾಗಿದ್ದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಮನೋಹರ್, ರಾಮಚಂದ್ರಪ್ಪ, ಜಿ.ಜನಾರ್ಧನ್ ಎಂ.ಎ. ಸಲೀಮ್, ಎ. ಆನಂದ್, ಪ್ರಕಾಶ್, ಚಂದ್ರಶೇಖರ, ಪುಟ್ಟರಾಜು, ಮಹೇಶ್. ಗಣೇಶ್ ಮ್ಯೂಸಿಕ್ ನ ಹಿನ್ನೆಲೆ ಗಾಯಕರಾದ ಪ್ರವೀಣ್ ಹಾಗೂ ಅವರ ತಂಡದವರು ಹಾಗೂ ಅನೇಕ ಹಿನ್ನೆಲೆ ಗಾಯಕರು ಈ ಸಂದರ್ಭದಲ್ಲಿ ದಿವಂಗತ ಜಯಂತಿ ರವರೆಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. ಆನಂದರಾವ್ ವೃತ್ತದ ಮೌರ್ಯ ಹೋಟೆಲ್ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆಯನ್ನು ಆಯೋಜಿಸಲಾಗಿತ್ತು.

