Dailyhunt
ಕರಾಚಿಯಲ್ಲಿ 4ನೇ ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ : ಮೂವರು ಸಾವು, ಹಲವರಿಗೆ ಗಾಯ

ಕರಾಚಿಯಲ್ಲಿ 4ನೇ ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ : ಮೂವರು ಸಾವು, ಹಲವರಿಗೆ ಗಾಯ

ಈ ಸಂಜೆ 5 years ago

ಇಸ್ಲಾಮಾಬಾದ್,ಅ.21- ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸ್ಫೋಟ ಸಂಭವಿಸಿ ಮೂವರು ಮೃತಪಟ್ಟಿರುವ ಘಟನೆ ಕರಾಚಿಯಲ್ಲಿ ನಡೆದಿದೆ. ಕರಾಚಿಯಲ್ಲಿರುವ ಗುಲ್ಶನ್-ಎ-ಇಕ್ಬಾಲ್‍ನ ಕರಾಚಿ ವಿಶ್ವವಿದ್ಯಾಲಯ ಮಸ್ಕನ್ ಗೇಟ್ ಎದುರಿನ ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ಸ್ವರೂಪವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ. ಆದಾಗ್ಯೂ, ಇದು ಸಿಲಿಂಡರ್ ಸ್ಫೋಟದಿಂದ ಈ ದುರಂತ ಸಂಭವಿಸಿರಬಹುದೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಂದು ಮುಬಿನಾ ಟೌನ್ ಪೊಲೀಸ್ ಎಸ್‍ಎಚ್‍ಒ ತಿಳಿಸಿದ್ದಾರೆ.

ಸ್ಫೋಟದ ಕಾರಣವನ್ನು ಪರಿಶೀಲಿಸಲು ಬಾಂಬ್ ನಿಷ್ಕ್ರಿಯ ದಳವು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದೆ. ಘಟನೆಯಲ್ಲಿ ಸಂಭವಿಸಿರುವ ಹಾನಿಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: eesanje