Bank manager hangs himself at lodge
ಗೌರಿಬಿದನೂರು, ಆ. 13- ನಗರದ ಬೈಪಾಸ್ ರಸ್ತೆಯಲ್ಲಿರುವ ತೇಜಸ್ ಕಂರ್ಟ್ ಲಾಡ್ಜ್ ನಲ್ಲಿ ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ನೇಣಿಗೆ ಶರಣಾಗಿರುವ ಘಟನೆ ಮಂಗಳವಾರ ರಾತ್ರಿ ವೇಳೆಯಲ್ಲಿ ಜರುಗಿದೆ.ಪಿ.ಮಧುತೇಜ್(35) ನೇಣಿಗೆ ಶರಣಾಗಿರುವ ತಾಲೂಕಿನ ಡಿ.ಪಾಳ್ಯ ಎಸ್‌ಬಿಐ ವ್ಯವಸ್ಥಾಪಕ, ಮೂಲತಃ ದೊಡ್ಡಬಳ್ಳಾಪುರದ ವಾಸಿ ಎಂದು ಗುರುತಿಸಲಾಗಿದೆ.
ಮಧುತೇಜ್ ಆ. 11ರ ರಾತ್ರಿ ಸುಮಾರು 9.30ರ ವೇಳೆಗೆ ಗೌರಿಬಿದನೂರು ಬೈಪಾಸ್ ರಸ್ತೆಯಲ್ಲಿರುವ ತೇಜಸ್ ಕಂರ್ಟ್ ಲಾಡ್‌್ಜಗೆ ಆಗಮಿಸಿ ಕೊಠಡಿಯೊಂದನ್ನು ಬಾಡಿಗೆಗೆ ಪಡೆದಿದ್ದರು.
ಲಾಡ್ಜ್ ಸಿಬ್ಬಂದಿಯೊಂದಿಗೆ ಮಾತನಾಡಿದ ಅವರು, ಮರುದಿನ ಬೆಳಗ್ಗೆ ತೆರಳುವುದಾಗಿ ತಿಳಿಸಿದ್ದರು,ಆದರೆ ಮರುದಿನ ಸಂಜೆ ಸುಮಾರು 6 ಗಂಟೆಯಾದರೂ ಕೊಠಡಿಯಿಂದ ಯಾವುದೇ ಚಲನವಲನ ಅಥವಾ ಪ್ರತಿಕ್ರಿಯೆ ಕಂಡುಬರದ ಹಿನ್ನೆಲೆಯಲ್ಲಿ ಲಾಡ್ಜ್ ಸಿಬ್ಬಂದಿಗೆ ಅನುಮಾನ ಬಂದು ಹಲವು ಬಾರಿ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಹಾಗೂ ಲಾಡ್ಜ್ ಸಿಬ್ಬಂದಿ ಬಾಗಿಲು ತೆಗದು ನೋಡಿದಾಗ ಮಧುತೇಜ್ ಅವರು ಕೊಠಡಿಯಲ್ಲಿ ್ಯಾನ್ ನಿಗೆ ನೇಣು ಹಾಕಿಕೊಂಡಿರುವದು ಬೆಳಕಿಗೆ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ವೃತ್ತನಿರೀಕ್ಷಕ ವಿ.ಅಂಜನ್ ಕುಮಾರ್, ಪುರಠಾಣೆಯ ಎಸ್ಸೈ ವಿ.ವರಲಕ್ಷಿ ಮತ್ತು ಸಿಬ್ಬಂದ್ದಿ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಕೆ ಮುಂದುವರಿಸಿದ್ದಾರೆ, ಆತಹತ್ಯಗೆ ಕಾರಣ ಪೊಲೀಸರ ತನಿಕೆಯಿಂದ ಹೊರಬೀಳಬೇಕಿದೆ.