Dailyhunt Logo
  • Light mode
    Follow system
    Dark mode
    • Play Story
    • App Story
ಮಧ್ಯ ವಿಯೆಟ್ನಾಂನಲ್ಲಿ ಭೀಕರ ಚಂಡಮಾರುತ, ಭೂಕುಸಿತ : 12 ಸಾವು, 40 ಮಂದಿ ನಾಪತ್ತೆ

ಮಧ್ಯ ವಿಯೆಟ್ನಾಂನಲ್ಲಿ ಭೀಕರ ಚಂಡಮಾರುತ, ಭೂಕುಸಿತ : 12 ಸಾವು, 40 ಮಂದಿ ನಾಪತ್ತೆ

ಈ ಸಂಜೆ 5 years ago

ಹನೋಯ್, ಅ.29- ಮಧ್ಯ ವಿಯೆಟ್ನಾಂನಲ್ಲಿ ಭೀಕರ ಚಂಡಮಾರುತ ಮತ್ತು ಭೂಕುಸಿತಗಳಿಂದ 12 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನರುಕಣ್ಮರೆಯಾಗಿದ್ದಾರೆ. ವಿಯೆಟ್ನಾಂನ ಕೌಂಗ್ ನಮ್ ಪ್ರಾಂತ್ಯದಟ್ರಾ ವ್ಯಾನ್ ಗ್ರಾಮದಲ್ಲಿ ಭಾರೀ ಚಂಡಮಾರುತ ಮತ್ತು ಮಳೆಯಿಂದಾಗಿ ಬೆಟ್ಟದ ಒಂದು ಪಾಶ್ರ್ವ ಕುಸಿದು ಬಿತ್ತು. ಈ ದುರ್ಘಟನೆಯಲ್ಲಿ 12 ಮಂದಿ ಮೃತಪಟ್ಟು, 40ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವಾರ್ತಾ ಸಂಸ್ಥೆಯೊಂದು ತಿಳಿಸಿದೆ.

ಈವರೆಗೆ ಎಂಟು ಜನರ ಶವಗಳನ್ನು ಭೂಕುಸಿತದ ಭಗ್ನಾವಶೇಷಗಳಿಗೆ ಹೊರತೆಗೆಯಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ. ಟ್ರಾ ಲೆಂಗ್ ಗ್ರಾಮದಲ್ಲಿ ಭಾರೀ ಭೂಕುಸಿದಿಂದ ಅನೇಕ ಮನೆಗಳು ಭೂಸಮಾಧಿಯಾಗಿದ್ದು, ಕಣ್ಮರೆಯಾದವರಿಗಾಗಿ ರಕ್ಷಣಾ ಕಾರ್ಯಕರ್ತರು ಶೋಧ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje