Dailyhunt Logo
  • Light mode
    Follow system
    Dark mode
    • Play Story
    • App Story
'ಮೆಲೋಡಿ' ಟೋಫಿ ಗಿಫ್ಟ್ ವಿಡಿಯೋ ವೈರಲ್, ಷೇರುಮಾರುಕಟ್ಟೆಯಲ್ಲಿ ಫುಲ್ ಕನ್ಫ್ಯೂಷನ್

'ಮೆಲೋಡಿ' ಟೋಫಿ ಗಿಫ್ಟ್ ವಿಡಿಯೋ ವೈರಲ್, ಷೇರುಮಾರುಕಟ್ಟೆಯಲ್ಲಿ ಫುಲ್ ಕನ್ಫ್ಯೂಷನ್

ಈ ಸಂಜೆ 1 week ago

'Melodi' gets sweeter: PM Modi gifts a pack of Melody toffee to Meloni

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೋಡಿ' ಚಾಕೊಲೇಟ್ ಉಡುಗೊರೆಯಾಗಿ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಮೆಲೋನಿ ಅವರು ಕೂಡ ಎಕ್ಸ್ (X) ನಲ್ಲಿ ಈ ವಿಶೇಷ ಉಡುಗೊರೆಗೆ ಧನ್ಯವಾದ ತಿಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಈ ವೈರಲ್ ಟ್ರೆಂಡ್‌ನ ಪರಿಣಾಮ ಷೇರು ಮಾರುಕಟ್ಟೆಯಲ್ಲೂ ಕಂಡುಬಂದಿದ್ದು, ಹೂಡಿಕೆದಾರರ ಗೊಂದಲದಿಂದ ಒಂದು ಕಂಪನಿಯ ಷೇರುಗಳು ಏರಿಕೆ ಕಂಡಿವೆ.

5% ಏರಿದ ಪಾರ್ಲೆ ಇಂಡಸ್ಟ್ರೀಸ್ ಷೇರು
ಮೋದಿ-ಮೆಲೋನಿ ಭೇಟಿ ಮತ್ತು 'ಮೆಲೋಡಿ' ಚಾಕೊಲೇಟ್ ಸುದ್ದಿಯ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ ಪಾರ್ಲೆ ಇಂಡಸ್ಟ್ರೀಸ್ ಲಿಮಿಟೆಡ್ ಷೇರುಗಳು ಸುಮಾರು 5% ಏರಿಕೆ ಕಂಡವು. ಆದರೆ ಈ ಏರಿಕೆಗೆ ಕಂಪನಿಯ ವ್ಯವಹಾರ ಅಥವಾ ಆರ್ಥಿಕ ಫಲಿತಾಂಶ ಕಾರಣವಾಗಿರಲಿಲ್ಲ. ಬದಲಾಗಿ, ಕಂಪನಿಯ ಹೆಸರಿನಲ್ಲಿರುವ 'ಪಾರ್ಲೆ' ಪದವೇ ಹೂಡಿಕೆದಾರರಲ್ಲಿ ಗೊಂದಲ ಸೃಷ್ಟಿಸಿತು.

'ಮೆಲೋಡಿ' ತಯಾರಿಸುವುದು ಯಾರು..?
ಜನಪ್ರಿಯ 'ಮೆಲೋಡಿ' ಚಾಕೊಲೇಟ್ ಅನ್ನು ತಯಾರಿಸುವುದು ಭಾರತದ ಖ್ಯಾತ ಎಫ್‌ಎಂಸಿಜಿ ಸಂಸ್ಥೆಯಾದ ಪಾರ್ಲೆ ಪ್ರಾಡಕ್ಟ್ಸ್. ಇದೇ ಸಂಸ್ಥೆ ಪಾರ್ಲೆ-ಜಿ ಬಿಸ್ಕತ್, ಮೊನಾಕೊ, ಕ್ರಾಕ್‌ಜಾಕ್, ಮ್ಯಾಂಗೋ ಬೈಟ್, ಪಾಪಿನ್ಸ್ ಸೇರಿದಂತೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಉತ್ಪಾದಿಸುತ್ತದೆ. ಆದರೆ ಪ್ರಮುಖ ವಿಷಯವೇನೆಂದರೆ, ಪಾರ್ಲೆ ಪ್ರಾಡಕ್ಟ್ಸ್ ಒಂದು ಖಾಸಗಿ ಕಂಪನಿಯಾಗಿದ್ದು, ಅದರ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ.

ಬಿಎಸ್‌ಇನಲ್ಲಿ ಲಿಸ್ಟ್ ಆಗಿರುವ ಪಾರ್ಲೆ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು 'ಮೆಲೋಡಿ' ತಯಾರಕ ಪಾರ್ಲೆ ಪ್ರಾಡಕ್ಟ್ಸ್ ನಡುವೆ ಯಾವುದೇ ನೇರ ಸಂಬಂಧವಿಲ್ಲ. ಕೇವಲ ಹೆಸರಿನ ಸಾಮ್ಯತೆಯಿಂದ ಅನೇಕ ಚಿಲ್ಲರೆ ಹೂಡಿಕೆದಾರರು ಮತ್ತು ಟ್ರೇಡರ್‌ಗಳು ಗೊಂದಲಕ್ಕೊಳಗಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರುಗಳನ್ನು ಖರೀದಿಸಲು ಮುಂದಾದರು.ವೈರಲ್ ಸುದ್ದಿಯ ಪ್ರಭಾವದಿಂದ ಷೇರು ಖರೀದಿ ಹೆಚ್ಚಾಗಿದ್ದರಿಂದ, ಪಾರ್ಲೆ ಇಂಡಸ್ಟ್ರೀಸ್ ಷೇರು ಬೆಲೆ ದಿಢೀರ್ ಏರಿಕೆ ಕಂಡಿತು.

ಮೋದಿ-ಮೆಲೋನಿ 'ಮೆಲೋಡಿ' ಚಾಕೊಲೇಟ್ ಘಟನೆ ಮತ್ತೊಮ್ಮೆ ಒಂದು ಮಹತ್ವದ ಪಾಠ ಕಲಿಸಿದೆ. ಯಾವುದೇ ಕಂಪನಿಯ ಷೇರು ಖರೀದಿಸುವ ಮೊದಲು ಅದರ ವ್ಯವಹಾರ, ಮಾರುಕಟ್ಟೆ ಸ್ಥಿತಿ ಮತ್ತು ಸಂಬಂಧಿತ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಕೇವಲ ಹೆಸರು ಅಥವಾ ವೈರಲ್ ಟ್ರೆಂಡ್ ಆಧರಿಸಿ ಹೂಡಿಕೆ ಮಾಡಿದರೆ ತಪ್ಪು ನಿರ್ಧಾರಗಳಿಗೆ ಕಾರಣವಾಗಬಹುದು.

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದ ವೇಳೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ 'ಮೆಲೋಡಿ' ಚಾಕೊಲೇಟ್ ಉಡುಗೊರೆಯಾಗಿ ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮೆಲೋನಿ ಅವರು ಕೂಡ ಎಕ್ಸ್ (X) ನಲ್ಲಿ ಈ ವಿಶೇಷ ಉಡುಗೊರೆಗೆ ಧನ್ಯವಾದ ತಿಳಿಸಿರುವುದು ಚರ್ಚೆಗೆ ಕಾರಣವಾಗಿದೆ. ಆದರೆ ಈ ವೈರಲ್ ಟ್ರೆಂಡ್‌ನ ಪರಿಣಾಮ ಷೇರು ಮಾರುಕಟ್ಟೆಯಲ್ಲೂ ಕಂಡುಬಂದಿದ್ದು, ಹೂಡಿಕೆದಾರರ ಗೊಂದಲದಿಂದ ಒಂದು ಕಂಪನಿಯ ಷೇರುಗಳು ಏರಿಕೆ ಕಂಡಿವೆ.

Dailyhunt
Disclaimer: This content has not been generated, created or edited by Dailyhunt. Publisher: eesanje