Dailyhunt Logo
  • Light mode
    Follow system
    Dark mode
    • Play Story
    • App Story
ನಟಿ ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ಆತ್ಮಹತ್ಯೆ

ನಟಿ ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿ ಉದ್ಯಮಿ ಆತ್ಮಹತ್ಯೆ

ಈ ಸಂಜೆ 1 week ago

Businessman commits suicide in actress Krishi Thapanda's apartment

ಬೆಂಗಳೂರು,ಜೂ. 25-ಸ್ಯಾಂಡಲ್‌ವುಡ್‌ ನಟಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್‌ ನಿವಾಸದಲ್ಲಿ ಸ್ನೇಹಿತ ಹಾಗೂ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌ಆರ್‌ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಗಿರಿನಗರದ ನಿವಾಸಿ ವೈಶಾಖ್‌(45) ಆತಹತ್ಯೆ ಮಾಡಿಕೊಂಡಿರುವ ಉದ್ಯಮಿ. ಇವರ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ.

ಆಟೋ ಮೊಬೈಲ್‌ ಮತ್ತು ಗ್ಯಾರೇಜ್‌ ಉದ್ಯಮ ನಡೆಸುತ್ತಿದ್ದ ವೈಶಾಖ್‌ ಅವರು 15 ವರ್ಷಗಳ ಹಿಂದೆ ಮದುವೆಯಾಗಿದ್ದು ದಂಪತಿಗೆ ಒಬ್ಬ ಮಗನಿದ್ದಾನೆ. ಪತ್ನಿ, ಮಗನೊಂದಿಗೆ ಗಿರಿನಗರದಲ್ಲಿ ವೈಶಾಖ್‌ ವಾಸವಾಗಿದ್ದರು. ಇತ್ತೀಚೆಗೆ ಪತ್ನಿಯೊಂದಿಗೆ ಕೌಟುಂಬಿಕ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದ ವೈಶಾಖ್‌ ಅವರು ಮನೆಯಿಂದ ಹೊರಗೆ ಬಂದಿದ್ದು, ಒಂದು ತಿಂಗಳಿನಿಂದ ಸ್ನೇಹಿತೆ, ನಟಿ ಕೃಷಿ ತಾಪಂಡ ಅವರ ಆರ್‌ಆರ್‌ ನಗರದಲ್ಲಿರುವ ಎಲಿಗೇಟ್‌ ಅಪಾರ್ಟ್‌ಮೆಂಟ್‌ನ ನಿವಾಸದಲ್ಲಿ ಉಳಿದುಕೊಂಡಿದ್ದರು.

ಇಲ್ಲಿಂದಲೇ ಆಟೋಮೊಬೈಲ್‌ ಕಂಪನಿಗೆ ಹೋಗುತ್ತಿದ್ದರು. ನಿನ್ನೆ ರಾತ್ರಿ 8.30 ರ ಸುಮಾರಿನಲ್ಲಿ ವೈಶಾಖ್‌ ತನ್ನ ಬಳಿ ಇದ್ದ ಕೀಯನ್ನು ಬಳಸಿ ಅಪಾರ್ಟ್‌ಮೆಂಟ್‌ಗೆ ಹೋಗಿ ನಾನು ಆತಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನೆಲಮಂಗಲದಲ್ಲಿದ್ದ ಕೃಷಿ ತಾಪಂಡ ಅವರಿಗೆ ಮೊಬೈಲ್‌ ಕರೆ ಮಾಡಿ ಹೇಳಿದ್ದಾರೆ.

ಸ್ನೇಹಿತನಿಗೆ ತಾಪಂಡ ಅವರು ಬುದ್ದಿವಾದ ಹೇಳಿ ಆ ರೀತಿ ಯೋಚನೆ ಮಾಡಬೇಡವೆಂದು ಹೇಳಿದ್ದಾರೆ. ಆದರೆ ಕೃಷಿ ಅವರು ಮನೆಗೆ ಬರುವಷ್ಟರಲ್ಲಿ ವೈಶಾಖ್‌ ಅವರು ಸೀರೆಯಿಂದ ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿದ್ದಾರೆ.

ಕಾರ್ಯನಿಮಿತ್ತ ನೆಲಮಂಗಲಕ್ಕೆ ಹೋಗಿದ್ದ ಕೃಷಿ ತಾಪಂಡ ಅವರು ಮನೆಗೆ ಬಂದಾಗಲೇ ಸ್ನೇಹಿತ ಆತಹತ್ಯೆ ಮಾಡಿಕೊಂಡಿರುವುದು ಕಂಡು ಅಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ನಟಿ ತಕ್ಷಣ ವೈಶಾಖ್‌ ಕುಟುಂಬಕ್ಕೆ ವಿಷಯ ತಿಳಿಸಿ ನಂತರ ಪೊಲೀಸರಿಗೂ ಹೇಳಿದ್ದಾರೆೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಉದ್ಯಮಿ ಆತಹತ್ಯೆಗೆ ಕಾರಣವೇನು ಎಂಬುವುದರ ಬಗ್ಗೆ ತನಿಖೆ ಕೈಗೊಂಡು ವೈಶಾಖ್‌ ಅವರ ಮೊಬೈಲ್‌ನ್ನು ವಶಕ್ಕೆ ಪಡೆದು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

7 ಕೋಟಿಗೆ ಬೇಡಿಕೆ ಇಟ್ಟು ಸಿಲುಕಿಕೊಂಡಿದ್ದ ಉದ್ಯಮಿ: ಇತ್ತೀಚೆಗೆ ಎವಿಆರ್‌ ಗ್ರೂಪ್‌ ಮಾಲೀಕ ಅರವಿಂದರೆಡ್ಡಿ ಅವರಿಗೆ 7 ಕೋಟಿ ರೂ. ಗೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ ಪ್ರಕರಣದಲ್ಲಿ ವೈಶಾಖ್‌ ಸಿಲುಕಿಕೊಂಡಿದ್ದರು.ನಟಿ ಕೃಷಿ ತಾಪಂಡ ಅವರು ಉದ್ಯಮಿ ಅರವಿಂದರೆಡ್ಡಿ ವಿರುದ್ಧ ಕಿರುಕುಳದ ದೂರು ನೀಡಿದ್ದ ಬೆನ್ನಲ್ಲೆ ರೆಡ್ಡಿ ಅವರಿಗೆ ಜೀವ ಬೆದರಿಕೆ ಪತ್ರವನ್ನು ಬನಶಂಕರಿಯ ಬ್ಲೂ ಡಾರ್ಟ್‌ ಕೊರಿಯರ್‌ ಮೂಲಕ ಕಳುಹಿಸಿ ಪೊಲೀಸರ ದಿಕ್ಕು ತಪ್ಪಿಸಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಹೆಚ್‌ಎಎಲ್‌ ಠಾಣೆ ಪೊಲೀಸರು ಕೊರಿಯರ್‌ ವಿಳಾಸ ಹುಡುಕಿಕೊಂಡು ಬಂದಾಗ ಗ್ಯಾರೇಜ್‌ನಲ್ಲಿದ್ದ ಬಾಲಕನನ್ನು ವಿಚಾರಿಸಿದಾಗ ಆತ ನಮ ಬಾಸ್‌‍ ವೈಶಾಖ್‌ ಹೇಳಿದ್ದಾಗಿ ಬಾಯ್ಬಿಟ್ಟಿದ್ದನು.ಉದ್ಯಮಿ ಅರವಿಂದ ರೆಡ್ಡಿ ಅವರ ಹೆಸರಿಗೆ ಮಸಿ ಬಳಿಯಲು ನಟಿ ಜೊತೆ ಸೇರಿಕೊಂಡು ಸಂಚು ರೂಪಿಸಿ 7 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವೈಶಾಖ್‌ನನ್ನು ಈ ಹಿಂದೆ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು.

ಈ ಪ್ರಕರಣದಲ್ಲಿ ವೈಶಾಖ್‌ ಜೈಲು ಸೇರಿದ್ದ. ಈ ವಿಚಾರವಾಗಿ ಅವರ ಕುಟುಂಬದಲ್ಲಿ ಗಲಾಟೆಯಾಗುತ್ತಿತ್ತು. ಪತ್ನಿಯೊಂದಿಗಿನ ವೈಮನಸ್ಸಿನಿಂದ ವೈಶಾಖ್‌ ಬೇರೆಯಾಗಿ ನಟಿ ಮನೆಗೆ ಬಂದು ಉಳಿದುಕೊಳ್ಳುತ್ತಿದ್ದರು.ನಿನ್ನೆ ನಟಿ ನೆಲಮಂಗಲಕ್ಕೆ ಹೋಗಿದ್ದಾಗ ವೈಶಾಖ್‌ ಇಲ್ಲಿಗೆ ಬಂದು ರಾತ್ರಿ ಆತಹತ್ಯೆಗೆ ಶರಣಾಗಿದ್ದಾರೆ.

ಬೆಂಗಳೂರು,ಜೂ. 25-ಸ್ಯಾಂಡಲ್‌ವುಡ್‌ ನಟಿ ಕೃಷಿ ತಾಪಂಡ ಅವರ ಅಪಾರ್ಟ್‌ಮೆಂಟ್‌ ನಿವಾಸದಲ್ಲಿ ಸ್ನೇಹಿತ ಹಾಗೂ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆರ್‌ಆರ್‌ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗಿರಿನಗರದ ನಿವಾಸಿ ವೈಶಾಖ್‌(45) ಆತಹತ್ಯೆ ಮಾಡಿಕೊಂಡಿರುವ ಉದ್ಯಮಿ. ಇವರ ಆತ್ಮಹತ್ಯೆಗೆ ಕಾರಣ ಸದ್ಯಕ್ಕೆ ತಿಳಿದು ಬಂದಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: eesanje