Dailyhunt
ನಿಧಾನಗತಿಯ ಬೌಲಿಂಗ್‍: ಕೆಕೆಆರ್ ನಾಯಕ ಮೋರ್ಗಾನ್'ಗೆ 12 ಲಕ್ಷ ದಂಡ

ನಿಧಾನಗತಿಯ ಬೌಲಿಂಗ್‍: ಕೆಕೆಆರ್ ನಾಯಕ ಮೋರ್ಗಾನ್'ಗೆ 12 ಲಕ್ಷ ದಂಡ

ಈ ಸಂಜೆ 5 years ago

ಮುಂಬೈ, ಏ.22- ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‍ಗಾಗಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಇಯೊನ್ ಮೋರ್ಗಾನ್ ಅವರಿಗೆ 12 ಲಕ್ಷ ರೂ. ದಂಡ ವಿಸಲಾಗಿದೆ.

ನಿನ್ನೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ವಿವೋ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021 ಪಂದ್ಯದ ವೇಳೆ ಕೊಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಇಯೊನ್ ಮೋರ್ಗಾನ್ ಅವರಿಗೆ ದಂಡ ವಿಸಲಾಗಿದೆ ಎಂದು ಐಪಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಕನಿಷ್ಠ ಓವರ್ ರೇಟ್ ನಿಯಮವನ್ನು ಪಾಲಿಸದ ಹಿನ್ನೆಲೆಯಲ್ಲಿ ಪಂದ್ಯದ ರೆಫ್ರಿ ದಂಡವನ್ನು ವಿಸಿದ್ದಾರೆ. ತಂಡ ಸೋತ ನಿರಾಸೆಯಲ್ಲಿದ್ದ ಮಾರ್ಗನ್‍ಗೆ ಈಗ ದಂಡ ಕೂಡ ಶಾಕ್ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: eesanje