Sunday, 20 Sep, 9.58 pm ಈ ಸಂಜೆ

ರಾಜ್ಯ ಸುದ್ದಿ
ಸಾಮಾಜಿಕ ಕಾರ್ಯಕರ್ತೆ ಅಕೈ ಪದ್ಮಶಾಲಿ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು, ಸೆ.20- ಸಾಮಾಜಿಕ ಹೋರಾಟಗಾರರಾದ ಅಕೈ ಪದ್ಮಶಾಲಿ ಅವರು ಇಂದು ತಮ್ಮ ಸಂಗಡಿಗರ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತೃತೀಯ ಲಿಂಗಿ ಸಮುದಾಯದ ಅಕೈ ಪದ್ಮಶಾಲಿ ಮತ್ತು ಅವರ ಸಂಗಡಿಗರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಅಕೈ ಅವರನ್ನು ಕಾಂಗ್ರೆಸ್ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಳಸಿಕೊಳ್ಳಲಿದೆ.

ಅಕೈ ಅವರ ಸೇರ್ಪಡೆ ಕಾಂಗ್ರೆಸ್‍ಗೆ ಪಾಸಿಟಿವ್ ಶೈನ್ ತಂದುಕೊಟ್ಟಿದೆ. ಆಕೆ ಕಾಂಗ್ರೆಸ್‍ನ ಆಸ್ತಿ ಮಾತ್ರವಲ್ಲ, ದೇಶದ ಆಸ್ತಿ ಎಂದು ಡಿಕೆಶಿ ಹೇಳಿದರು. ಐದು ಆರು ತಿಂಗಳ ಹಿಂದೆಯೇ ಮಹಿಳಾ ಮುಖಂಡರು ಈ ಸಭೆ ಮಾಡಬೇಕಾಗಿತ್ತು.

ಕೊರೊನಾದಿಂದ ಸಭೆ ನಡೆಸಲು ಆಗಿರಲಿಲ್ಲ. ಅಕೈ ಪದ್ಮಶಾಲಿ ಅವರು ಕಾಂಗ್ರೆಸ್ ಸೇರಲು ಇಚ್ಚೆ ವ್ಯಕ್ತಪಡಿಸಿದ್ದರು. ಇಂದು ಶುಭ ಗಳಿಗೆ , ಶುಭ ಮುಹೂರ್ತದಲ್ಲಿ ಸೇರ್ಪಡೆಯಾಗುತ್ತಿದ್ದಾರೆ. ಅವರ ಹೋರಾಟವನ್ನು ಪಕ್ಷ ಬೆಂಬಲಿಸಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

ಪಕ್ಷಕ್ಕೆ ಮಹಿಳಾ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ಕೆಲಸ ಆಗಬೇಕು. ಮಹಿಳಾ ಹೋರಾಟಗಾರರು ಪುರುಷರ ಸಮಕಾಲೀನರಾಗಿ ಕೆಲಸ ಮಾಡಬೇಕು, ಗಂಡಸಿನ ಸರಿ ಸಮಾನವಾಗಿ ಹೋರಾಟ ಮಾಡಬೇಕು. ಆ ಎಲ್ಲಾ ಸಾಮಥ್ರ್ಯ ಮಹಿಳೆಯರಿಗಿದೆ ಎಂದರು.

ತಳಮಟ್ಟದಲ್ಲಿ ಯಾರು ಕೆಲಸ ಮಾಡುತ್ತಾರೆ ಅಂತವರು ಪಕ್ಷಕ್ಕೆ ಬೇಕಿದೆ. ನನ್ನ ಸುತ್ತ ಗಿರಕಿ ಹೊಡೆಯುವವರು ಬಹಳಷ್ಟು ಮಂದಿ ಇದ್ದಾರೆ. ಅಂಥವರು ನಾಯಕರಾಗಲು ಸಾಧ್ಯ ಇಲ್ಲ. ನಾಯಕರ ಹಿಂದೆ ಸುತ್ತಿದರೆ ನಾಯಕತ್ವ ಬೆಳೆಯುವುದಿಲ್ಲ. ತಳಭಾಗದಲ್ಲಿ ಜನರ ನಡುವೆ ಕೆಲಸ ಮಾಡಬೇಕು ಎಂದು ಹೇಳಿದರು.

ಅಕೈ ಪದ್ಮಶಾಲಿ ಮಾಡನಾಡಿ, ರಾಜಕೀಯವಾಗಿ ನಾವು ಯಾವ ಪಕ್ಷ ಸೇರಬೇಕು ಎಂದು ಅಧ್ಯಯನ ನಡೆಸುವಾಗ ಕಾಂಗ್ರೆಸ್ ಸೂಕ್ತ ಎಂದು ಕಂಡು ಬಂತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು, ತೃತೀಯ ಲಿಂಗಿಗಳಿಗೆ ರೈಲಿನಲ್ಲಿ ಉಚಿತ ಪ್ರಯಾಣ ಅವಕಾಶ ಮಾಡಿಕೊಟ್ಟರು. ರೈಲಿನಲ್ಲಿ ಊಟ ಕೊಡುವ ವುವಸ್ಥೆ ಮಾಡಿದರು. ನಮಗೆ ವಾಸಿಸಲು ಜಾಗ ಕಲ್ಪಿಸಲು ಆದೇಶಿಸಿದ್ದರು ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಸೌಮ್ಯರೆಡ್ಡಿ, ಅಂಜಲಿ ನಿಂಬಾಳ್ಕರ್, ಮಾಜಿ ಸಚಿವರಾದ ಉಮಾಶ್ರೀ, ಜಯಮಾಲ, ಮುಖಂಡರಾದ ಬಿ.ಎಲ್.ಶಂಕರ್, ಸುದರ್ಶನ್, ಶಫಿವುಲ್ಲಾ, ಮಂಜುಳನಾಯ್ಡು, ಹುಚ್ಚಪ್ಪ, ಗಂಗಾಂಬಿಕೆ, ಪದ್ಮಾವತಿ ಸೇರಿದಂತೆ ಅನೇಕ ನಾಯಕರಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: eesanje
Top