Dailyhunt
ಸಮುದ್ರದಲ್ಲಿ ಕೈಕೊಟ್ಟ ಬೋಟ್, 7 ಮೀನುಗಾರರ ರಕ್ಷಣೆ

ಸಮುದ್ರದಲ್ಲಿ ಕೈಕೊಟ್ಟ ಬೋಟ್, 7 ಮೀನುಗಾರರ ರಕ್ಷಣೆ

ಈ ಸಂಜೆ 4 years ago

ನವದೆಹಲಿ,ಸೆ.14-ಡಿಯು ಸಮೀಪದ ವನಕ್‍ಬಾರಾ ಬೀಚ್‍ನಲ್ಲಿ ಮುಳುಗುತ್ತಿದ್ದ 7 ಮೀನುಗಾರರನ್ನು ರಕ್ಷಣೆ ಮಾಡುವಲ್ಲಿ ಕರಾವಳಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ. ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದ ಮೀನುಗಾರರ ಬೋಟ್ ಸಮುದ್ರ ಮಧ್ಯದಲ್ಲಿ ಕೆಟ್ಟುನಿಂತಿತ್ತು.

ಏನೆ ಹರಸಾಹಸ ನಡೆಸಿದರೂ ಬೋಟ್ ರಿಪೇರಿ ಮಾಡಲು ಸಾಧ್ಯವಾಗದೆ ಸಮುದ್ರ ಮಧ್ಯದಲ್ಲಿ ಹತಾಶರಾಗಿದ್ದ ಮೀನುಗಾರರು ನಾವಿನ್ನು ಬದುಕಿ ದಡ ಸೇರುತ್ತೇವೆ ಎಂಬ ವಿಶ್ವಾಸವನ್ನೆ ಕಳೆದುಕೊಂಡಿದ್ದರು.

ರಾತ್ರಿ ಕಳೆದರೂ ಮೀನುಗಾರರು ವಾಪಸ್ಸಾಗಿಲ್ಲ ಎಂಬ ಮಾಹಿತಿ ಪಡೆದ ಕರಾವಳಿ ರಕ್ಷಣಾ ಪಡೆಯ ಯೋಧರು ಮಧ್ಯರಾತ್ರಿ ಅತ್ಯಾಧುನಿಕ ಹೆಲಿಕಾಫ್ಟರ್ ಬಳಸಿ ಕಡುಕತ್ತಲಲ್ಲೇ ಕಾರ್ಯಚರಣೆ ನಡೆಸಿ ಸಾವಿನ ದವಡೆಗೆ ಸಿಲುಕಿದ್ದ 7 ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje