Dailyhunt
ಸಿಲಿಂಡರ್ ಸ್ಫೋಟಿಸಿ ಕುಸಿದ ಎರಂಡತಸ್ತಿನ ಮನೆ, 8 ಮಂದಿ ಸಾವು..!

ಸಿಲಿಂಡರ್ ಸ್ಫೋಟಿಸಿ ಕುಸಿದ ಎರಂಡತಸ್ತಿನ ಮನೆ, 8 ಮಂದಿ ಸಾವು..!

ಈ ಸಂಜೆ 4 years ago

ಗೋಂಡಾ,ಜೂ.2-ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯ ಟಿಕ್ರಿ ಗ್ರಾಮದ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಎರಂಡತಸ್ತಿನ ಮನೆ ಕುಸಿದುಬಿದ್ದು, ಮೂವರು ಮಕ್ಕಳು ಸೇರಿದಂತೆ ಎಂಟು ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ.

ಗ್ಯಾಸ್ ಸಿಲಿಂಡರ್ ಸ್ಫೋಟದ ರಭಸಕ್ಕೆ ಮನೆ ಕುಸಿದುಬಿದ್ದು ಎಂಟು ಮಂದಿ ಸಾವನ್ನಪ್ಪಿದ್ದರೆ, ಇತರ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಲಕ್ನೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾರ್ಕಂಡೇಯ ಶಾಹಿ ತಿಳಿಸಿದ್ದಾರೆ.

ಘಟನೆಯಲ್ಲಿ ಮೃತಪಟ್ಟವರನ್ನು ನಿಸಾರ್ ಆಹಮದ್, ರುಬೀನಾ ಭಾನು, ಶಂಶದ್, ಸಾಯಿರುನ್ನೀಸಾ, ಶಹಬಾಜ್, ನೂರಿಸಾಬಾ, ಮೀರಜ್ ಮತ್ತು ಮಹಮದ್ ಶೋಹೆಬ್ ಎಂದು ಗುರುತಿಸಲಾಗಿದೆ.

ನಿನ್ನೆ ರಾತ್ರಿ ಹತ್ತುಗಂಟೆಗೆ ನೂರುಲ್ ಹಸನ್ ಎಂಬುವರ ಮನೆಯಲ್ಲಿ ಸಿಲಿಂಡರ್ ಸ್ಫೋಟಿಸಿದ ಪರಿಣಾಮ ಎರಂಡತಸ್ತಿನ ಮನೆ ಕುಸಿದುಬಿದ್ದು ಈ ದುರ್ಘಟನೆ ಸಂಭವಿಸಿದೆ.

ದುರಂತಕ್ಕೆ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ಕೊಡಿಸಿ ಹಾಗೂ ಘಟನೆ ಕುರಿತಂತೆ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje