ರಾಷ್ಟ್ರೀಯ ಸುದ್ದಿ
ಉಕ್ಕು ಕಾರ್ಖಾನೆಗಳಿಂದ 1.43 ಲಕ್ಷ ಮೆ.ಟನ್ ಆಮ್ಲಜನಕ ಉತ್ಪಾದನೆ
ನವದೆಹಲಿ, ಏ.24- ದೇಶಾದ್ಯಂತ ಉಕ್ಕು ಕಾರ್ಖಾನೆಗಳಿಂದ 1.43 ಲಕ್ಷ ಮೆಟ್ರಿಕ್ ಟನ್ ಆಮ್ಲಜನಕವನ್ನು ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಧಮೆಂದ್ರ ಪ್ರಧಾನ್ ಹೇಳಿದ್ದಾರೆ.ಕೊರೊನಾ ಎರಡನೇ ಅಲೆಯಲ್ಲಿ ಚಿಕಿತ್ಸೆ ನೀಡಲು ಮತ್ತು ಜೀವ ಉಳಿಸಲು ಆಮ್ಲಜನಕ ಅತ್ಯವಶ್ಯವಾಗಿದ್ದು, ಜೀವವಾಯುಗಾಗಿ ಎಲ್ಲೆಡೆ ಹಾಹಾಕಾರ ಎದ್ದಿದೆ. ಆಮ್ಲಜನಕ ಬಳಕೆ ಮಾಡುತ್ತಿದ್ದ ಕೈಗಾರಿಕೆಗಳನ್ನು ನಿಲ್ಲಿಸಲಾಗಿದೆ.
ಲಭ್ಯ ಇರುವ ಎಲ್ಲ ಆಮ್ಲಜನಕವನ್ನು ಕೋವಿಡ್ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಈ ಕುರಿತು ಹೇಳಿಕೆ ನೀಡಿರುವ ಉಕ್ಕು ಸಚಿವ ಧಮೇಂದ್ರ ಪ್ರಧಾನ್ ದೇಶಾದ್ಯಂತ ಇರುವ ವಿವಿಧ ಉಕ್ಕು ಉತ್ಪಾದನಾ ಘಟಕಗಳಿಂದ ಸುಮಾರು 1.43 ಲಕ್ಷ ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸಿ ಪೂರೈಕೆ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಉಕ್ಕು ಕಾರ್ಖಾನೆಗಳಾದ ಜಿಂದಾಲ್ ಸೇರಿದಂತೆ ವಿವಿಧ ಉತ್ಪಾದನಾ ಘಟಕಗಳಿಂದ ಸುಮಾರು 600 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದನೆ ಮಾಡಲಾಗುತ್ತಿದೆ. ಎಲ್ಲವನ್ನೂ ಕೋವಿಡ್ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ. ದಿನೇ ದಿನೇ ಜೀವವಾಯುವಿನ ಬೇಡಿಕೆ ಹೆಚ್ಚಾಗುತ್ತಿದೆ.