ಬೆಂಗಳೂರು, ನ.13- ನಾಗರಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ವಾರ್ಡ್ ಒನ್ ಅಭಿಯಾನದ ಎರಡನೇ ವಾರದಲ್ಲಿ 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಈ ಮೂಲಕ ಶೇ.76ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಂದು ಆರಂಭಗೊಂಡಿರುವ ಅಭಿಯಾನದ ಎರಡನೇ ವಾರದಲ್ಲಿ ಅಂಜನಾಪುರ, ಹರಿನಗರ, ಕೋಣನಕುಂಟೆ, ಅಬ್ದುಲ್ ಕಲಾಂ ನಗರ, ಮಾರೇನಹಳ್ಳಿ ದಕ್ಷಿಣ, ಜಕ್ಕಸಂದ್ರ, ಪದ್ಮನಾಭನಗರ, ಕದಿರೇನಹಳ್ಳಿ, ಬೊಮ್ಮನಹಳ್ಳಿ, ಹೊಸಪಾಳ್ಯ ಹಾಗೂ ಎಚ್‌ಎಸ್‌ಆರ್ ಲೇಔಟ್ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಟ್ಟು 28.64 ಕಿ.ಮೀ ರಸ್ತೆಗಳಲ್ಲಿ ಸ್ವಚ್ಛತೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ತ್ಯಾಜ್ಯ ವಿಲೇವಾರಿಗೆ ಆದ್ಯತೆ:ಅಭಿಯಾನದಡಿ ಗುರುತಿಸಲಾದ 80 ಟನ್ ಕಟ್ಟಡ ತ್ಯಾಜ್ಯದ ಪೈಕಿ 75.09 ಟನ್ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿದೆ. 45 ಕಸದ ಬ್ಲಾಕ್ ಸ್ಪಾಟ್‌ಗಳ ಪೈಕಿ 41 ತಾಣಗಳನ್ನು ಸ್ವಚ್ಛಗೊಳಿಸಲಾಗಿದ್ದು, 110 ಅನಧಿಕೃತ ಫ್ಲೆಕ್‌್ಸ ಮತ್ತು ಬ್ಯಾನರ್‌ಗಳ ಪೈಕಿ 96ನ್ನು ತೆರವುಗೊಳಿಸಲಾಗಿದೆ.ರಸ್ತೆ ಗುಂಡಿಗಳ ದುರಸ್ತಿಯಲ್ಲೂ ಪ್ರಗತಿ ಕಂಡಿದ್ದು, ಗುರುತಿಸಲಾದ 96 ಗುಂಡಿಗಳ ಪೈಕಿ 80 ಗುಂಡಿಗಳನ್ನು ಮುಚ್ಚಲಾಗಿದೆ.
ಫುಟ್‌ಪಾತ್‌ಗಳ ಮೇಲಿನ 70 ಅಡೆತಡೆಗಳಲ್ಲಿ 61ನ್ನು ತೆರವುಗೊಳಿಸಲಾಗಿದೆ. ರಸ್ತೆ ಮತ್ತು ಬೀದಿ ದೀಪಗಳಿಗೆ ಅಡ್ಡಿಯಾಗಿದ್ದ 26 ಮರಗಳ ಪೈಕಿ 21 ಮರಗಳ ಕೊಂಬೆಗಳನ್ನು ಕತ್ತರಿಸಲಾಗಿದೆ.ಇದಲ್ಲದೆ, ಗುರುತಿಸಲಾದ 4.18 ಕಿ.ಮೀ ಫುಟ್‌ಪಾತ್‌ಗಳ ಪೈಕಿ 2.98 ಕಿ.ಮೀ ದುರಸ್ತಿ ಮಾಡಲಾಗಿದೆ. 88 ಚರಂಡಿ ಸ್ಲ್ಯಾಬ್‌ಗಳ ಪೈಕಿ 60ನ್ನು ಅಳವಡಿಸಲಾಗಿದ್ದು, 3.8 ಕಿ.ಮೀ ರಸ್ತೆ ಬದಿಯ ಚರಂಡಿಗಳಲ್ಲಿ 2.5 ಕಿ.ಮೀ ಹೂಳೆತ್ತುವ ಕಾರ್ಯ ಪೂರ್ಣಗೊಂಡಿದೆ.
ಜಲಮಂಡಳಿ ಕಾಮಗಾರಿಗಳಲ್ಲಿ ಹಿನ್ನಡೆ; ವಿವಿಧ ಇಲಾಖೆಗಳ ಸಮನ್ವಯದಲ್ಲಿ ಕೈಗೊಂಡಿರುವ ಕಾಮಗಾರಿಗಳ ಪೈಕಿ ಕೆಲವು ಕಾರ್ಯಗಳು ಇನ್ನೂ ಬಾಕಿ ಉಳಿದಿವೆ. ಬೆಸ್ಕಾಂಗೆ ಸಂಬಂಧಿಸಿದ 13 ಸಮಸ್ಯೆಗಳಲ್ಲಿ ಏಳನ್ನು ಪರಿಹರಿಸಲಾಗಿದೆ. ಬೆಂಗಳೂರು ಜಲಮಂಡಳಿಗೆ ಸಂಬಂಧಿಸಿದ 48 ಸಮಸ್ಯೆಗಳ ಪೈಕಿ 19 ಕಾಮಗಾರಿಗಳು ಪೂರ್ಣಗೊಂಡಿವೆ.ನೀರಿನ ಸೋರಿಕೆಗೆ ಸಂಬಂಧಿಸಿದ 11 ಸಮಸ್ಯೆಗಳಲ್ಲಿ ಆರನ್ನು ಪರಿಹರಿಸಲಾಗಿದೆ. ಚೇಂಬರ್‌ಗಳ ಲೆವೆಲಿಂಗ್‌ಗೆ ಸಂಬಂಧಿಸಿದ 19 ಕಾಮಗಾರಿಗಳ ಪೈಕಿ ಏಳು ಪೂರ್ಣಗೊಂಡಿವೆ. ರಸ್ತೆ ಮರುಸ್ಥಾಪನೆಗೆ ಸಂಬಂಧಿಸಿದ 18 ಕಾಮಗಾರಿಗಳಲ್ಲಿ ಆರು ಮಾತ್ರ ಪೂರ್ಣಗೊಂಡಿವೆ.
ಸಂಚಾರ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಮೂರು ಸೈನ್‌ಬೋರ್ಡ್‌ಗಳ ಸ್ಥಳಾಂತರ ಕಾರ್ಯ ಪ್ರಗತಿಯಲ್ಲಿದೆ. ಬಿಎಂಆರ್‌ಸಿಎಲ್ ವ್ಯಾಪ್ತಿಯಲ್ಲಿ ಗುರುತಿಸಲಾಗಿದ್ದ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಬಾಕಿ ಕಾಮಗಾರಿಗಳಿಗೆ ಚುರುಕುಚರಂಡಿ ಸ್ಲ್ಯಾಬ್‌ಗಳ ಅಳವಡಿಕೆ, ರಸ್ತೆ ಗುಂಡಿಗಳ ಮುಚ್ಚುವಿಕೆ ಹಾಗೂ ಬೆಸ್ಕಾಂ ಮತ್ತು ಜಲಮಂಡಳಿಗೆ ಸಂಬಂಧಿಸಿದ ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಯುಕ್ತ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ವಚ್ಛಗೊಳಿಸಿರುವ ಕಸದ ಬ್ಲಾಕ್ ಸ್ಪಾಟ್‌ಗಳಲ್ಲಿ ಮತ್ತೆ ಕಸ ಸುರಿಯದಂತೆ ನಿರಂತರ ನಿಗಾ ವಹಿಸಬೇಕು.
ಕಾಮಗಾರಿಗಳ ಪಾರದರ್ಶಕತೆ ಮತ್ತು ಪ್ರಗತಿಯ ಪರಿಶೀಲನೆಗಾಗಿ ಜಿಯೋ-ಟ್ಯಾಗ್ ಮಾಡಿದ ಛಾಯಾಚಿತ್ರಗಳ ದಾಖಲಾತಿಯನ್ನು ಮುಂದುವರಿಸಬೇಕು ಎಂದು ಅವರು ನಿರ್ದೇಶನ ನೀಡಿದ್ದಾರೆ.ವಾರ್ಡ್ ಮಟ್ಟದಲ್ಲಿ ನಾಗರಿಕ ಸಮಸ್ಯೆಗಳನ್ನು ಗುರುತಿಸಿ, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ತ್ವರಿತ ಪರಿಹಾರ ಒದಗಿಸುವುದು ವಾರ್ಡ್ ಒನ್ ಅಭಿಯಾನದ ಪ್ರಮುಖ ಉದ್ದೇಶವಾಗಿದೆ.
ಬೆಂಗಳೂರು, ನ.13- ನಾಗರಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಉದ್ದೇಶದಿಂದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ವಾರ್ಡ್ ಒನ್ ಅಭಿಯಾನದ ಎರಡನೇ ವಾರದಲ್ಲಿ 526 ಸಮಸ್ಯೆಗಳ ಪೈಕಿ 400 ಸಮಸ್ಯೆಗಳನ್ನು ಬಗೆಹರಿಸಲಾಗಿದೆ.
ಈ ಮೂಲಕ ಶೇ.76ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಮಾಹಿತಿ ನೀಡಿದ್ದಾರೆ.

