ನವದೆಹಲಿ,ಏ.30-ದೇಶದಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡಿರುವುದರಿಂದ ಎದುರಾಗಿರುವ ಜೀವರಕ್ಷಕ ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ವಿದೇಶಗಳಿಂದ ಅಮುದು ಮಾಡಿಕೊಳ್ಳಲು ಭಾರತ ಮುಂದಾಗಿದೆ. ವಿದೇಶಗಳಿಂದ 4.5ಲಕ್ಷ ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ತರಿಸಿಕೊಳ್ಳಲಾಗುತ್ತಿದ್ದು ಮೊದಲ ಹಂತದಲ್ಲಿ ಇಂದು 75 ಸಾವಿರ ವಯಲ್ಗಳು ಇಂದು ಬರುತ್ತಿವೆ ಎಂದು ರಸಗೊಬ್ಬರ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಕೊರೊನಾ ಸೋಂಕು ಕಾಣಿಸಿಕೊಂಡವರಿಗೆ ರೆಮಿಡಿಸಿವರ್ ಚುಚ್ಚುಮದ್ದುಗಳು ಜೀವರಕ್ಷಕಗಳಾಗಿ ಪರಿವರ್ತನೆಗೊಂಡಿರುವುದರಿಂದ ವ್ಯಾಪಕ ಬೇಡಿಕೆ ಸೃಷ್ಟಿಸಿದೆ.ಹೀಗಾಗಿ ದೇಶದಲ್ಲಿ ಎದುರಾಗಿರುವ ರೆಮಿಡಿಸಿವರ್ ಅಭಾವ ತಪ್ಪಿಸುವ ಉದ್ದೇಶದಿಂದ ವಿದೇಶಗಳಿಂದ ಅಮುದು ಮಾಡಿಕೊಳ್ಳಲಾಗುತ್ತಿದೆ.
ಅಮೆರಿಕಾದ ಗಿಲೇಡ್ ಸೈನ್ಸ್ ಸಂಸ್ಥೆ ಹಾಗೂ ಈಜಿಪ್ಟಿಯನ್ ಫಾರ್ಮಾ ಸಂಸ್ಥೆಗಳಿಂದ 4.5 ಲಕ್ಷ ರೆಮಿಡಿಸಿವರ್ ವಯಲ್ಗಳನ್ನು ಸರ್ಕಾರಿ ಸಾಮ್ಯದ ಹೆಚ್ಎಲ್ಎಲ್ ಲೈಫ್ಕೇರ್ ಸಂಸ್ಥೆ ಅಮುದು ಮಾಡಿಕೊಳ್ಳುತ್ತಿದೆ. ಗಿಲೇಡ್ ಸಂಸ್ಥೆ ಒಂದೇರಡು ದಿನಗಳಲ್ಲಿ 75 ಸಾವಿರದಿಂದ ಒಂದು ಲಕ್ಷದಷ್ಟು ರೆಮಿಡಿಸಿವರ್ ಚುಚ್ಚುಮದ್ದುಗಳನ್ನು ಭಾರತಕ್ಕೆ ರವಾನಿಸುವ ಸಾಧ್ಯತೆಗಳಿವೆ.
ಅದೇ ರೀತಿ ಇವಿಎ ಸಂಸ್ಥೆ 15 ದಿನಗಳಿಗೊಮ್ಮೆ 50 ಸಾವಿರ ವಯಲ್ಗಳನ್ನು ನೀಡಲು ಸಮ್ಮತಿಸಿದೆ. ಇದರ ಜತೆಗೆ ದೇಶದಲ್ಲೂ ರೆಮಿಡಿಸಿವರ್ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವಾಲಯ ವಿವರಣೆ ನೀಡಿದೆ.

