Dailyhunt
ವಿದ್ಯುತ್ ತಂತಿ ಬಿದ್ದು ದಂಪತಿ ಸಾವು

ವಿದ್ಯುತ್ ತಂತಿ ಬಿದ್ದು ದಂಪತಿ ಸಾವು

ಈ ಸಂಜೆ 4 years ago

ನಾಗಪಟ್ಟಣಂ,ಅ.19-ವಿದ್ಯುತ್ ಹರಿಯುತ್ತಿದ್ದ ತಂತಿ ತುಂಡಾಗಿ ಬಿದ್ದ ಪರಿಣಾಮ ದಂಪತಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ಸಂಭವಿಸಿದೆ. ನಾಗಪಟ್ಟಣಂನಲ್ಲಿ 40 ವರ್ಷದ ಮಹಿಳೆ ಮನೆ ಹಿಂಭಾಗ ಇಂದು ಮುಂಜಾನೆ ತಿಂಡಿ ತಯಾರಿಸುತ್ತಿದ್ದರು.

ಈ ಸಂದರ್ಭದಲ್ಲಿ ವಿದ್ಯುತ್ ತಂತಿ ತುಂಡಾಗಿ ಆಕೆಯ ಮೇಲೆ ಬಿತ್ತು.

ಮಡದಿ ಮೇಲೆ ತಂತಿ ಬಿದ್ದಿದ್ದನ್ನು ಗಮನಿಸಿದ ಪತಿ ಪತ್ನಿಯ ರಕ್ಷಣೆಗೆ ಧಾವಿಸಿದಾಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಗಪಟ್ಟಣಂ ಬಂದರಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಸಮೀಪದ ಸುನಾಮಿ ಕಾಲನಿಯಲ್ಲಿ ವಾಸಿಸುತ್ತಿದ್ದರು. ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: eesanje