ದೇಶದ ಶಾಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕವು ಗಣನೀಯವಾಗಿ ಹೆಚ್ಚಳವಾಗಿದ್ದು, 2013-14ರಲ್ಲಿ ಶೇ.7.3ರಷ್ಟಿದ್ದ ಇಂಟರ್‌ನೆಟ್ ಸೌಲಭ್ಯವು 2025-26ರ ವೇಳೆಗೆ ಶೇ.67.4ಕ್ಕೆ ಏರಿಕೆಯಾಗಿದೆ. UDISE+ 2025-26 ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಶಾಲಾ ಮೂಲಸೌಕರ್ಯವನ್ನು ಆಧುನೀಕರಿಸುವಲ್ಲಿ ದೇಶವು ಗಮನಾರ್ಹ ಪ್ರಗತಿ ಸಾಧಿಸಿದೆ.
ಕಂಪ್ಯೂಟರ್ ಸೌಲಭ್ಯ ಹೊಂದಿರುವ ಶಾಲೆಗಳ ಪ್ರಮಾಣ ಶೇ.69.9ಕ್ಕೆ ಏರಿಕೆಯಾಗಿದ್ದು, ತಂತ್ರಜ್ಞಾನ ಆಧಾರಿತ ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿದೆ.
14.67 ಲಕ್ಷ ಶಾಲೆಗಳು, 24.72 ಕೋಟಿ ವಿದ್ಯಾರ್ಥಿಗಳು
UDISE+ 2025-26 ವರದಿ ಪ್ರಕಾರ, ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಸುಮಾರು 14.67 ಲಕ್ಷ ಶಾಲೆಗಳು, 1.03 ಕೋಟಿ ಶಿಕ್ಷಕರು ಹಾಗೂ 24.72 ಕೋಟಿಗೂ ಅಧಿಕ ವಿದ್ಯಾರ್ಥಿಗಳು ಇದ್ದಾರೆ. ಪ್ರತಿ ಶಾಲೆಗೆ ಸರಾಸರಿ 7 ಶಿಕ್ಷಕರು ಮತ್ತು 169 ವಿದ್ಯಾರ್ಥಿಗಳಿದ್ದಾರೆ. ದೇಶದ ಒಟ್ಟಾರೆ ವಿದ್ಯಾರ್ಥಿ-ಶಿಕ್ಷಕ ಅನುಪಾತ (PTR) 24:1ರಷ್ಟಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಶಿಫಾರಸು ಮಾಡಿರುವ 30:1ರ ಮಾನದಂಡಕ್ಕಿಂತ ಉತ್ತಮವಾಗಿದೆ.
ದಾಖಲಾದ ಪ್ರಮುಖ ಅಂಶಗಳು
*ಪ್ರೌಢ ಹಂತದ ಒಟ್ಟು ದಾಖಲಾತಿ ಪ್ರಮಾಣ (GER) ಶೇ.71.7ಕ್ಕೆ ಏರಿಕೆಯಾಗಿದೆ.
*ಮಧ್ಯಮ ಹಂತದ GER ಶೇ.89.6ರಷ್ಟಿದೆ.
*ಒಟ್ಟು ವಿದ್ಯಾರ್ಥಿ ದಾಖಲಾತಿಯಲ್ಲಿ ಬಾಲಕಿಯರ ಪಾಲು ಶೇ.48.4.
*ಒಟ್ಟು ಶಿಕ್ಷಕರ ಪೈಕಿ ಮಹಿಳಾ ಶಿಕ್ಷಕರ ಪ್ರಮಾಣ ಶೇ.54.9.
*ವಿದ್ಯಾರ್ಥಿಗಳಲ್ಲಿ OBC ವರ್ಗದವರ ಪಾಲು ಶೇ.44.9, ಸಾಮಾನ್ಯ ವರ್ಗ ಶೇ.27.5, ಪರಿಶಿಷ್ಟ ಜಾತಿ (SC) ಶೇ.17.7 ಮತ್ತು ಪರಿಶಿಷ್ಟ ಪಂಗಡ (ST) ಶೇ.10.
*ಪೂರ್ವಸಿದ್ಧತಾ ಹಂತದ ಡ್ರಾಪ್‌ಔಟ್ ಪ್ರಮಾಣ ಶೇ.1.8, ಮಧ್ಯಮ ಹಂತದಲ್ಲಿ ಶೇ.3.6 ಹಾಗೂ ಪ್ರೌಢ ಹಂತದಲ್ಲಿ ಶೇ.7ಕ್ಕೆ ಇಳಿಕೆಯಾಗಿದೆ.
*ಒಬ್ಬನೇ ಶಿಕ್ಷಕ ಕಾರ್ಯನಿರ್ವಹಿಸುವ ಶಾಲೆಗಳ ಸಂಖ್ಯೆ ಸುಮಾರು ಶೇ.3ರಷ್ಟು ಕಡಿಮೆಯಾಗಿ 1,00,843ಕ್ಕೆ ಇಳಿದಿದೆ.
ಮೂಲಸೌಕರ್ಯದಲ್ಲೂ ಸುಧಾರಣೆ
ದೇಶದ ಶೇ.95ರಷ್ಟು ಶಾಲೆಗಳಿಗೆ ವಿದ್ಯುತ್ ಸಂಪರ್ಕವಿದೆ. ಬಾಲಕಿಯರ ಶೌಚಾಲಯಗಳು ಶೇ.98.5 ಮತ್ತು ಬಾಲಕರ ಶೌಚಾಲಯಗಳು ಶೇ.97.2 ಶಾಲೆಗಳಲ್ಲಿ ಲಭ್ಯವಿವೆ. ಇದೇ ವೇಳೆ, ಶೇ.96.9ರಷ್ಟು ಶಾಲೆಗಳಲ್ಲಿ ಕೈತೊಳೆಯುವ ಸೌಲಭ್ಯ ಮತ್ತು ಶೇ.99.5ರಷ್ಟು ಶಾಲೆಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ ಲಭ್ಯವಿದೆ. ಈ ಸೌಲಭ್ಯಗಳು ವಿದ್ಯಾರ್ಥಿಗಳ ಆರೋಗ್ಯ, ಶಾಲಾ ಹಾಜರಾತಿ ಮತ್ತು ಕಲಿಕೆಯ ಗುಣಮಟ್ಟ ಸುಧಾರಿಸಲು ಪ್ರಮುಖ ಪಾತ್ರ ವಹಿಸುತ್ತಿವೆ.
| UDISE+ ಎಂದರೇನು? Unified District Information System for Education Plus (UDISE+) ಎಂಬುದು ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಡಿಜಿಟಲ್ ದತ್ತಾಂಶ ವೇದಿಕೆಯಾಗಿದೆ. 2018-19ರಲ್ಲಿ ಆರಂಭವಾದ ಈ ವ್ಯವಸ್ಥೆಯ ಮೂಲಕ ದೇಶದ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ ಸಮಗ್ರ ದತ್ತಾಂಶವನ್ನು ಸಂಗ್ರಹಿಸಿ, ಯೋಜನೆ ರೂಪಿಸುವುದು, ನೀತಿ ನಿರ್ಧಾರ ಮತ್ತು ಶಿಕ್ಷಣದ ಪ್ರಗತಿ ಮೇಲ್ವಿಚಾರಣೆಗೆ ಬಳಸಲಾಗುತ್ತದೆ.ಅಲ್ಲದೆ, ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಅನುಷ್ಠಾನವನ್ನು ಪರಿಶೀಲಿಸಲು UDISE+ ಪ್ರಮುಖ ದತ್ತಾಂಶ ಮೂಲವಾಗಿ ಕಾರ್ಯನಿರ್ವಹಿಸುತ್ತಿದೆ. |
- ಪ್ರಚಲಿತ ಘಟನೆಗಳ ಕ್ವಿಜ್ (25-08-2026)
- ಪ್ರಚಲಿತ ಘಟನೆಗಳ ಕ್ವಿಜ್ (24-08-2026)
- ಪ್ರಚಲಿತ ಘಟನೆಗಳ ಕ್ವಿಜ್ (23-08-2026)
- ಪ್ರಚಲಿತ ಘಟನೆಗಳ ಕ್ವಿಜ್ (22-08-2026)
- 2026ರಲ್ಲಿ ಭಾರತದ ಟಾಪ್-5 ಸಕ್ಕರೆ ಉತ್ಪಾದಕ ರಾಜ್ಯಗಳು ಯಾವುವು..?
The post ದೇಶದ ಶಾಲೆಗಳಲ್ಲಿ ಇಂಟರ್‌ನೆಟ್ ಸಂಪರ್ಕ ಶೇ.67.4ಕ್ಕೆ ಏರಿಕೆ first appeared on GK KANNADA.

