Share With Friends
| ಪ್ರಚಲಿತ ಘಟನೆಗಳ ONE LINER (One Liner Current Affairs) ಪ್ರತಿ ವಾರ ಪ್ರಕಟವಾಗುವ ಪ್ರಚಲಿತ ಘಟನೆಗಳ ONE LINER ಮೂಲಕ ದೇಶ-ವಿದೇಶದ ಪ್ರಮುಖ ಘಟನೆಗಳು, ನೇಮಕಾತಿಗಳು, ಪ್ರಶಸ್ತಿಗಳು, ಕ್ರೀಡೆ, ವಿಜ್ಞಾನ-ತಂತ್ರಜ್ಞಾನ, ಆರ್ಥಿಕತೆ ಹಾಗೂ ಸರ್ಕಾರಿ ಯೋಜನೆಗಳ ಪ್ರಮುಖ ಮಾಹಿತಿಯನ್ನು ಅತಿ ಸರಳ ಮತ್ತು ಸಂಕ್ಷಿಪ್ತ ರೂಪದಲ್ಲಿ ಪಡೆಯಿರಿ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಾದ KAS, PSI, PDO, FDA, SDA, Police, Banking, SSC, Railway ಹಾಗೂ ಇತರೆ ಪರೀಕ್ಷೆಗಳಿಗಾಗಿ ಉಪಯುಕ್ತವಾದ ವಾರದ ಪ್ರಮುಖ ಪ್ರಚಲಿತ ಘಟನೆಗಳ ಸಂಗ್ರಹವಾಗಿದೆ. |
✦ 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಉತ್ಸವ ನಿರ್ದೇಶಕರಾಗಿ ಯಾರು..?
✓ ಅಶುತೋಷ್ ಗೋವಾರಿಕರ್ (Ashutosh Gowariker)
✦ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ(National Company Law Tribunal)ಯ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ..?
✓ ಅನುಪಿಂದರ್ ಸಿಂಗ್ ಗ್ರೆವಾಲ್ (Anupinder Singh Grewal)
✦ ಹಳ್ಳಿಗಳಲ್ಲಿ ವಸತಿ ಭೂ ಮಾಲೀಕತ್ವವನ್ನು ಔಪಚಾರಿಕಗೊಳಿಸಲು SVAMITVA ಯೋಜನೆ(SVAMITVA scheme)ಯನ್ನು ಯಾವ ಸಚಿವಾಲಯವು ಪ್ರಾರಂಭಿಸಿತು..?
✓ ಪಂಚಾಯತಿ ರಾಜ್ ಸಚಿವಾಲಯ
✦ ಭಾರತದಲ್ಲಿ F1 ಕಾರ್ಯಕ್ರಮ (F1 Programme in India)ಬ್ರಾಂಡ್ ರಾಯಭಾರಿಯಾಗಿ ಯಾರನ್ನು ನೇಮಿಸಲಾಗಿದೆ..?
ಶ್ರೇಯಸ್ ಅಯ್ಯರ್ (Shreyas Iyer)
✦ಭಾರತದ ಮೊದಲ MLFF ತಡೆರಹಿತ ಟೋಲಿಂಗ್ ವ್ಯವಸ್ಥೆ(barrier-less tolling system)ಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಯಿತು..?
✓ ಗುಜರಾತ್
✦ ಏಪ್ರಿಲ್ 2026ರಲ್ಲಿ ಭಾರತದಲ್ಲಿ ಒಟ್ಟು ಜಿಎಸ್ಟಿ ಸಂಗ್ರಹ ಎಷ್ಟು..?
✓ ₹2.42 ಲಕ್ಷ ಕೋಟಿ
✦ ಪಾಕಿಸ್ತಾನದ ಉಪಗ್ರಹ PRSC-EO3 ಅನ್ನು ಯಾವ ದೇಶವು ಉಡಾಯಿಸಿತು..?
✓ ಚೀನಾ
✦ ಅಂತರರಾಷ್ಟ್ರೀಯ ಅಗ್ನಿಶಾಮಕ ದಳದ ದಿನ(International Firefighters' Day) ಯಾವ ದಿನದಂದು ಆಚರಿಸಲಾಗುತ್ತದೆ..?
✓ ಮೇ 4
✦ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ(World Press Freedom Day)ದ ವಿಷಯ ಯಾವುದು?
✓ ಶಾಂತಿಯ ಭವಿಷ್ಯವನ್ನು ರೂಪಿಸುವುದು / Shaping a Future of Peace
✦ ಇತ್ತೀಚಿಗೆ ಭಾರತೀಯ ನೌಕಾಪಡೆಗೆ ಸೇರಿದ ಐಎನ್‌ಎಸ್ ಮಹೇಂದ್ರಗಿರಿ (INS Mahendragiri) ಯಾವ ವರ್ಗದ ಹಡಗುಗಳಿಗೆ ಸೇರಿದೆ..?
✓ ನೀಲಗಿರಿ-ವರ್ಗ (Nilgiri-class)
✦ ಪ್ರತಿ ವರ್ಷ ಯಾವ ದಿನಾಂಕದಂದು ವಿಶ್ವ ಟ್ಯೂನಾ ದಿನ(World Tuna Day)ವನ್ನು ಆಚರಿಸಲಾಗುತ್ತದೆ?
ಮೇ.2
✦ ಅಂತರರಾಷ್ಟ್ರೀಯ ಹ್ಯಾರಿ ಪಾಟರ್ ದಿನವನ್ನು ಪ್ರತಿ ವರ್ಷ ಯಾವ ದಿನಾಂಕದಂದು ಆಚರಿಸಲಾಗುತ್ತದೆ?
✓ ಮೇ.2
✦ ಯಾವ ಕಾನೂನಿನ ಮೂಲಕ ಭಾರತದಲ್ಲಿ ವಿಮಾ ವಲಯದಲ್ಲಿ 100% FDIಅನ್ನು ಹೆಚ್ಚಿಸಲು ಅನುಮತಿಸಲಾಗಿದೆ..?
✓ ಸಬ್ಕಾ ಬಿಮಾ ಸಬ್ಕಿ ರಕ್ಷಾ ಮಸೂದೆ, 2025 (Sabka Bima Sabki Raksha Bill, 2025)
✦ ಡ್ರೋನ್ಗಳಿಗಾಗಿ ಭಾರತದ ಮೊದಲ ಜರ್ಮೇನಿಯಂ-ಮುಕ್ತ ಥರ್ಮಲ್ ಇಮೇಜಿಂಗ್ ಪೇಲೋಡ್,
✓ ಇಒನ್ಸ್ಪೇಸ್ಲ್ಯಾಬ್ಸ್ (EonSpacelabs)
✦ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನು ಹೆಚ್ಚಿಸಲು ಯಾವ ಖಾಸಗಿ ಬ್ಯಾಂಕ್ ತನ್ನ ಮೊದಲ ಡಿಜಿಟಲ್ ಲಾಕರ್-ಕೇಂದ್ರಿತ ಶಾಖೆಯನ್ನು ಪ್ರಾರಂಭಿಸಿದೆ..?
✓ ಆಕ್ಸಿಸ್ ಬ್ಯಾಂಕ್ (Axis Bank)
✦ ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕ 2026(Asia University Rankings 2026)ರಲ್ಲಿ ಯಾವ ದೇಶವು ಅತಿ ಹೆಚ್ಚು ಸಂಸ್ಥೆಗಳನ್ನು ಹೊಂದಿದೆ?
✓ ಭಾರತ
✦ ವ್ಯವಹಾರಗಳಿಗೆ ಕ್ರೆಡಿಟ್ ಗ್ಯಾರಂಟಿ ಬೆಂಬಲವನ್ನು ಒದಗಿಸಲು ಕೇಂದ್ರ ಸಚಿವ ಸಂಪುಟ ಇತ್ತೀಚೆಗೆ ಅನುಮೋದಿಸಿದ ಯೋಜನೆಯ ಹೆಸರೇನು..?
✓ ತುರ್ತು ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) 5.0
✦ ಇತ್ತೀಚಿಗೆ ಆರ್ಬಿಐ ಉಪ ಗವರ್ನರ್ ಆಗಿ ನೇಮಕವಾದ ರೋಹಿತ್ ಜೈನ್ ಅವರು ಯಾರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು..?
✓ ಟಿ. ರಬಿ ಶಂಕರ್ (T. Rabi Sankar)
✦ ವಿಶ್ವದ ಮೊದಲ ಆಪ್ಟೋಸಾರ್ ಉಪಗ್ರಹವಾದ ಮಿಷನ್ ದೃಷ್ಟಿ(Mission Drishti)ಯನ್ನು ಯಾವ ಕಂಪನಿಯು ಪ್ರಾರಂಭಿಸಿತು?
✓ ಗ್ಯಾಲಕ್ಸ್ ಐ (GalaxEye)
✦ ನಾಲ್ಕು ಬಾರಿ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮತ್ತು ಇತ್ತೀಚೆಗೆ ನಿಧನರಾದ ಫಾರ್ಮುಲಾ 1 ಮಾಜಿ ಚಾಲಕ ಯಾರು..?
✓ ಅಲೆಕ್ಸ್ ಜನಾರ್ಡಿ (Alex Zanardi)
✦ ಪರ್ವೀನ್ ಶೇಖ್ (Parveen Shaikh) ಅವರಿಗೆ ಪ್ರತಿಷ್ಠಿತ ವಿಟ್ಲಿ ಪ್ರಶಸ್ತಿ 2026 ಅನ್ನು ನೀಡಿ ಗೌರವಿಸಲಾಗಿದೆ. ಈ ಪ್ರಷಷ್ಠಿಯ ಇನ್ನೊಂದು ಅಡ್ಡ ಹೆಸರೇನು..?
✓ ಹಸಿರು ಆಸ್ಕರ್ಗಳು (Green Oscars)
✦ ಪ್ರಸಾರ ಭಾರತಿ(Prasar Bharati)ಯ ಅಧ್ಯಕ್ಷರಾಗಿ ಯಾರನ್ನು ನೇಮಿಸಲಾಗಿದೆ..?
1) ಗುಲ್ಜಾರ್
✓ ಪ್ರಸೂನ್ ಜೋಶಿ (Prasoon Joshi)
✦ ಪ್ರತಿಷ್ಠಿತ ಮಹಿಳಾ ತಂಡದ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ 2026ರ ಉಬರ್ ಕಪ್ (Uber Cup 2026) ಅನ್ನು ಯಾವ ರಾಷ್ಟ್ರೀಯ ತಂಡ ಗೆದ್ದಿದೆ?
✓ ದಕ್ಷಿಣ ಕೊರಿಯಾ (South Korea)
✦ ಪುರುಷರ ತಂಡ ಬ್ಯಾಡ್ಮಿಂಟನ್ನಲ್ಲಿ ಯಾವ ತಂಡ 2026(Thomas Cup 2026)ರ ಥಾಮಸ್ ಕಪ್ ಅನ್ನು ಗೆದ್ದಿದೆ..?
✓ ಚೀನಾ
✦ ಪುರುಷರ ತಂಡ ಬ್ಯಾಡ್ಮಿಂಟನ್ನಲ್ಲಿ ಥಾಮಸ್ ಕಪ್ 2026 (Thomas Cup 2026) ಅನ್ನು ಗೆದ್ದ ದೇಶ ಯಾವುದು?
✓ ಚೀನಾ
✦ ಮ್ಯಾಡ್ರಿಡ್ ಓಪನ್ 2026 (Madrid Open 2026) ಮಹಿಳಾ ಸಿಂಗಲ್ಸ್ ಪ್ರಶಸ್ತಿಯನ್ನು ಯಾರು ಗೆದ್ದರು?
✓ ಮಾರ್ಟಾ ಕೋಸ್ಟ್ಯುಕ್
✦ 29 ಕಿಮೀ ದೂರದ ಪಾಲ್ಕ್ ಜಲಸಂಧಿಯನ್ನು ದಾಟಿದ ಅತ್ಯಂತ ಕಿರಿಯ ಈಜುಗಾರಇಶಾಂಕ್ ಸಿಂಗ್ ಯಾವರಾಜ್ಯದವರು..?
✓ ಜಾರ್ಖಂಡ್
✦ ಸಂಪೂರ್ಣ ಕಾಗದರಹಿತ ನ್ಯಾಯಾಂಗ(fully paperless judiciary)ವನ್ನು ಸಾಧಿಸಿದ ಭಾರತದ ಮೊದಲ ರಾಜ್ಯ ಯಾವುದು..?
✓ ಸಿಕ್ಕಿಂ
✦ ನೀತಿ ಆಯೋಗದ ಪೂರ್ಣ ಸಮಯದ ಸದಸ್ಯರಾಗಿ ನೇಮಕವಾದ ಜೋರಾಮ್ ಅನಿಯಾ (Joram Aniya) ಯಾವ ಸಮುದಾಯದಿಂದ ಪಿಎಚ್ಡಿ ಪಡೆದ ಮೊದಲ ಮಹಿಳೆ..?
✓ ನ್ಯಿಶಿ (Nyishi)
✦ ಭಾರತೀಯ ಪತ್ರಕರ್ತರಾದ ಆನಂದ್.ಆರ್.ಕೆ ಮತ್ತು ಸುಪರ್ಣಾ ಶರ್ಮಾ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದಿದ್ದಾರೆ..?
✓ ಪುಲಿಟ್ಜರ್ ಪ್ರಶಸ್ತಿ (Pulitzer Prize)
✦ ಕಲ್ಲಿದ್ದಲು ಗಣಿಗಾರರ ದಿನ (Coal Miners' Day) ವನ್ನು ಯಾವಾಗ ಆಚರಿಸಲಾಗುತ್ತದೆ..?
✓ ಮೇ.4
✦ ಮೃತ ಬ್ಯಾಂಕ್ ಖಾತೆದಾರರ ಹಣವನ್ನು ಪತ್ತೆಹಚ್ಚಲು UDGAM ಪೋರ್ಟಲ್ (UDGAM portal) ಅನ್ನು ಯಾವ ಸಂಸ್ಥೆ ಅಭಿವೃದ್ಧಿಪಡಿಸಿದೆ..?
✓ ಭಾರತೀಯ ರಿಸರ್ವ್ ಬ್ಯಾಂಕ್
✦ ಇಂಡೊಪೊಟಮಾನ್ ಅಲಿಪುರ್ಡುವಾರೆನ್ಸ್ (Indopotamon alipurduarense) ಎಂಬ ಹೊಸ ಜಾತಿಯ ಸಿಹಿನೀರಿನ ಏಡಿಯನ್ನು ಇತ್ತೀಚೆಗೆ ಯಾವ ರಾಜ್ಯದಲ್ಲಿ ಕಂಡುಹಿಡಿಯಲಾಯಿತು..?
✓ ಪಶ್ಚಿಮ ಬಂಗಾಳ
✦ವಿಶ್ವ ನಗು ದಿನ(World Laughter Day)ವನ್ನು ಯಾವಾಗ ಆಚರಿಸಲಾಗುತ್ತದೆ?
✓ ಮೇ ತಿಂಗಳ ಮೊದಲ ಭಾನುವಾರ
✦ FY 2025-26 ರಲ್ಲಿ ಒಟ್ಟು ನಿವ್ವಳ ನೇರ ತೆರಿಗೆ ಸಂಗ್ರಹಣೆ (direct tax collection) ಎಷ್ಟು?
✓ ₹23,40,406 ಕೋಟಿ
ಈ ವಾರದ ಪ್ರಚಲಿತ ಘಟನೆಗಳ QUIZ (ಮೇ. 03 ರಿಂದ 09ರ ವರೆಗೆ)

