Dailyhunt Logo
  • Light mode
    Follow system
    Dark mode
    • Play Story
    • App Story
ಬಿಹಾರಕ್ಕೆ ಮೋದಿ ಮೆಗಾ ಗಿಫ್ಟ್: ಪಾಟ್ನಾ- ವೈಶಾಲಿ ಸಂಪರ್ಕಿಸುವ 'ನಿತೀಶ್ ಸೇತು' ಲೋಕಾರ್ಪಣೆ

ಬಿಹಾರಕ್ಕೆ ಮೋದಿ ಮೆಗಾ ಗಿಫ್ಟ್: ಪಾಟ್ನಾ- ವೈಶಾಲಿ ಸಂಪರ್ಕಿಸುವ 'ನಿತೀಶ್ ಸೇತು' ಲೋಕಾರ್ಪಣೆ

Hosadigantha 1 day ago

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅತ್ಯಾಧುನಿಕ ಎಕ್ಸ್‌ಟ್ರಾಡೋಸ್ಡ್ ಕೇಬಲ್-ಸ್ಟೇಯ್ಡ್ ಸೇತುವೆ 'ನಿತೀಶ್ ಸೇತು'ವನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ಲೋಕಾರ್ಪಣೆಗೊಳಿಸಿದರು.

ಈ ಐತಿಹಾಸಿಕ ಕ್ಷಣಕ್ಕೆ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹಾಗೂ ಬಿಹಾರ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಾಕ್ಷಿಯಾದರು.

ಗಣ್ಯರ ಸಂತಸ

ಸೇತುವೆ ಉದ್ಘಾಟನೆಯ ಮುನ್ನಾದಿನ ಸುದ್ದಿಗಾರರೊಂದಿಗೆ ಮಾತನಾಡಿದ ಬಿಹಾರ ಸಚಿವೆ ಶೀಲಾ ಮಂಡಲ್, ಪ್ರಧಾನಿ ಭೇಟಿ ಹಾಗೂ ಸೇತುವೆ ಲೋಕಾರ್ಪಣೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು. "ಇದು ಬಿಹಾರಕ್ಕೆ ಅತ್ಯಂತ ಹೆಮ್ಮೆಯ ಕ್ಷಣ. ನಮ್ಮ ಗೌರವಾನ್ವಿತ ಪ್ರಧಾನಿಯವರು ಬಿಹಾರಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವುದು ನಮಗೆಲ್ಲರಿಗೂ ಸಂತಸದ ವಿಚಾರ," ಎಂದು ಹೇಳಿದರು.

ಬಡವರಿಗಾಗಿ ಶೌಚಾಲಯ ನಿರ್ಮಾಣ ಮಾಡುತ್ತೀವಿ ಎಂದಾಗ ಎಲ್ಲರೂ ನಕ್ಕಿದ್ದರು: ಪ್ರಧಾನಿ ಮೋದಿ

ಸೇತುವೆಗೆ ಮಾಜಿ ಸಿಎಂ ನಿತೀಶ್ ಕುಮಾರ್ ಅವರ ಹೆಸರಿಟ್ಟಿರುವುದನ್ನು ಸ್ವಾಗತಿಸಿದ ಬಿಜೆಪಿ ಶಾಸಕ ಲಖೇಂದ್ರ ಕುಮಾರ್ ರೌಶನ್, "ನಿತೀಶ್ ಕುಮಾರ್ ಅವರು ಇಡೀ ಬಿಹಾರದ ಅಭಿವೃದ್ಧಿಗೆ ಸೇತುವೆಯಂತೆ ಕೆಲಸ ಮಾಡಿದ್ದಾರೆ. ಈ ಸೇತುವೆಗೆ ಅವರ ಹೆಸರಿಡುವ ಪ್ರಧಾನಿ ಹಾಗೂ ಎನ್‌ಡಿಎ ಸರ್ಕಾರದ ನಿರ್ಧಾರ ಕೇವಲ ಅವರಿಗಷ್ಟೇ ಅಲ್ಲ, ಇಡೀ ಬಿಹಾರದ ಜನತೆಗೆ ಸಂದ ಗೌರವವಾಗಿದೆ," ಎಂದರು.

ತಂದೆಯ ಕನಸು ನನಸಾದ ಕ್ಷಣ ಎಂದ ಚಿರಾಗ್ ಪಾಸ್ವಾನ್

ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಭಾವುಕರಾದರು. "ನನ್ನ ಲೋಕಸಭಾ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಆಗಮಿಸಿ, ಹಲವು ಯೋಜನೆಗಳನ್ನು ರಾಜ್ಯಕ್ಕೆ ಸಮರ್ಪಿಸುತ್ತಿರುವುದು ನನಗೆ ಅತ್ಯಂತ ಸಂಭ್ರಮದ ದಿನವಾಗಿದೆ. ನನ್ನ ನಾಯಕ ಹಾಗೂ ನನ್ನ ತಂದೆ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ಅವರ ದಶಕಗಳ ಕನಸು ಇಂದು ನನಸಾಗುತ್ತಿದೆ. ಇದನ್ನು ನೋಡಿ ಅವರು ಎಲ್ಲೇ ಇದ್ದರೂ ಖಂಡಿತವಾಗಿಯೂ ಸಂತೋಷಪಡುತ್ತಾರೆ," ಎಂದು ಹೇಳಿದರು.

'ನಿತೀಶ್ ಸೇತು' ಯೋಜನೆಯ ವಿಶೇಷತೆಗಳು

ಸುಮಾರು ₹4,280 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಬೃಹತ್ ಕೇಬಲ್ ಸೇತುವೆ ಯೋಜನೆಯು ಒಟ್ಟು 19.7 ಕಿ.ಮೀ ಉದ್ದವಿದೆ. ಪಾಟ್ನಾ ಜಿಲ್ಲೆಯ ಎನ್‌ಎಚ್-22 ರಲ್ಲಿರುವ ಕಚ್ಚಿ ದರ್ಗಾವನ್ನು ವೈಶಾಲಿ ಜಿಲ್ಲೆಯ ಎನ್‌ಎಚ್-322 ರಲ್ಲಿರುವ ಬಿದುಪುರದೊಂದಿಗೆ ಈ ಸೇತುವೆ ಸಂಪರ್ಕಿಸುತ್ತದೆ. ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ 9.7 ಕಿ.ಮೀ ಉದ್ದದ ಮುಖ್ಯ ಸೇತುವೆ ಹಾಗೂ 10 ಕಿ.ಮೀ ಉದ್ದದ ಸಂಪರ್ಕ ರಸ್ತೆಗಳು ಸೇರಿವೆ.

Dailyhunt
Disclaimer: This content has not been generated, created or edited by Dailyhunt. Publisher: Hosadigantha