Dailyhunt Logo
  • Light mode
    Follow system
    Dark mode
    • Play Story
    • App Story
ಬಿಜೆಪಿಗೆ ಗುಡ್‌ಬೈ ಸೂಚನೆ? X ಬಯೋ ಬದಲಿಸಿದ ಶೆಹಜಾದ್ ಪೂನಾವಾಲಾ; ರಾಜೀನಾಮೆ ಊಹಾಪೋಹ

ಬಿಜೆಪಿಗೆ ಗುಡ್‌ಬೈ ಸೂಚನೆ? X ಬಯೋ ಬದಲಿಸಿದ ಶೆಹಜಾದ್ ಪೂನಾವಾಲಾ; ರಾಜೀನಾಮೆ ಊಹಾಪೋಹ

Hosadigantha 3 weeks ago

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಜೆಪಿಯ ಪ್ರಮುಖ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದ ಶೆಹಜಾದ್ ಪೂನಾವಾಲಾ ಅವರ X (ಹಿಂದಿನ ಟ್ವಿಟರ್) ಖಾತೆಯಲ್ಲಿನ ಬಯೋ ಬದಲಾವಣೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ತಮ್ಮ ಬಯೋದಿಂದ "BJP National Spokesperson" ಎಂಬ ಹುದ್ದೆಯನ್ನು ತೆಗೆದುಹಾಕಿರುವ ಅವರು, "ಪ್ರಧಾನಿ ನರೇಂದ್ರ ಮೋದಿ ಅವರ ಜೀವಮಾನದ ಅನುಯಾಯಿ" ಎಂಬ ಉಲ್ಲೇಖವನ್ನು ಮಾತ್ರ ಉಳಿಸಿಕೊಂಡಿದ್ದಾರೆ.

ಈ ಬೆಳವಣಿಗೆಯ ಬೆನ್ನಲ್ಲೇ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವ ಕುರಿತು ಊಹಾಪೋಹಗಳು ಹರಿದಾಡುತ್ತಿವೆ.

X ಬಯೋ ಬದಲಾವಣೆ ಏಕೆ ಚರ್ಚೆ?

ಶೆಹಜಾದ್ ಪೂನಾವಾಲಾ ತಮ್ಮ ಹೊಸ ಬಯೋದಲ್ಲಿ "Religion: Islam, Culture: Hindu, Ideology: Bhartiya" ಎಂದು ಉಲ್ಲೇಖಿಸಿದ್ದು, ಬಿಜೆಪಿ ರಾಷ್ಟ್ರೀಯ ವಕ್ತಾರ ಎಂಬ ಹುದ್ದೆಯನ್ನು ತೆಗೆದುಹಾಕಿದ್ದಾರೆ. ಇದರಿಂದ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುತ್ತಿರುವರೇ ಎಂಬ ಪ್ರಶ್ನೆಗಳು ಎದ್ದಿವೆ.

20 ವರ್ಷಗಳ ಬಳಿಕ ಬಂಗಾಳಕ್ಕೆ ಮರಳಿದ ಲೇಖಕಿ ನಸ್ರೀನ್‌

ಕಾಂಗ್ರೆಸ್‌ನಿಂದ ಬಿಜೆಪಿ ತನಕ ರಾಜಕೀಯ ಪಯಣ

ವೃತ್ತಿಯಲ್ಲಿ ವಕೀಲರಾಗಿರುವ ಶೆಹಜಾದ್ ಪೂನಾವಾಲಾ 2017ರಲ್ಲಿ ಕಾಂಗ್ರೆಸ್‌ನ ಆಂತರಿಕ ಚುನಾವಣೆ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತಿ ಸುದ್ದಿಯಾಗಿದ್ದರು. ಬಳಿಕ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ರಾಷ್ಟ್ರೀಯ ವಕ್ತಾರರಾಗಿ ಹಲವು ಟಿವಿ ಚರ್ಚೆಗಳಲ್ಲಿ ಪಕ್ಷದ ಪರವಾಗಿ ಪ್ರಮುಖ ಮುಖವಾಗಿ ಗುರುತಿಸಿಕೊಂಡಿದ್ದರು.

ರಾಜೀನಾಮೆ ಕುರಿತು ಅಧಿಕೃತ ಮಾಹಿತಿ ಇಲ್ಲ

ಇತ್ತೀಚೆಗೆ ಸಕ್ರಿಯ ರಾಜಕೀಯದಿಂದ ದೂರ ಸರಿಯುವ ಸಮಯ ಬಂದಿದೆ ಎಂದು ಹಳೆಯ ಸಂದರ್ಶನದ ವಿಡಿಯೋವನ್ನು ಅವರು ಹಂಚಿಕೊಂಡಿದ್ದರು. ಆದರೆ X ಬಯೋ ಬದಲಾವಣೆಯ ಕುರಿತು ಅಥವಾ ರಾಜೀನಾಮೆ ಬಗ್ಗೆ ಬಿಜೆಪಿ ಅಥವಾ ಶೆಹಜಾದ್ ಪೂನಾವಾಲಾ ಅವರಿಂದ ಯಾವುದೇ ಅಧಿಕೃತ ಹೇಳಿಕೆ ಇನ್ನೂ ಪ್ರಕಟವಾಗಿಲ್ಲ.

Dailyhunt
Disclaimer: This content has not been generated, created or edited by Dailyhunt. Publisher: Hosadigantha