Dailyhunt Logo
  • Light mode
    Follow system
    Dark mode
    • Play Story
    • App Story
CRIME: ರಾಜ್ಯದಲ್ಲಿ ರುಂಡ ಮುಂಡ ಬೇರ್ಪಟ್ಟ ಶವ ಪತ್ತೆ ಪ್ರಕರಣ, ಇಬ್ಬರ ಬಂಧನ!

CRIME: ರಾಜ್ಯದಲ್ಲಿ ರುಂಡ ಮುಂಡ ಬೇರ್ಪಟ್ಟ ಶವ ಪತ್ತೆ ಪ್ರಕರಣ, ಇಬ್ಬರ ಬಂಧನ!

ಕಲಬುರಗಿ: ಜಿಲ್ಲೆ‌ಯ (Kalaburagi) ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದಲ್ಲಿ ರುಂಡ ಮುಂಡ ಬೇರ್ಪಟ್ಟ ಯುವಕನ ಶವ ಪತ್ತೆ ಪ್ರಕರಣವನ್ನು ಗಾಣಗಾಪುರ ಪೊಲೀಸರು (Police) ಕೇವಲ 48 ಗಂಟೆಗಳಲ್ಲಿ ಭೇದಿಸಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಸೆಪ್ಟೆಂಬರ್ 25ರಂದು ಕಲಬುರಗಿ ಜಿಲ್ಲೆ‌ಯ ಅಫಜಲಪುರ ತಾಲೂಕಿನ ಗೊಬ್ಬರು (ಬಿ) ಗ್ರಾಮದ ಜಮೀನಿನಲ್ಲಿ ಓರ್ವ ಯುವಕನ ಶವ ಸಿಕ್ಕಿತ್ತು.‌ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಗಾಣಗಾಪುರ ಪೊಲೀಸರು ರುಂಡ-ಮುಂಡ ಬೇರೆ ಬೇರೆಯಾದ ಪ್ರಕರಣವನ್ನು ದಾಖಲಸಿಕೊಂಡಿದ್ದು, ಗ್ರಾಮದಲ್ಲಿ ಯಾರಾದರೂ ನಾಪತ್ತೆ ಆಗಿದ್ದಾರಾ ಎಂದು ವಿಚಾರಿಸಿದಾಗ ಗೊಬ್ಬರು ಗ್ರಾಮದ 22 ವರ್ಷದ ಖಲೀಂ ಸಾಬ್ ನಾಪತ್ತೆಯಾಗಿದ್ದ‌ ಎಂಬ ಮಾಹಿತಿ ಸಿಕ್ಕಿತ್ತು.‌

ತಕ್ಷಣ ಕುಟುಂಬಸ್ಥರನ್ನ ಸ್ಥಳಕ್ಕೆ‌ ಕರೆಸಿ ವಿಚಾರಿಸಿದಾಗ ಅಲ್ಲಿ ಶವವಾಗಿ ಬಿದ್ದಿದ್ದು ಖಲೀಂ ಸಾಬ್​​ ಎನ್ನುವುದು ಗೊತ್ತಾಗಿದೆ. ಈ ಮಧ್ಯೆ ಶವ ಡಿಕಂಪೋಸ್​​ ಆಗಿತ್ತು. ನಂತರವ ವಿಚಾರಣೆ ಮುಂದುವರೆಸಿದಾಗ ಹಣದ ವಿಚಾರವಾಗಿ ನಂದಿಕೂರ ತಾಂಡಾದ ಸಂದೀಪ್‌ ಪವಾರ್ ಮತ್ತು ಸಂದೀಪ್‌ ಚವ್ಹಾಣ್ ಕೊಲೆ‌ ಮಾಡಿ ಪರಾರಿ ಆಗಿದ್ದರು ಎನ್ನುವುದು ಗೊತ್ತಾಗಿದೆ.‌ ಸದ್ಯ ಪೊಲೀಸರು ಇಬ್ಬರನ್ನ ಬಂಧಿ‌ಸಿ ನ್ಯಾಯಂಗ ಬಂಧನಕ್ಕೊಪ್ಪಿಸಿದ್ದಾರೆ.

ಬಂಧಿತರ ವಿಚಾರಣೆ ನಡೆಸಿದಾಗ, ಸೆಪ್ಟೆಂಬರ್​ 25ರಂದು ಆರೋಪಿಗಳು ತಮ್ಮೂರಿನಿಂದ ಗಾಣಗಾಪುರಕ್ಕೆ ಹೋಗಿ ವಾಪಸ್ ಬರುವಾಗ ಬೈಕ್ ಪೆಟ್ರೋಲ್ ಖಾಲಿಯಾಗಿದ್ದು ತಳ್ಳಿಕೊಂಡು ಬರುತ್ತಿದ್ದರು. ಆಗ ಈ ಖಲೀಂ ಸಾಬ್ ಇವರನ್ನು ಮಾತನಾಡಿಸಿದ್ದಾನೆ. ಅವಾಗ ಪೆಟ್ರೋಲ್ ತಂದು ಕೊಡುತ್ತೇನೆ ನನಗೆ ಹಣ ಕೊಡಬೇಕು ಎಂದಿದ್ದನಂತೆ. ಅದರಂತೆ ಪೆಟ್ರೋಲ್ ತಂದು ಕೊಟ್ಟಿದ್ದು, ಆರೋಪಿಗಳು 200 ರೂ ನೀಡಿದ್ದಾರೆ. ಆದರೆ ಇದು ಸಾಕಗಲ್ಲ ಇನ್ನು ಬೇಕು ಎಂದು ಪೀಡಿಸಿದ್ದನಂತೆ. ಈ ವೇಳೆ ಖಲೀಂ ಮತ್ತು ಹಂತಕರ ಮಧ್ಯೆ ಜಗಳ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಖಲೀಂನ ಕೊಲೆ ಮಾಡಿದ್ದಾರೆ. ಅಲ್ಲದೇ ಡೆಡ್​ ಬಾಡಿಯನ್ನ ತೊಗರಿ ಬೆಳೆದ ಜಮೀನನಲ್ಲಿ ಯಾರಿಗೂ ಗೊತ್ತಾಗದ ಹಾಗೆ ಎಸೆದು ಪರಾರಿ ಆಗಿದ್ದಾರೆ.

ಇದನ್ನೂ ಓದಿ: KAMBALA : ಕಂಬಳದ ದಂತಕಥೆ ನಂದಳಿಕೆ ಪಾಂಡು ಇನ್ನಿಲ್ಲ - 201 ಪದಕಗಳ ವೀರನಿಗೆ ವಿದಾಯ

Dailyhunt
Disclaimer: This content has not been generated, created or edited by Dailyhunt. Publisher: Navasamaja