ಬೆಂಗಳೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಇವರ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ವಿಜಯನಗರದಲ್ಲಿ ನಡೆದ ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್(DK Shivakumar) ಹೊರ ಊರುಗಳಿಂದ ನಗರಕ್ಕೆ ಆಗಮಿಸುವ ವೀರಶೈವ-ಲಿಂಗಾಯತ(Veerashaiva-Lingayat) ಮಠಾಧೀಶರು ಹಾಗೂ ಭಕ್ತಾದಿಗಳಿಗಾಗಿ ಮಹತ್ವದ ಘೋಷಣೆಯೊಂದನ್ನು ಮಾಡಿದರು.
ಸಮ್ಮೇಳನದಲ್ಲಿ ಮಾತನಾಡಿದ ಅವರು, ಹೊರ ಊರುಗಳಿಂದ ರಾಜಧಾನಿಗೆ ಬರುವ ಮಠಾಧೀಶರು ಮತ್ತು ಭಕ್ತರಿಗೆ ಉಳಿದುಕೊಳ್ಳಲು ಸೂಕ್ತ ಸೌಲಭ್ಯ ಕಲ್ಪಿಸಲು ಜಾಗ ನೀಡುವಂತೆ ಸಮುದಾಯದ ಮುಖಂಡರು ಮನವಿ ಮಾಡಿದ್ದರು. ಅದಕ್ಕಾಗಿ ಬೆಂಗಳೂರಿನ ಹೊರವಲಯದಲ್ಲಿ 2 ಎಕರೆ ಜಾಗವನ್ನು ಸರ್ಕಾರ ನೀಡಲಿದೆ ಎಂದಿದ್ದಾರೆ. 'ಜಾಗ ನಮ್ಮದು, ಕಟ್ಟಡ ನಿಮ್ಮದು'! 'ಜಾಗ ನಮ್ಮದು, ಕಟ್ಟಡ ನಿಮ್ಮದು'. ಈ ಭವನಕ್ಕೆ ವೀರಗಂಗಾಧರ ಸ್ವಾಮೀಜಿ ಹೆಸರಿಡುತ್ತೀರೋ ಅಥವಾ ಬೇರೆ ಮಹನೀಯರ ಹೆಸರಿಡುತ್ತೀರೋ ಅದು ನಿಮಗೆ ಬಿಟ್ಟ ವಿಚಾರ ಎಂದರು. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು'! ಕೇವಲ ವೀರಶೈವ-ಲಿಂಗಾಯತ ಸಮಾಜ ಒಗ್ಗೂಡಿದರೆ ಸಾಲದು, ಸಮಾಜದ ಎಲ್ಲ ವರ್ಗಗಳನ್ನೂ ಜತೆಯಾಗಿ ಕೊಂಡೊಯ್ಯಬೇಕು. ಪ್ರಸ್ತುತ ದಿನಗಳಲ್ಲಿ ಮಠಗಳಿಗೆ ಜಾತಿ ಅನಿವಾರ್ಯವೆನಿಸಿದರೂ, ಮಾನವ ಧರ್ಮದ ಪ್ರತಿಪಾದನೆಯಿಂದ ಮಾತ್ರ ಮಠಗಳಿಗೆ ನಿಜವಾದ ಶಕ್ತಿ ಬರುತ್ತದೆ. 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎಂಬ ತತ್ವವನ್ನು ಮರೆಯದೆ ನಾವೆಲ್ಲರೂ ಮುನ್ನಡೆಯಬೇಕು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: HAVERI : ಆಸ್ಪತ್ರೆ ಕ್ಯಾಂಟೀನ್ ಕೇಸರಿಬಾತ್‌ನಲ್ಲಿ ಹಲ್ಲಿ, ಜಿರಳೆ ಪತ್ತೆ - ಬೆಚ್ಚಿಬಿದ್ದ ರೋಗಿಗಳು!

