Dailyhunt
IRAN: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ರಷ್ಯಾ ಹೇಳಿದ್ದೇನು?

IRAN: ಇರಾನ್‌ನ ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ ಎಲ್ಲಿದ್ದಾರೆ? ರಷ್ಯಾ ಹೇಳಿದ್ದೇನು?

Navasamaja.com 2 weeks ago

ಟೆಹ್ರಾನ್: ಇರಾನ್‌ನ (Iran) ನೂತನ ಸುಪ್ರೀಂ ಲೀಡರ್ ಆಗಿ ಮೊಜ್ತಾಬಾ ಖಮೇನಿ (mojtaba khamenei) ಅಧಿಕಾರ ವಹಿಸಿಕೊಂಡು ಸುಮಾರು ಒಂದು ತಿಂಗಳು ಕಳೆದಿದ್ದರೂ, ಅವರು ಇದುವರೆಗೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಇದು ಅವರ ಆರೋಗ್ಯ ಮತ್ತು ಇರುವಿಕೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಾಕಷ್ಟು ವದಂತಿಗಳಿಗೆ ಕಾರಣವಾಗಿತ್ತು.

ಆದರೆ, ಈ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ರಷ್ಯಾದ (russai) ರಾಯಭಾರಿ ಅಲೆಕ್ಸಿ ಡೆಡೋವ್, ಮೊಜ್ತಾಬಾ ಅವರು ಇರಾನ್‌ನಲ್ಲಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ರಷ್ಯಾದ ಮಾಧ್ಯಮವೊಂದರ ಜೊತೆ ಮಾತನಾಡಿದ ಅಲೆಕ್ಸಿ ಡೆಡೋವ್, ಮೊಜ್ತಾಬಾ ಖಮೇನಿ ದೇಶದೊಳಗೇ ಇದ್ದಾರೆ, ಆದರೆ ಕೆಲವು ಅನಿವಾರ್ಯ ಕಾರಣಗಳಿಂದಾಗಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ತಪ್ಪಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟ ನಂತರ ಅವರ ಪುತ್ರ ಮೊಜ್ತಾಬಾ ಅಧಿಕಾರಕ್ಕೆ ಬಂದಿದ್ದರು. ಈ ದಾಳಿಯಲ್ಲಿ ಮೊಜ್ತಾಬಾ ಕೂಡ ಗಾಯಗೊಂಡಿದ್ದಾರೆ ಎಂದು ಅಮೆರಿಕ ಹೇಳುತ್ತಲೇ ಬಂದಿದೆ.

ಮೊಜ್ತಾಬಾ ಖಮೇನಿ ಅವರು ಚಿಕಿತ್ಸೆಗಾಗಿ ರಷ್ಯಾಗೆ ತೆರಳಿದ್ದಾರೆ ಎಂಬ ವದಂತಿಗಳೂ ಹರಡಿದ್ದವು. ಆದರೆ ರಷ್ಯಾ ಮತ್ತು ಇರಾನ್ ನಡುವಿನ ನಿಕಟ ರಾಜತಾಂತ್ರಿಕ ಸಂಬಂಧದ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಇರಾನ್‌ನ ನಾಯಕತ್ವದ ಬಗ್ಗೆ ಅನಿಶ್ಚಿತತೆ ಇದ್ದರೂ, ರಷ್ಯಾ ತನ್ನ ಬೆಂಬಲವನ್ನು ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಮೊಜ್ತಾಬಾ ಅವರ ಹೆಸರಿನಲ್ಲಿ ಹಲವು ಹೇಳಿಕೆಗಳು ರಾಷ್ಟ್ರೀಯ ದೂರದರ್ಶನದಲ್ಲಿ ಬಿತ್ತರವಾಗಿದ್ದರೂ, ಅವರು ನೇರವಾಗಿ ಕಾಣಿಸಿಕೊಳ್ಳದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿರುವು ಗೊತ್ತೇ ಇದೆ.

ಸುಮಾರು ನಾಲ್ಕು ದಶಕಗಳ ಕಾಲ ತೆರೆಯ ಮರೆಯಲ್ಲಿಯೇ ಪ್ರಭಾವ ಬೀರಿದ್ದ 56 ವರ್ಷದ ಮೊಜ್ತಾಬಾ, ಈಗ ದೇಶದ ಅತ್ಯುನ್ನತ ಸ್ಥಾನದಲ್ಲಿದ್ದಾರೆ. ಅವರ ಅನುಪಸ್ಥಿತಿಯ ನಡುವೆಯೂ ಇರಾನ್‌ನ ಜನರು ಬೀದಿಗಿಳಿದು ತಮ್ಮ ನಿಷ್ಠೆಯನ್ನು ಪ್ರದರ್ಶಿಸುತ್ತಿದ್ದಾರೆ. ಯುದ್ಧದ ಸಮಯದಲ್ಲಿ ದೇಶದ ನಾಯಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದು ಇರಾನ್‌ನ ಆಡಳಿತ ವ್ಯವಸ್ಥೆಯಲ್ಲಿ ವ್ಯಕ್ತಿಗಿಂತ ಸಂಸ್ಥೆಗಳು ಮತ್ತು ಭದ್ರತಾ ಪಡೆಗಳು ಹೆಚ್ಚು ಪ್ರಬಲವಾಗಿವೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಸದ್ಯಕ್ಕೆ ಮೊಜ್ತಾಬಾ ಅವರು ಎಲ್ಲಿಂದ ಆಡಳಿತ ನಡೆಸುತ್ತಿದ್ದಾರೆ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಇದನ್ನೂಓದಿ: ಭಾರತೀಯ ಸ್ನೇಹಿತರೇ, ನೀವು ಸುರಕ್ಷಿತ ಕೈಗಳಲ್ಲಿದ್ದೀರಿ.. ಆತಂಕ ಬೇಡ - ಇರಾನ್ ಪೋಸ್ಟ್!

Dailyhunt
Disclaimer: This content has not been generated, created or edited by Dailyhunt. Publisher: Navasamaja