Dailyhunt
MALLIKARJUN KHARGE: ಕೇಂದ್ರವೇ ಎಲ್​​​​​​​​​ಪಿಜಿ ಸಮಸ್ಯೆ ಸರಿಪಡಿಸಲಿ, ಅದು ಅವರ ಜವಾಬ್ದಾರಿ: ಖರ್ಗೆ

MALLIKARJUN KHARGE: ಕೇಂದ್ರವೇ ಎಲ್​​​​​​​​​ಪಿಜಿ ಸಮಸ್ಯೆ ಸರಿಪಡಿಸಲಿ, ಅದು ಅವರ ಜವಾಬ್ದಾರಿ: ಖರ್ಗೆ

Navasamaja.com 6 days ago

ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಗಂಭೀರ ಪರಿಸ್ಥಿತಿಯ ಕುರಿತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun kharge) ಅವರು ಕಳವಳ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರದ (Central Government) ನಡೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದಲ್ಲಿ ತಲೆದೂರಿರುವ ಗ್ಯಾಸ್ ಅಭಾವವನ್ನು ಸರಿಪಡಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದಾಗಿದೆ. ಸರ್ಕಾರವು ಕೂಡಲೇ ಎಚ್ಚೆತ್ತುಕೊಂಡು ಅಗತ್ಯವಿರುವ ಗ್ಯಾಸ್ ಪೂರೈಕೆಯನ್ನು ಖಚಿತಪಡಿಸಬೇಕು. ಒಂದು ವೇಳೆ ಪೂರೈಕೆಯಲ್ಲಿ ವ್ಯತ್ಯಯವಾದರೆ, ಬೇರೆ ಯಾವುದೇ ದೇಶಗಳಿಂದಲಾದರೂ ಗ್ಯಾಸ್ ಆಮದು ಮಾಡಿಕೊಂಡು ಜನರ ಬೇಡಿಕೆಯನ್ನು ಪೂರೈಸಬೇಕು" ಎಂದು ಆಗ್ರಹಿಸಿದರು.

ದೇಶದ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಒತ್ತಿ ಹೇಳಿದರು.

ಇದನ್ನೂಓದಿ: ಬೆಂಗಳೂರಲ್ಲಿ ಗ್ಯಾಸ್‌ ಅಭಾವ, ಶೇ.50ರಷ್ಟು ಬಂಕ್‌ಗಳು ಬಂದ್!

Dailyhunt
Disclaimer: This content has not been generated, created or edited by Dailyhunt. Publisher: Navasamaja