Dailyhunt Logo
  • Light mode
    Follow system
    Dark mode
    • Play Story
    • App Story
R VEERAMANI: ಉದ್ಯಮಿ ವೀರಮಣಿ ವಿರುದ್ಧ ಮತ್ತೊಂದು ಪೋಕ್ಸೊ ಪ್ರಕರಣ ದಾಖಲು

R VEERAMANI: ಉದ್ಯಮಿ ವೀರಮಣಿ ವಿರುದ್ಧ ಮತ್ತೊಂದು ಪೋಕ್ಸೊ ಪ್ರಕರಣ ದಾಖಲು

ಚೆನ್ನೈ : ಗ್ರಾನೈಟ್ ಉದ್ಯಮಿ, 84 ವರ್ಷದ ಆರ್. ವೀರಮಣಿ (R. Veeramani) ವಿರುದ್ಧ ಚೆನ್ನೈ ಪೊಲೀಸರು ಮತ್ತೊಂದು ಪೋಕ್ಸೊ (POCSO) ಪ್ರಕರಣವನ್ನು ದಾಖಲಿಸಿದ್ದಾರೆ. ತಮ್ಮ ಅಪ್ರಾಪ್ತ ಮಗಳಿಗೆ ವೀರಮಣಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆಯ ದೂರು ಸ್ವೀಕರಿಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಈಗಾಗಲೇ ಇವರ ಮೇಲೆ ದಾಖಲಾಗಿದ್ದ ಪ್ರಕರಣಗಳ ನಡುವೆ ಇದೀಗ ಎರಡನೇ ಪೋಕ್ಸೊ ಪ್ರಕರಣ ದಾಖಲಾದಂತಾಗಿದೆ.

ಈಗಾಗಲೇ ಪೋಕ್ಸೊ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿ ಆಗಸ್ಟ್ 29ರಿಂದ ಚೆನ್ನೈನ ಪುಳಲ್ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ವೀರಮಣಿಯವರನ್ನು ಜೈಲು ಅಧಿಕಾರಿಗಳ ಮೂಲಕ ಈ ಎರಡನೇ ಪ್ರಕರಣದಲ್ಲೂ ಪೊಲೀಸರು ಔಪಚಾರಿಕವಾಗಿ ಬಂಧಿಸಿದ್ದಾರೆ. ತಮಿಳುನಾಡು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಮಹೇಶ್ ಕುಮಾರ್ ಅಗರ್ವಾಲ್ ಅವರು ರಚಿಸಿರುವ, ಹೆಚ್ಚುವರಿ ಪೊಲೀಸ್ ಆಯುಕ್ತೆ ಪಿ.ಸಿ. ತೇನ್‌ಮೊಳಿ ನೇತೃತ್ವದ ನಾಲ್ವರು ಹಿರಿಯ ಪೊಲೀಸ್ ಅಧಿಕಾರಿಗಳ ವಿಶೇಷ ತಂಡವು ಈ ತನಿಖೆಯ ಉಸ್ತುವಾರಿ ವಹಿಸಿಕೊಂಡಿದೆ.

ವೀರಮಣಿ ವಿರುದ್ಧದ ಪ್ರಕರಣಗಳ ವ್ಯಾಪ್ತಿ ವಿಸ್ತಾರಗೊಳ್ಳುತ್ತಿದ್ದಂತೆ ತನಿಖಾ ಸಂಸ್ಥೆಯು ಸಾರ್ವಜನಿಕರಿಗೆ ಮಹತ್ವದ ಮನವಿಯೊಂದನ್ನು ಮಾಡಿದೆ. ಆರೋಪಿ ವೀರಮಣಿ ಅಥವಾ ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರ ಬಳಿಯಾದರೂ ದೂರುಗಳು, ದಾಖಲೆಗಳು ಅಥವಾ ಯಾವುದೇ ಸಾಕ್ಷ್ಯಾಧಾರಗಳಿದ್ದರೆ ಮುಕ್ತವಾಗಿ ಮುಂದೆ ಬಂದು ತನಿಖಾಧಿಕಾರಿಗಳನ್ನು ಸಂಪರ್ಕಿಸುವಂತೆ ಕೋರಿದೆ.

ಇದಕ್ಕಾಗಿ ಪ್ರತ್ಯೇಕ ವಾಟ್ಸಾಪ್ ಸಂಖ್ಯೆಯನ್ನು ಒದಗಿಸಲಾಗಿದ್ದು, ಮಾಹಿತಿ ನೀಡುವವರ ಗುರುತನ್ನು ಕಟ್ಟುನಿಟ್ಟಾಗಿ ಗೌಪ್ಯವಾಗಿಡಲಾಗುವುದು ಮತ್ತು ಬರುವ ಪ್ರತಿಯೊಂದು ಸುಳಿವಿನ ಮೇಲೂ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚೆನ್ನೈ ಪೊಲೀಸರು ತಿಳಿಸಿದ್ದಾರೆ.

GYANESH KUMAR: ಚು.ಆಯೋಗದಲ್ಲಿ ಏಕಪಕ್ಷೀಯ ನಿರ್ಧಾರ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ಮತ್ತೋರ್ವ ಅರ್ಜಿದಾರ!

BK HARIPRASAD: ಆರ್​​​​​​​​​ಎಸ್​​​​ಎಸ್​​​​-ಬಿಜೆಪಿಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು: ಬಿಕೆ ಹರಿಪ್ರಸಾದ್

Dailyhunt
Disclaimer: This content has not been generated, created or edited by Dailyhunt. Publisher: Navasamaja