Dailyhunt
*ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು: 27 ಬೈಕ್ ವಶ*

*ಅಂತರರಾಜ್ಯ ಬೈಕ್ ಕಳ್ಳರನ್ನು ಬಂಧಿಸಿದ ಬೆಳಗಾವಿ ಪೊಲೀಸರು: 27 ಬೈಕ್ ವಶ*

Pragativahini 2 weeks ago

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಹಾಗೂ ಮಹಾರಾಷ್ಟ್ರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಗೋಕಾಕ ಮೂಲದ ಇಬ್ಬರು ಕಳ್ಳರನ್ನು ಬೆಳಗಾವಿ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.

ಗೋಕಾಕ ಮೂಲದ ಲಕ್ಷ್ಮಣ ವಿರುಪಾಕ್ಷಿ ಕಣಬರಗಿ (31) ಹಾಗೂ ಫಕಿರಪ್ಪ ಕರಿಗಾರ (25) ಬಂಧಿತ ಆರೋಪಿಗಳು.

ಬಂದಿತ ಇಬ್ಬರು ಖದೀಮರಿಂದ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪೊಲೀಸರ 18,30,000 ಮೌಲ್ಯದ 27 ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳು ಸಂಕೇಶ್ವರ ಪಟ್ಟಣದಲ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮತ್ತು ಬೆಳಗಾವಿ ಶಹರದ ವಿವಿಧ ಪೊಲೀಸ್ ಠಾಣೆ ಹಾಗೂ ಮಹಾರಾಷ್ಟ್ರದ ಚಂದಗಡ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ಕಳವು ಮಾಡಿದ ಒಟ್ಟು 26 ಬೈಕ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 1 ಹೀಗೆ ಒಟ್ಟು.18.30 ಲಕ್ಷ ಮೌಲ್ಯದ 27 ಬೈಕ್ ಗಳನ್ನು ಜಪ್ತ ಮಾಡಿ ಆರೋಪಿಗಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಸದರಿ ಪ್ರಕರಣದಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಸಿಪಿಐ ಎಸ್.ಎಮ್ ಅವಜಿ, ಪಿಎಸ್‌ಐಎಸ್ ಶೆಟ್ಟಿನ್ನವರ, ಪಿ.ಎಸ್.ಐ, ವಿಠಲ ನಾಯಿಕ, ಎಎಸ್‌ಐ ಎಲ್.ಎಸ್ ಖೋತ ಹಾಗೂ ಸಿಬ್ಬಂದಿ ಜನರಾದ ಎಸ್.ಎಲ್.ಗಳತಗಿ, ಎ.ಬಿ.ಮುರ್ಕಿಭಾವಿ, ಎಸ್.ಎಮ್.ಯಕ್ಷಂಬಿ, ಕೆ.ಡಿ.ಹಿರೇಮಠ, ಎಸ್.ಬಿ.ಪೂಜೇರಿ, ಎಸ್.ಎಸ್.ಶುದರೆ, ಜಿ.ಕುಡ್ಡಗೋಳ, ಬಿ.ಟಿ .ಪಾಟೀಲ, ಎಮ್.ಕೆ.ಅತ್ತಾರ, ಎಸ್.ಕೆ.ಹೊಸೂರ, ಎಸ್.ಬಿ.ಮಠಪತಿ ಹಾಗೂ ಟೆಕ್ನಿಕಲ್ ಸೆಲ್ ಬೆಳಗಾವಿ ಸಿಬ್ಬಂದಿ ಜನರಾದ ವಿನೋದ ತಕ್ಕನ್ನವರ, ಸಚಿನ ಪಾಟೀಲ ಇವರ ಕಾರ್ಯವನ್ನು ಬೆಳಗಾವಿ ಎಸ್‌ಪಿ ರಾಮರಾಜನ್ ಅವರು ಶ್ಲಾಘಿಸಿದ್ದಾರೆ.

*ವ್ಯಾಪಾರ ದ್ವೇಷ: ಪಕ್ಕದಲ್ಲಿದ್ದ ಫರ್ನಿಚರ್ ಅಂಗಡಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು: ಮೂವರು ಅರೆಸ್ಟ್*

Dailyhunt
Disclaimer: This content has not been generated, created or edited by Dailyhunt. Publisher: Pragativahini