Dailyhunt Logo
  • Light mode
    Follow system
    Dark mode
    • Play Story
    • App Story
ಆಂಥ್ರೋಪಿಕ್‌ನಲ್ಲಿ 25 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್ ಸಜ್ಜು

ಆಂಥ್ರೋಪಿಕ್‌ನಲ್ಲಿ 25 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್ ಸಜ್ಜು

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಆಂಥ್ರೋಪಿಕ್‌ನಲ್ಲಿ 25 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್ ಸಜ್ಜು

ಒಂದು ಸಾಲಿನಲ್ಲಿಆಂಥ್ರೋಪಿಕ್‌ನಲ್ಲಿ 25 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಅಮೆಜಾನ್ ನಿರ್ಧರಿಸಿದ್ದು, ಎ.ಐ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ಬಲಪಡಿಸಿಕೊಳ್ಳಲು ಮುಂದಾಗಿದೆ.

ಪ್ರಮುಖ ಮುಖ್ಯಾಂಶಗಳು• ಆಂಥ್ರೋಪಿಕ್‌ನಲ್ಲಿ ಭಾರಿ ಹೂಡಿಕೆಅಮೆಜಾನ್ ಸಂಸ್ಥೆಯು ಕ್ಲಾಡ್ ಎ.ಐ.ನ ಮಾತೃ ಸಂಸ್ಥೆಯಾದ ಆಂಥ್ರೋಪಿಕ್‌ನಲ್ಲಿ ಹೆಚ್ಚುವರಿಯಾಗಿ 25 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡಿದೆ.• ಹೂಡಿಕೆಯ ಹಂತಗಳುಆರಂಭದಲ್ಲಿ 5 ಶತಕೋಟಿ ಡಾಲರ್‌ ಹೂಡಿಕೆ ಮಾಡಲಿದ್ದು, ಆಂಥ್ರೋಪಿಕ್ ನಿಗದಿತ ಗುರಿಗಳನ್ನು ತಲುಪಿದರಷ್ಟೇ ಉಳಿದ 20 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಾಗುತ್ತದೆ.• ಕ್ಲೌಡ್ ಸೇವೆಗಳ ಬಳಕೆಹೂಡಿಕೆಗೆ ಪ್ರತಿಯಾಗಿ, ಆಂಥ್ರೋಪಿಕ್ ಮುಂದಿನ 10 ವರ್ಷಗಳಲ್ಲಿ ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್ ಸೇವೆಗಳಿಗಾಗಿ 100 ಶತಕೋಟಿ ಡಾಲರ್ ಖರ್ಚು ಮಾಡಲು ಭರವಸೆ ನೀಡಿದೆ.• ಸ್ವಂತ ಚಿಪ್‌ಗಳ ಬಳಕೆಎನ್ವಿಡಿಯಾ ಚಿಪ್‌ಗಳಿಗೆ ಬದಲಾಗಿ, ಅಮೆಜಾನ್ ಸ್ವತಃ ನಿರ್ಮಿಸಿರುವ ವಿಶೇಷ ಕಂಪ್ಯೂಟರ್ ಚಿಪ್‌ಗಳನ್ನು ಬಳಸುವುದನ್ನು ಆಂಥ್ರೋಪಿಕ್ ಮುಂದುವರಿಸಲಿದೆ.• ಮೂಲಸೌಕರ್ಯದ ಅನಿವಾರ್ಯತೆಬೆಳೆಯುತ್ತಿರುವ ಬಳಕೆದಾರರ ಬೇಡಿಕೆಗೆ ಅನುಗುಣವಾಗಿ, ಆಂಥ್ರೋಪಿಕ್ ತನ್ನ ಮೂಲಸೌಕರ್ಯವನ್ನು ವಿಸ್ತರಿಸಲು ಈ ಹೂಡಿಕೆ ಅತ್ಯಗತ್ಯ ಎಂದು ಸಿಇಒ ಡೇರಿಯೊ ಅಮೊಡೆ ತಿಳಿಸಿದ್ದಾರೆ.ಪ್ರಮುಖ ಅಂಕಿಅಂಶಗಳು25 ಶತಕೋಟಿ ಡಾಲರ್ಅಮೆಜಾನ್‌ನ ಹೆಚ್ಚುವರಿ ಹೂಡಿಕೆ8 ಶತಕೋಟಿ ಡಾಲರ್ಈ ಹಿಂದಿನ ಹೂಡಿಕೆ100 ಶತಕೋಟಿ ಡಾಲರ್10 ವರ್ಷಗಳಲ್ಲಿ ತಗಲುವ ವೆಚ್ಚ10 ವರ್ಷಗಳುಒಪ್ಪಂದದ ಅವಧಿಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಕ್ಲಾಡ್‌ ಎ.ಐ.ನ ಮಾತೃ ಸಂಸ್ಥೆ ಆಂಥ್ರೋಪಿಕ್‌ನಲ್ಲಿ ಹೆಚ್ಚುವರಿ 25 ಶತಕೋಟಿ ಡಾಲರ್‌ ಹೂಡಿಕೆ ಮಾಡಲು ಅಮೆಜಾನ್ ಒಪ್ಪಿದೆ. ತಂತ್ರಜ್ಞಾನ ದಿಗ್ಗಜ ಮತ್ತು ಎ.ಐ. ಸ್ಟಾರ್ಟ್‌ಅಪ್‌ ನಡುವೆ ನಡೆಯುತ್ತಿರುವ ಮತ್ತೊಂದು ಬೃಹತ್ ಮೊತ್ತದ ಒಪ್ಪಂದ ಇದಾಗಿದೆ.

ಇರಾನ್ ಮೇಲೆ ದಾಳಿ ನಡೆಸಲು ಆಂಥ್ರೋಪಿಕ್‌ನ 'ಕ್ಲಾಡ್' ಎ.ಐ ಬಳಸಿದ ಅಮೆರಿಕ

ಈ ಹಿಂದೆ ಆಂಥ್ರೋಪಿಕ್‌ನಲ್ಲಿ ಅಮೆಜಾನ್ 8 ಶತಕೋಟಿ ಡಾಲರ್ ಹೂಡಿಕೆ ಮಾಡಿದೆ. ಆ ಮೂಲಕ ಆಂಥ್ರೋ‍ಪಿಕ್‌ನ ಅತಿದೊಡ್ಡ ಹೂಡಿಕೆದಾರರಲ್ಲಿ ಒಂದಾಗಿದೆ. ಇತ್ತೀಚಿನ ಒಪ್ಪಂದದ ಪ್ರಕಾರ, ಆರಂಭದಲ್ಲಿ ಅಮೆಜಾನ್ 5 ಶತಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ. ನಿಗದಿತ ಗುರಿಗಳನ್ನು ಆಂಥ್ರೋಪಿಕ್ ತಲುಪಿದರೆ, ಹೆಚ್ಚುವರಿ 20 ಶತಕೋಟಿ ಡಾಲರ್‌ಗಳನ್ನು ಮತ್ತೆ ಹೂಡಿಕೆ ಮಾಡಲಿದೆ.

ಈ ಹೂಡಿಕೆಗೆ ಪ್ರತಿಯಾಗಿ, ಆಂಥ್ರೋಪಿಕ್ ಮುಂದಿನ 10 ವರ್ಷಗಳಲ್ಲಿ ಅಮೆಜಾನ್‌ನ ಕ್ಲೌಡ್ ಕಂಪ್ಯೂಟಿಂಗ್ ವ್ಯವಹಾರದ ಕಂಪ್ಯೂಟಿಂಗ್ ಮತ್ತು ಇತರ ಸೇವೆಗಳಿಗಾಗಿ 100 ಶತಕೋಟಿ ಡಾಲರ್ ವೆಚ್ಚ ಮಾಡುವುದಾಗಿ ಭರವಸೆ ನೀಡಿದೆ. ಎ.ಐ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಸಿಲಿಕಾನ್ ವ್ಯಾಲಿಯ ಚಿಪ್ ತಯಾರಕ ಸಂಸ್ಥೆ ಎನ್ವಿಡಿಯಾದ ದುಬಾರಿ ಬೆಲೆಯ ಚಿಪ್‌ಗಳಿಗೆ ಪರ್ಯಾಯವಾಗಿ ಅಮೆಜಾನ್ ವಿನ್ಯಾಸಗೊಳಿಸಿರುವ ವಿಶೇಷ ಕಂಪ್ಯೂಟರ್ ಚಿಪ್‌ಗಳನ್ನು ಬಳಸುವುದನ್ನು ಆಂಥ್ರೋಪಿಕ್ ಮುಂದುವರಿಸಲಿದೆ.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಮತ್ತು ಎನ್ವಿಡಿಯಾ ಕಂಪನಿಗಳು ಆಂಥ್ರೋಪಿಕ್ ಮತ್ತು ಓಪನ್ ಎಐನಂತಹ ಕಂಪನಿಗಳಲ್ಲಿ ಭಾರಿ ಮೊತ್ತವನ್ನು ಹೂಡಿಕೆ ಮಾಡಿವೆ. ಬದಲಾಗಿ, ಈ ಸ್ಟಾರ್ಟ್‌ಅಪ್‌ಗಳು ಅದೇ ಹೂಡಿಕೆದಾರರಿಂದ ಭಾರಿ ಪ್ರಮಾಣದ ಕಂಪ್ಯೂಟಿಂಗ್ ಶಕ್ತಿಯನ್ನು ಖರೀದಿಸುತ್ತವೆ.

'ತಮ್ಮ ಕೆಲಸಕ್ಕೆ ಕ್ಲಾಡ್ ಹೆಚ್ಚು ಅತ್ಯಗತ್ಯ ಎಂದು ನಮ್ಮ ಬಳಕೆದಾರರು ಹೇಳುತ್ತಿದ್ದಾರೆ. ಹೀಗಾಗಿ ವೇಗವಾಗಿ ಬೆಳೆಯುತ್ತಿರುವ ಬೇಡಿಕೆಗೆ ಅನುಗುಣವಾಗಿ ನಾವು ಮೂಲಸೌಕರ್ಯವನ್ನು ನಿರ್ಮಿಸುವ ಅಗತ್ಯವಿದೆ' ಎಂದು ಆಂಥ್ರೋಪಿಕ್ ಸಿಇಒ ಡೇರಿಯೊ ಅಮೊಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

(ದಿ ನ್ಯೂಯಾರ್ಕ್ ಟೈಮ್ಸ್ ವರದಿ)

ಜಗತ್ತಿನ ಯುದ್ಧಭೂಮಿಯಲ್ಲಿ ಒಂದೇ ಹೇಷಾರವ; ಏಯ್..ಏಯ್.. AI!
Dailyhunt
Disclaimer: This content has not been generated, created or edited by Dailyhunt. Publisher: Prajavani