Dailyhunt
ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಿದ ಸಂಜು ಸ್ಯಾಮ್ಸನ್

ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಉಡುಗೊರೆಯಾಗಿ ನೀಡಿದ ಸಂಜು ಸ್ಯಾಮ್ಸನ್

ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿಕೆಟ್ ಕೀಪರ್, ಬ್ಯಾಟರ್ ಆಗಿರುವ ಸಂಜು ಸ್ಯಾಮ್ಸನ್ ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಸಂಜು ಅವರ ಸರಳ ವ್ಯಕ್ತಿತ್ವದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಧೋನಿ ಮಾರ್ಗದರ್ಶನ: ಸಂಜು ಸ್ಯಾಮ್ಸನ್ ಕಾತರT20 WC Final| ಫೈನಲ್‌ನಲ್ಲೂ 89 ರನ್: ಕೊಹ್ಲಿ ದಾಖಲೆ ಮುರಿದ ಸಂಜು ಸ್ಯಾಮ್ಸನ್

ಅಭಿಮಾನಿಯೊಂದಿಗೆ ಸಂಜು ಸ್ಯಾಮ್ಸನ್

ಅಭಿಮಾನಿಗೆ ಮೊಬೈಲ್ ಕೊಡಿಸಿದ್ದೇಕೆ ಸಂಜು?

ಪಾಲಕ್ಕಾಡ್‌ನ ಕದಂಬಜಿಪುರಂ ಮೂಲದ ಟಿ. ಶಬರೀಶ್‌ ಎಂಬವರು ಏಪ್ರಿಲ್ 7ರ ಸಂಜೆ ಕದಂಬಜಿಪುರಂ ಪುಂಚಪ್ಪಡಂ ಬಸ್ ನಿಲ್ದಾಣದ ಬಳಿ ಇದ್ದಾಗ, ಸಂಜು ಸ್ಯಾಮ್ಸನ್‌ ಅವರನ್ನು ನೋಡಿದ್ದರು. ಕೂಡಲೇ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದರು.

ಆಗ ಸೆಲ್ಫಿ ತೆಗೆದುಕೊಳ್ಳುವಾಗ ಶಬರೀಶ್ ಅವರ ಮೊಬೈಲಿನ ಡಿಸ್​ಪ್ಲೇ ಹಾಳಾಗಿರುವುದನ್ನು ಸಂಜು ಗಮನಿಸಿದರು. ನಿಮ್ಮ ಮೊಬೈಲ್‌ಗೆ ಏನಾಗಿದೆ ಎಂದು ಸಂಜು ಕೇಳಿದ್ದಾರೆ. ಆಗ ಅಭಿಮಾನಿ ಸಾಫ್ಟ್‌ವೇರ್ ಅಪ್‌ಡೇಟ್‌ ಮಾಡಿದ ಬಳಿಕ ನನ್ನ ಮೊಬೈಲಿನ ಡಿಸ್​ಪ್ಲೇ ಹೀಗಾಗಿದೆ ಎಂದು ಉತ್ತರಿಸಿದ್ದಾರೆ. ಆಗ ಕೂಡಲೇ ಸಂಜು ತಮ್ಮ ಕಾರಿನ ಟ್ರಂಕ್ ತೆರೆದು ಸುಮಾರು ₹40 ಸಾವಿರ ಬೆಲೆ ಬಾಳುವ ಒಂದು ಫೋನ್ ತೆಗೆದು ಶಬರೀಶ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಬಳಿಕ ಸೆಲ್ಫಿಗೆ ಪೋಸ್‌ ಕೊಟ್ಟು, ಕ್ರಿಕೆಟ್ ಚೆನ್ನಾಗಿ ಆಡುವಂತೆ ಸಲಹೆ ನೀಡಿದ್ದಾರೆ.

ಸಂಜು ಅವರ ಸರಳ ವ್ಯಕ್ತಿತ್ವದ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿವೆ. ಸದ್ಯ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಆಡುತ್ತಿರುವ ಸಂಜು, ಆದಷ್ಟು ಬೇಗ ತಮ್ಮ ಫಾರ್ಮ್​ಗೆ ಮರಳಲಿ ಅನ್ನೋದು ಅಭಿಮಾನಿಗಳ ಆಶಯವಾಗಿದೆ.

ಸಂಜು ಸ್ಯಾಮ್ಸನ್ ಅವರ ಅಭಿಮಾನಿ

Dailyhunt
Disclaimer: This content has not been generated, created or edited by Dailyhunt. Publisher: Prajavani