Dailyhunt Logo
  • Light mode
    Follow system
    Dark mode
    • Play Story
    • App Story
ಅಜಿಂಕ್ಯ ಶಿಂದೆ ಹೆಗಲಿಗೆ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ: ದೀಪ್ಕೆ ಘೋಷಣೆ

ಅಜಿಂಕ್ಯ ಶಿಂದೆ ಹೆಗಲಿಗೆ ಜಂತರ್ ಮಂತರ್ ಪ್ರತಿಭಟನೆಯ ನೇತೃತ್ವ: ದೀಪ್ಕೆ ಘೋಷಣೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಪ್ರತಿಭಟನೆಯ ನೇತೃತ್ವವನ್ನು ಸಂಘಟನೆಯ ಉಸ್ತುವಾರಿ ಅಜಿಂಕ್ಯ ಶಿಂದೆ ವಹಿಸಲಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್‌ ದೀಪ್ಕೆ ತಿಳಿಸಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್‌ ತಲೆದಂಡಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಸಿಜೆಪಿ ನಾಯಕರಾದ ಅಭಿಜಿತ್‌ ದೀಪ್ಕೆ, ಸೌರವ್‌ ದಾಸ್‌ ಮತ್ತು ಅಶುತೋಶ್‌ ರಾಂಕಾ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ನಾವು ಮೂವರು (ಅಭಿಜಿತ್‌ ದೀಪ್ಕೆ, ಸೌರವ್‌ ದಾಸ್‌ ಮತ್ತು ಅಶುತೋಶ್‌ ರಾಂಕಾ) ಬಂಧನದಲ್ಲಿರುವವರೆಗೆ ಶಿಂದೆ ಪ್ರತಿಭಟನೆಯ ನೇತೃತ್ವ ವಹಿಸಲಿದ್ದಾರೆ ಎಂದು ದೀಪ್ಕೆ ಹೇಳಿದ್ದಾರೆ.

ಪೊಲೀಸರು ತಮ್ಮನ್ನು ಬಂಧಿಸಬಹುದೆಂದು ಮೊದಲೇ ಊಹಿಸಿದ್ದ ದೀಪ್ಕೆ, ಶುಕ್ರವಾರ ರಾತ್ರಿಯೇ ಒಂದು ವಿಡಿಯೊವನ್ನು ರೆಕಾರ್ಡ್ ಮಾಡಿಟ್ಟುಕೊಂಡಿದ್ದಾಗಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ನನ್ನನ್ನು, ಸೌರವ್ ದಾಸ್ ಮತ್ತು ಅಶುತೋಶ್‌ ರಾಂಕಾ ಅವರನ್ನು ಬಂಧಿಸಬಹುದು ಎಂಬ ಸುಳಿವು ನೀಡಿದ್ದ ಅವರು, ವಿಡಿಯೊ ವೀಕ್ಷಿಸುತ್ತಿರುವ ಬೆಂಬಲಿಗರು ಶಿಂದೆ ಅವರ ಮಾರ್ಗದರ್ಶನವನ್ನು ಅನುಸರಿಸುವಂತೆ ಮನವಿ ಮಾಡಿದ್ದರು.

Dailyhunt
Disclaimer: This content has not been generated, created or edited by Dailyhunt. Publisher: Prajavani