Dailyhunt Logo
  • Light mode
    Follow system
    Dark mode
    • Play Story
    • App Story
ಮೋದಿ, ಶಾ ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ: ಅಭಿಜಿತ್‌ ದೀಪ್ಕೆ

ಮೋದಿ, ಶಾ ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ: ಅಭಿಜಿತ್‌ ದೀಪ್ಕೆ

ನವದೆಹಲಿ: ನಕ್ಸಲ್ ಪೀಡಿತ ಪ್ರದೇಶಗಳಿಂದ ಸಿಆರ್‌ಪಿಎಫ್ ಪಡೆಗಳನ್ನು ಕರೆಸಿ ದೆಹಲಿಯಲ್ಲಿ ನಿಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದ ಜನರ ವಿರುದ್ಧ ಯುದ್ಧ ಸಾರಲು ಬಯಸುತ್ತಿದ್ದಾರೆ ಎಂದು ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜಿತ್‌ ದೀಪ್ಕೆ ವಾಗ್ದಾಳಿ ನಡೆಸಿದ್ದಾರೆ.

'ಮೋದಿ ಮತ್ತು ಅಮಿತ್ ಶಾ ಜೋಡಿಗೆ ಜ್ಞಾನೇಶ್ ಕುಮಾರ್ ಅಷ್ಟೊಂದು ದೊಡ್ಡವರೇ?, ದೇಶದ ನಾಗರಿಕರ ವಿರುದ್ಧ ಪೊಲೀಸ್ ಮತ್ತು ಸೇನೆಯ ಬಲ ಪ್ರಯೋಗಿಸುವಷ್ಟರ ಮಟ್ಟಿಗೆ ಜ್ಞಾನೇಶ್ ದೊಡ್ಡ ವ್ಯಕ್ತಿಯೇ' ಎಂದು ದೀಪ್ಕೆ ಗುಡುಗಿದ್ದಾರೆ.

'ಮೋದಿ ಭಯಭೀತರಾಗಿದ್ದಾರೆ. ದೇಶದ ಜನರು ತಮಗೆ ಮತ ಹಾಕುವುದಿಲ್ಲ ಎಂಬ ಆತಂಕ ಅವರನ್ನು ಕಾಡುತ್ತಿದೆ' ಎಂದೂ ಅವರು ಕುಟುಕಿದ್ದಾರೆ.

'ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆ (ಯುಎಪಿಎ), ಎನ್‌ಎಸ್‌ಎ ಅಡಿಯಲ್ಲಿ ನಿರ್ಬಂಧನೆ ಹೇರಿ. ನಿಮಗೆ ಬೇಕಾದ್ದನ್ನು ಮಾಡಿ. ನಾವು ಹೆದರುವುದಿಲ್ಲ' ಎಂದು ಅವರು ಹೇಳಿದ್ದಾರೆ.

ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್‌ ತಲೆದಂಡಕ್ಕೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದ ಸಿಜೆಪಿ ನಾಯಕರಾದ ಅಭಿಜಿತ್‌ ದೀಪ್ಕೆ, ಸೌರವ್‌ ದಾಸ್‌ ಮತ್ತು ಅಶುತೋಶ್‌ ರಾಂಕಾ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.

ತುರ್ತು ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ: CJP ನಾಯಕರ ಬಂಧನ ಖಂಡಿಸಿದ ಕೇಜ್ರಿವಾಲ್ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಚುನಾವಣಾ ಆಯೋಗದ ವಿರುದ್ಧ ಹೋರಾಟ: ಸಿಜೆಪಿಯ ದೀಪ್ಕೆ, ದಾಸ್, ರಾಂಕಾ ಪೊಲೀಸರ ವಶಕ್ಕೆದೆಹಲಿ ಪ್ರತಿಭಟನೆ: ಕಮ್ಯೂನಿಸ್ಟ್‌ ನಾಯಕರು, ತುಷಾರ್ ಗಾಂಧಿ ಪೊಲೀಸರ ವಶಕ್ಕೆ
Dailyhunt
Disclaimer: This content has not been generated, created or edited by Dailyhunt. Publisher: Prajavani