Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ ಪೌರತ್ವ: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರತೀಯರಿಗೆ ನಿರಾಳ ಯಾಕೆ?

ಅಮೆರಿಕ ಪೌರತ್ವ: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರತೀಯರಿಗೆ ನಿರಾಳ ಯಾಕೆ?

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಅಮೆರಿಕ ಪೌರತ್ವ: ಸುಪ್ರೀಂ ಕೋರ್ಟ್‌ ತೀರ್ಪಿನಿಂದ ಭಾರತೀಯರಿಗೆ ನಿರಾಳ ಯಾಕೆ?

ಒಂದು ಸಾಲಿನಲ್ಲಿಅಮೆರಿಕದ ಜನ್ಮಸಿದ್ಧ ಪೌರತ್ವ ರದ್ದುಗೊಳಿಸಲು ಡೊನಾಲ್ಡ್ ಟ್ರಂಪ್ ಮಾಡಿದ್ದ ಪ್ರಯತ್ನವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿರುವುದು, ಅಲ್ಲಿನ ಭಾರತೀಯ ವಲಸಿಗರಿಗೆ ದೊಡ್ಡ ನಿರಾಳತೆ ನೀಡಿದೆ.

ಪ್ರಮುಖ ಅಂಶಗಳು• ಜನ್ಮಸಿದ್ಧ ಪೌರತ್ವ ರಕ್ಷಣೆಅಮೆರಿಕದ ಸಂವಿಧಾನದ 14ನೇ ತಿದ್ದುಪಡಿಯ ಪ್ರಕಾರ, ಅಮೆರಿಕದ ಮಣ್ಣಿನಲ್ಲಿ ಜನಿಸುವ ಪ್ರತಿಯೊಂದು ಮಗುವೂ ಸ್ವಾಭಾವಿಕವಾಗಿ ಅಮೆರಿಕದ ನಾಗರಿಕನಾಗುತ್ತಾನೆ ಎಂಬ ಹಕ್ಕನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.• ಟ್ರಂಪ್ ಆದೇಶ ತಿರಸ್ಕೃತಅಧ್ಯಕ್ಷರ ಅಧಿಕಾರ ಬಳಸಿ ಜನ್ಮಸಿದ್ಧ ಪೌರತ್ವವನ್ನು ರದ್ದುಗೊಳಿಸಲು ಟ್ರಂಪ್ ಹೊರಡಿಸಿದ್ದ ಆದೇಶವನ್ನು ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ ಪೀಠ 6-3ರ ಬಹುಮತದಿಂದ ತಳ್ಳಿಹಾಕಿದೆ.• ಭಾರತೀಯ ವೃತ್ತಿಪರರಿಗೆ ನೆಮ್ಮದಿಗ್ರೀನ್ ಕಾರ್ಡ್‌ಗಾಗಿ ದಶಕಗಳ ಕಾಲ ಕಾಯುತ್ತಿರುವ ಭಾರತೀಯ ವೃತ್ತಿಪರರ ಮಕ್ಕಳಿಗೆ ಈ ತೀರ್ಪು ರಕ್ಷಣೆ ನೀಡಿದೆ, ಇಲ್ಲವಾದರೆ ಅವರ ಭವಿಷ್ಯ ಅತಂತ್ರವಾಗುವ ಸಾಧ್ಯತೆಯಿತ್ತು.• ಕಾನೂನು ಬದಲಾವಣೆ ಕಷ್ಟಸುಪ್ರೀಂ ಕೋರ್ಟ್ ತೀರ್ಪು ಸಂವಿಧಾನದ ಆಧಾರದ ಮೇಲೆ ಬಂದಿರುವುದರಿಂದ, ಇದನ್ನು ಬದಲಾಯಿಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ, ಇದು ಸುಲಭದ ಕೆಲಸವಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.• ಸಮುದಾಯದ ಮೇಲೆ ಪ್ರಭಾವಅಮೆರಿಕದಲ್ಲಿ ನೆಲೆಸಿರುವ 52 ಲಕ್ಷ ಭಾರತೀಯರಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ತಂತ್ರಜ್ಞರ ಕೌಟುಂಬಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಈ ತೀರ್ಪು ಸಹಕಾರಿಯಾಗಿದೆ.ಪ್ರಮುಖ ಅಂಕಿಅಂಶಗಳು52 ಲಕ್ಷಅಮೆರಿಕದಲ್ಲಿರುವ ಭಾರತೀಯ ಅಮೆರಿಕನ್ನರ ಒಟ್ಟು ಸಂಖ್ಯೆ32 ಲಕ್ಷಅಧಿಕೃತ ಪೌರತ್ವ ಪಡೆದ ಭಾರತೀಯರು7,25,000ದಾಖಲೆಗಳಿಲ್ಲದೆ ವಾಸಿಸುವ ಭಾರತೀಯರು12 ಲಕ್ಷಗ್ರೀನ್ ಕಾರ್ಡ್‌ಗಾಗಿ ಕಾಯುತ್ತಿರುವ ಭಾರತೀಯರುಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಅಮೆರಿಕ ನೆಲದಲ್ಲಿ ಜನಿಸುವ ಎಲ್ಲ ಮಕ್ಕಳಿಗೆ ಸಾಂವಿಧಾನಿಕವಾಗಿ ಸಿಗುವ 'ಜನ್ಮಸಿದ್ಧ ಪೌರತ್ವ' ರದ್ದುಗೊಳಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿದ್ದ ಪ್ರಯತ್ನವನ್ನು ಅಮೆರಿಕದ ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ಈ ಐತಿಹಾಸಿಕ ತೀರ್ಪು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ನೆಮ್ಮದಿ ತಂದಿದೆ. ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ನೇತೃತ್ವದ ಪೀಠ 6-3ರ ಬಹುಮತದೊಂದಿಗೆ ಟ್ರಂಪ್ ಆದೇಶವನ್ನು ತಿರಸ್ಕರಿಸಿದೆ.

ಅಮೆರಿಕ ಅಂತರ್ಯುದ್ಧದ (1861-1868)ಬಳಿಕ ಜಾರಿಗೆ ತರಲಾದ ಸಂವಿಧಾನದ 14ನೇ ತಿದ್ದುಪಡಿ ಪ್ರಕಾರ, ಅಮೆರಿಕದ ಮಣ್ಣಿನಲ್ಲಿ ಜನಿಸುವ ಪ್ರತಿಯೊಂದು ಮಗುವೂ ಸ್ವಾಭಾವಿಕವಾಗಿ ಅಮೆರಿಕದ ಪ್ರಜೆಯಾಗುತ್ತದೆ. ಈ ಸಾಂವಿಧಾನಿಕ ಹಕ್ಕನ್ನು ಕೇವಲ ಅಧ್ಯಕ್ಷರ ಆದೇಶದ ಮೂಲಕ ಬದಲಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಟ್ರಂಪ್ ಆದೇಶ ಏನಿತ್ತು?

ಟ್ರಂಪ್ ತಮ್ಮ ಎರಡನೇ ಅವಧಿಯ ಅಧಿಕಾರದ ಮೊದಲ ದಿನವೇ ಜನ್ಮಸಿದ್ಧ ಪೌರತ್ವ ಹಕ್ಕನ್ನು ರದ್ದು ಮಾಡಿದ್ದರು. ಇದರಿಂದ ವಲಸಿಗರು ಮತ್ತು ತಾತ್ಕಾಲಿಕವಾಗಿ ಅಮೆರಿಕಕ್ಕೆ ಭೇಟಿ ನೀಡುವವರಿಗೆ ಸಮಸ್ಯೆಯಾಗಿತ್ತು.

ದೇಶೀಯ ಮತ್ತು ವಿದೇಶಾಂಗ ನೀತಿಗಳಲ್ಲಿ ಅಧ್ಯಕ್ಷೀಯ ಅಧಿಕಾರದ ಮಿತಿಗಳನ್ನು ಪದೇ ಪದೇ ಮೀರುತ್ತ ಬಂದಿರುವ ಟ್ರಂಪ್, ಕಾನೂನುಬದ್ಧವಾಗಿ ಅಕ್ರಮ ವಲಸೆಯನ್ನು ತಡೆಗಟ್ಟುವ ನೀತಿಗಳ ಭಾಗವಾಗಿ ಈ ಆದೇಶ ಹೊರಡಿಸಿದ್ದರು. ಡೊನಾಲ್ಡ್‌ ಟ್ರಂಪ್ ಅವರ ವಲಸೆ ನೀತಿಯಲ್ಲಿ ಜನಾಂಗೀಯ ಮತ್ತು ಧಾರ್ಮಿಕ ತಾರತಮ್ಯ ಎಸಗಲಾಗುತ್ತಿದೆ ಎಂದು ಹಲವರು ಆರೋಪಿಸಿದ್ದರು.

ಸುಪ್ರೀಂ ಕೋರ್ಟ್ 1898ರಲ್ಲಿ ಜನ್ಮಸಿದ್ಧ ಪೌರತ್ವದ ಗೊಂದಲಗಳನ್ನು ಪರಿಹರಿಸಿದ್ದು ಈ ತೀರ್ಪು ವಿದೇಶಿ ಪ್ರಜೆಗಳ ಮಕ್ಕಳೂ ಸೇರಿದಂತೆ ಅಮೆರಿಕದ ನೆಲದಲ್ಲಿ ಜನಿಸುವ ಎಲ್ಲರಿಗೂ ಪೌರತ್ವ ಸಿಗಲಿದೆ ಎಂದು ಹೇಳಿತ್ತು.

ಅಮೆರಿಕ | ಜನ್ಮದತ್ತ ಪೌರತ್ವ: ವಿಚಾರಣೆಗೆ ಸುಪ್ರೀಂ ಕೋರ್ಟ್‌ ಅಸ್ತುಜನ್ಮದತ್ತ ಪೌರತ್ವ ರದ್ದು: ಅಮೆರಿಕ ಸುಪ್ರೀಂಕೋರ್ಟ್‌ಗೆ ಟ್ರಂಪ್ ಆಡಳಿತದ ಮೇಲ್ಮನವಿ

ಭಾರತೀಯ ಸಮುದಾಯಕ್ಕೆ ಈ ತೀರ್ಪು ಏಕೆ ಪ್ರಮುಖ?

ಅಮೆರಿಕದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಲಸಿಗ ಸಮುದಾಯಗಳಲ್ಲಿ ಭಾರತೀಯ ಅಮೆರಿಕನ್ನರು ಪ್ರಮುಖರಾಗಿದ್ದಾರೆ. ಆದ್ದರಿಂದ ಭಾರತೀಯರಿಗೆ ಈ ತೀರ್ಪು ಅತ್ಯಂತ ಮುಖ್ಯವಾಗಿದೆ.

ಗ್ರೀನ್ ಕಾರ್ಡ್ ಮತ್ತು ಎಚ್‌-1ಬಿ ವೀಸಾ

ಸದ್ಯ ಅಮೆರಿಕದಲ್ಲಿ 12 ಲಕ್ಷಕ್ಕೂ ಹೆಚ್ಚು ಭಾರತೀಯರು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ (ಖಾಯಂ ನಿವಾಸಿ) ಪಡೆಯಲು ಕಾಯುತ್ತಿದ್ದಾರೆ.

ಈ ವೃತ್ತಿಪರರು ಗ್ರೀನ್ ಕಾರ್ಡ್‌ಗಾಗಿ ದಶಕಗಳ ಕಾಲ ಕಾಯಬೇಕಾಗುತ್ತದೆ. ಆದರೆ, ಈ ಅವಧಿಯಲ್ಲಿ ಅವರಿಗೆ ಹುಟ್ಟುವ ಮಕ್ಕಳಿಗೆ ಜನ್ಮಸಿದ್ಧ ಪೌರತ್ವದ ಹಕ್ಕಿರುವುದರಿಂದ ಅವರು ಸಹಜವಾಗಿ ಅಮೆರಿಕದ ಪ್ರಜೆಗಳಾಗುತ್ತಾರೆ. ಟ್ರಂಪ್ ಆದೇಶ ಜಾರಿಯಾಗಿದ್ದರೆ ಈ ಮಕ್ಕಳ ಭವಿಷ್ಯ ಅತಂತ್ರವಾಗುತ್ತಿತ್ತು.

ವಲಸಿಗ ಸಮುದಾಯದ ಅಂಕಿ-ಅಂಶಗಳು

ಅಮೆರಿಕದಲ್ಲಿ ಒಟ್ಟಾರೆ ಭಾರತೀಯ ಅಮೆರಿಕನ್ನರ ಸಂಖ್ಯೆ 52 ಲಕ್ಷದಷ್ಟಿದೆ. ಇಲ್ಲಿಗೆ ವಲಸೆ ಬಂದಿರುವ ಎರಡನೇ ಅತಿ ದೊಡ್ಡ ಸಮುದಾಯವಾಗಿದೆ. ಸುಮಾರು 32 ಲಕ್ಷ ಭಾರತೀಯರು ಅಧಿಕೃತವಾಗಿ ಪೌರತ್ವ ಪಡೆದು ವಾಸ ಮಾಡುತ್ತಿದ್ದಾರೆ. ಉಳಿದವರು ಇತರೆ ವೀಸಾಗಳ ಅಡಿಯಲ್ಲಿ ಬಂದು ನೆಲೆಸಿದ್ದಾರೆ. ಅಂದಾಜು 7,25,000 ಭಾರತೀಯರು ಸೂಕ್ತ ದಾಖಲೆಗಳಿಲ್ಲದೆ ಇಲ್ಲಿ ವಾಸಿಸುತ್ತಿದ್ದು, ಅವರ ಮಕ್ಕಳ ಭವಿಷ್ಯಕ್ಕೂ ಈ ತೀರ್ಪು ರಕ್ಷಣೆ ನೀಡಿದೆ.

ಮುಂದಿನ ದಾರಿ ಏನು?

ನ್ಯಾಯಮೂರ್ತಿಗಳಾದ ಸ್ಯಾಮ್ಯುಯೆಲ್ ಅಲಿಟೊ, ನೀಲ್ ಮತ್ತು ಕ್ಲಾರೆನ್ಸ್ ಥಾಮಸ್ ಅವರು ಟ್ರಂಪ್ ಅವರನ್ನು ಬೆಂಬಲಿಸಿ ಮತ ಹಾಕಿದ್ದಾರೆ. ಸಂವಿಧಾನದ 14ನೇ ತಿದ್ದುಪಡಿಯನ್ನು ರಾಜಕೀಯ ಕಾರಣಗಳಿಗಾಗಿ ಬಳಸಲಾಗುತ್ತಿದೆ ಎಂದು ಥಾಮಸ್ ವಾದಿಸಿದ್ದಾರೆ.

ಈ ತೀರ್ಪು ದೇಶಕ್ಕೆ ಮಾರಕ ಎಂದು ಕರೆದಿರುವ ಡೊನಾಲ್ಡ್ ಟ್ರಂಪ್, ಸಂಸತ್ತಿನ ಕಾನೂನಿನ ಮೂಲಕ ಇದನ್ನು ಸುಲಭವಾಗಿ ಬದಲಾಯಿಸಬಹುದು ಎಂದು ಹೇಳಿದ್ದಾರೆ. ಇದಕ್ಕಾಗಿ ಬೆಂಬಲ ನೀಡುವಂತೆ ಸಂಸತ್ತಿನ ಸದಸ್ಯರನ್ನು ಅವರು ಕೋರಿದ್ದಾರೆ.

ರಾಜಕೀಯ ತಜ್ಞರು ಏನು ಹೇಳುತ್ತಾರೆ...

ಸಂಸತ್ತಿನ ಕಾನೂನಿನ ಮೂಲಕ ಇದನ್ನು ಬದಲಾಯಿಸುವುದ ಕಷ್ಟ. ಸುಪ್ರೀಂ ಕೋರ್ಟ್ ತೀರ್ಪು ಸಂವಿಧಾನದ ಆಧಾರದ ಮೇಲೆ ಬಂದಿರುವುದರಿಂದ ಈ ಕಾನೂನನ್ನು ಬದಲಾಯಿಸಲು ಸಂವಿಧಾನಕ್ಕೇ ತಿದ್ದುಪಡಿ ತರಬೇಕಾಗುತ್ತದೆ, ಇದು ಅಷ್ಟು ಸುಲಭವಲ್ಲ ಎಂದು ರಾಜಕೀಯ ತಜ್ಞರು ಹೇಳಿದ್ದಾರೆ.

ಈ ತೀರ್ಪು ಕೇವಲ ಕಾನೂನಾತ್ಮಕ ಜಯವಲ್ಲ; ಇದು ಅಮೆರಿಕದ ಆರ್ಥಿಕತೆ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಲಕ್ಷಾಂತರ ಭಾರತೀಯ ತಂತ್ರಜ್ಞರು, ವಿದ್ಯಾರ್ಥಿಗಳು ಮತ್ತು ವಲಸಿಗರ ಕೌಟುಂಬಿಕ ಸ್ಥಿರತೆಯನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ರಾಜಾ ಕೃಷ್ಣಮೂರ್ತಿ, ಅಮೆರಿಕ ಸಂಸದಈ ತೀರ್ಪು ಸಂವಿಧಾನದ ಸಮಾನತೆಯ ತತ್ವವನ್ನು ಎತ್ತಿಹಿಡಿದಿದೆ. ಅಮೆರಿಕದ ಪ್ರಜೆಗಳ ಹಕ್ಕನ್ನು ನಿರ್ಧರಿಸುವುದು ಸಂವಿಧಾನವೇ ಹೊರತು ಅಧ್ಯಕ್ಷರಲ್ಲ ಎಂಬುದನ್ನು ಕೋರ್ಟ್ ಸ್ಪಷ್ಟಪಡಿಸಿದೆ.ಅಮೆರಿಕ | ಜನ್ಮದತ್ತ ಪೌರತ್ವ ಹಕ್ಕು ರದ್ದತಿ: ಮಸೂದೆ ಮಂಡನೆಅಮೆರಿಕ ಪೌರತ್ವ | ಹೊಸ ಯೋಜನೆ: ಸುಮಾರು 5 ಲಕ್ಷ ವಲಸಿಗರಿಗೆ ಅನುಕೂಲ
Dailyhunt
Disclaimer: This content has not been generated, created or edited by Dailyhunt. Publisher: Prajavani