Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕದ ಎ.ಐ ತಂತ್ರಜ್ಞಾನವನ್ನು ಚೀನಾ ಕದಿಯುತ್ತಿದೆ: ಶ್ವೇತಭವನದ ಅಧಿಕಾರಿ

ಅಮೆರಿಕದ ಎ.ಐ ತಂತ್ರಜ್ಞಾನವನ್ನು ಚೀನಾ ಕದಿಯುತ್ತಿದೆ: ಶ್ವೇತಭವನದ ಅಧಿಕಾರಿ

ಸ್ಯಾನ್‌ ಫ್ರಾನ್ಸಿಸ್ಕೊ (ಅಮೆರಿಕ): ಚೀನಾದ ಕಂಪನಿಗಳು ಅಮೆರಿಕದ ಎ.ಐ ತಂತ್ರಜ್ಞಾನವನ್ನು ಕದಿಯಲು ಪ್ರಯತ್ನಿಸುತ್ತಿದೆ ಎಂದು ಶ್ವೇತಭವನ ಗುರುವಾರ ಆರೋಪಿಸಿದೆ. ಅಲ್ಲದೆ ಕಳ್ಳತನ ತಡೆಗಟ್ಟಲು ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

ಗೂಗಲ್‌ಗೆ ಸವಾಲೊಡ್ಡಿದ ಚೀನಾದ ಡೀಪ್‌ಸೀಕ್‌ನ ಹೊಸ ಎ.ಐ ಮಾದರಿ

'ವಿದೇಶಿ ಸಂಸ್ಥೆಗಳು ಅದರಲ್ಲೂ ಚೀನಾ ಮೂಲದ ಕಂಪನಿಗಳು ಅಮೆರಿಕದ ಎ.ಐ ಅನ್ನು ಕದಿಯಲು ದೊಡ್ಡ ಮಟ್ಟದ ಪ್ರಯತ್ನ ನಡೆಸುತ್ತಿವೆ' ಎಂದು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ಮುಖ್ಯಸ್ಥ ಮೈಕೆಲ್ ಕ್ರಾಟ್ಸಿಯೋಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಅಮೆರಿಕದ ನಾವಿನ್ಯತೆಯ ರಕ್ಷಣೆಗೆ ನಾವು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಅಮೆರಿಕದ ಈ ಆರೋಪ ಆಧಾರ ರಹಿತ ಎಂದು ಚೀನಾ ಹೇಳಿದೆ.

ತನ್ನ 'ಕ್ಲಾಡ್‌' ಚಾಟ್‌ಬಾಟ್‌ನ ಸಾಮರ್ಥ್ಯಗಳನ್ನು ಅಕ್ರಮವಾಗಿ ಹೊರತೆಗೆಯಲು ಚೀನಾ ಮೂಲದ ಕಂಪನಿಗಳಾದ ಡೀಪ್‌ಸೀಕ್‌, ಮೂನ್‌ಶಾಟ್‌ ಎ.ಐ ಹಾಗೂ ಮಿನಿಮ್ಯಾಕ್ಸ್ ಪ್ರಯತ್ನಿಸುತ್ತಿದೆ. ಇದನ್ನು ಬೌದ್ಧಿಕ ಆಸ್ತಿ ಕಳ್ಳತನ ಎಂದು ಅಮೆರಿಕ ಮೂಲದ ಎ.ಐ ಸ್ಟಾರ್ಟ್‌ಅಪ್ ಆಂಥ್ರೋಪಿಕ್ ಫೆಬ್ರುವರಿಯಲ್ಲಿ ಆರೋಪಿಸಿತ್ತು.

(ಎಎಫ್‌ಪಿ ವರದಿ)

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ
Dailyhunt
Disclaimer: This content has not been generated, created or edited by Dailyhunt. Publisher: Prajavani