Dailyhunt Logo
  • Light mode
    Follow system
    Dark mode
    • Play Story
    • App Story
ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ಸಂಕ್ಷಿಪ್ತ ಮಾಹಿತಿ - ಪೂರ್ಣ ವಿವರಣೆಗೆ ಕ್ಲಿಕ್ ಮಾಡಿಪ್ರಮುಖ ಮುಖ್ಯಾಂಶಗಳ ಸಂಕ್ಷಿಪ್ತ ಸಾರಾಂಶ

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

ಒಂದು ಸಾಲಿನಲ್ಲಿಆಂಥ್ರೋಪಿಕ್ ಸಂಸ್ಥೆಯ ಶಕ್ತಿಶಾಲಿ 'ಮಿಥೋಸ್' ಎ.ಐ ಮಾದರಿಯು ಜಾಗತಿಕ ಸೈಬರ್ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದು, ವಿಶ್ವದ ರಾಜಕೀಯ ಮತ್ತು ತಾಂತ್ರಿಕ ವಲಯದಲ್ಲಿ ಸಂಚಲನ ಮೂಡಿಸಿದೆ.

ಪ್ರಮುಖ ಅಂಶಗಳು• ಮಿಥೋಸ್‌ನ ಅಪಾಯಕಾರಿ ಸಾಮರ್ಥ್ಯಮಿಥೋಸ್ ಎ.ಐ ಮಾದರಿಯು ಬ್ಯಾಂಕ್‌ಗಳು ಮತ್ತು ವಿದ್ಯುತ್ ಜಾಲಗಳ ಸಾಫ್ಟ್‌ವೇರ್ ದೋಷಗಳನ್ನು ಪತ್ತೆಹಚ್ಚಿ ಸ್ವಯಂ ಚಾಲಿತವಾಗಿ ಸೈಬರ್ ದಾಳಿಗಳನ್ನು ನಡೆಸಬಲ್ಲ ಅದ್ಭುತ ಶಕ್ತಿಯನ್ನು ಹೊಂದಿದೆ.• ವಿಶ್ವ ರಾಷ್ಟ್ರಗಳ ಆತಂಕಮಿಥೋಸ್ ತಂತ್ರಜ್ಞಾನವು ಅತ್ಯಂತ ಅಪಾಯಕಾರಿ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಹಾಗೂ ಕೆನಡಾದ ಸಚಿವರು ಎಚ್ಚರಿಸಿದ್ದು, ಇದು ಭದ್ರತಾ ವ್ಯವಸ್ಥೆಗಳಿಗೆ ಸವಾಲಾಗಿದೆ.• ಭೌಗೋಳಿಕ ರಾಜಕೀಯದ ಹೊಸ ಅಸ್ತ್ರಈ ಎ.ಐ ಮಾದರಿಯು ಚೀನಾ ಮತ್ತು ರಷ್ಯಾಗೆ ತಂತ್ರಜ್ಞಾನದ ಓಟದಲ್ಲಿ ಹಿಂದುಳಿದರೆ ಎದುರಾಗಬಹುದಾದ ಭದ್ರತಾ ಪರಿಣಾಮಗಳನ್ನು ಮನವರಿಕೆ ಮಾಡಿಕೊಟ್ಟಿದೆ.• ಸೀಮಿತ ಬಳಕೆಯ ನಿಯಮభದ್ರತಾ ಕಾರಣಗಳಿಂದಾಗಿ ಆಂಥ್ರೋಪಿಕ್ ಸಂಸ್ಥೆಯು ಮಿಥೋಸ್ ಬಳಕೆಯನ್ನು ನಿಯಂತ್ರಿಸಿದ್ದು, ಪ್ರಮುಖ ಮೂಲಸೌಕರ್ಯಗಳನ್ನು ರಕ್ಷಿಸಲು 40ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದೆ.• ಅಂತರರಾಷ್ಟ್ರೀಯ ಸಹಕಾರದ ಕೊರತೆಎ.ಐ ಅಭಿವೃದ್ಧಿಯಲ್ಲಿ ಜಾಗತಿಕ ಮಟ್ಟದ ಸಮನ್ವಯ ಮತ್ತು ನಿಯಮಗಳ ಕೊರತೆಯಿರುವುದು ಮಿಥೋಸ್‌ನಂತಹ ಶಕ್ತಿಶಾಲಿ ತಂತ್ರಜ್ಞಾನಗಳನ್ನು ನಿರ್ವಹಿಸಲು ದೊಡ್ಡ ಅಡ್ಡಿಯಾಗಿದೆ.ಎಐ ಬಳಸಿ ಸಂಸ್ಕರಿಸಲಾಗಿದೆ. ಪಿವಿ ಡಿಜಿಟಲ್ ತಂಡ ಪರಿಶೀಲಿಸಿದೆ

ಶಕ್ತಿಶಾಲಿಯಾದ ಹೊಸದೊಂದು ಎ.ಐ ಮಾದರಿಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಅದನ್ನು ವ್ಯಾಪಕವಾಗಿ ಬಿಡುಗಡೆ ಮಾಡುವುದು ಅಪಾಯಕಾರಿ ಎಂದು ಆಂಥ್ರೋಪಿಕ್ ಕೆಲ ದಿನಗಳ ಹಿಂದೆ ಹೇಳಿತ್ತು. ಹೀಗೆ ಹೇಳಿದ ಎರಡೇ ವಾರದಲ್ಲಿ 'ಮಿಥೋಸ್' (Mythos) ಎನ್ನುವ ಎ.ಐ ಮಾದರಿಯನ್ನು ಬಿಡುಗಡೆ ಮಾಡಿತು. ಇದು ಈಗ ಜಾಗತಿಕ ಸಂಚಲನ ಮೂಡಿಸಿದೆ. ಬ್ಯಾಂಕ್‌ಗಳಲ್ಲಿ, ವಿದ್ಯುತ್ ಜಾಲಗಳಲ್ಲಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ಬಳಸುವ ಸಾಫ್ಟ್‌ವೇರ್‌ಗಳಲ್ಲಿನ ದೋಷಗಳನ್ನು ಪತ್ತೆ ಮಾಡಿ, ಸ್ವಯಂ ಚಾಲಿತ ಸೈಬರ್ ದಾಳಿಯನ್ನು ಸಂಘಟಿಸುವ ಅದ್ಭುತ ಸಾಮರ್ಥ್ಯ ಮಿಥೋಸ್ ಹೊಂದಿದೆ ಎಂದು ಆಂಥ್ರೋಪಿಕ್ ತಿಳಿಸಿದೆ. ಇದು ಈಗ ವಿಶ್ವ ರಾಜಕೀಯದಲ್ಲಿ ಪ್ರಮುಖ ಆಸ್ತ್ರವಾಗಿ ಮಾರ್ಪಟ್ಟಿದೆ.

ಇರಾನ್ ಮೇಲೆ ದಾಳಿ ನಡೆಸಲು ಆಂಥ್ರೋಪಿಕ್‌ನ 'ಕ್ಲಾಡ್' ಎ.ಐ ಬಳಸಿದ ಅಮೆರಿಕ

ಇದು ಬಿಡುಗೆಯಾದ ಬೆನ್ನಲ್ಲೇ ಇದರ ಭದ್ರತಾ ಅಪಾಯಗಳ ವ್ಯಾಪ್ತಿ ಮತ್ತು ಅವುಗಳನ್ನು ಸರಿಪಡಿಸುವ ಬಗ್ಗೆ ವಿಶ್ವ ನಾಯಕರಿಗೆ ತಲೆನೋವು ಪ್ರಾರಂಭವಾಗಿದೆ. ಅಮೆರಿಕ ಹೊರತುಪಡಿಸಿ ಬ್ರಿಟನ್‌ನೊಂದಿಗೆ ಮಾತ್ರ ಮಿಥೋಸ್ ಬಳಕೆಗೆ ಆಂಥ್ರೋಪಿಕ್ ಅವಕಾಶ ನೀಡಿದೆ. ಸೈಬರ್ ಭದ್ರತೆಯನ್ನೇ ಬುಡಮೇಲು ಮಾಡುವ ಅಸ್ತ್ರವನ್ನು ಆಂಥ್ರೋಪಿಕ್ ಕಂಡು ಹಿಡಿದಿದೆ ಎಂದು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಗವರ್ನರ್ ಎಚ್ಚರಿಸಿದ್ದಾರೆ. ಬ್ಯಾಂಕ್‌ಗಳು ಅಳವಡಿಸಿಕೊಂಡಿರುವ ರಕ್ಷಣಾ ವ್ಯವಸ್ಥೆ ಬಗ್ಗೆ ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಮೇಲ್ವಿಚಾರಣೆ ನಡೆಸಲು ಪ್ರಾರಂಭಿಸಿದೆ. ಈ ತಂತ್ರಜ್ಞಾನವು ಹೊರ್ಮುಜ್ ಜಲಸಂಧಿ ಮುಚ್ಚಿದಷ್ಟೇ ಅಪಾಯ ಎಂದು ಕೆನಡಾ ಹಣಕಾಸು ಸಚಿವರ ಫ್ರಾಂಕೊಯಿಸ್ ಫಿಲಿಪ್ ಚಾಂಪೇನ್ ಹೇಳಿದ್ದಾರೆ.

ಎ.ಐ. ತಂತ್ರಜ್ಞಾನದ ಹಿಂದುಳಿದರೆ ಏನಾಗಬಹುದು ಎನ್ನುವುದನ್ನು ಚೀನಾ ಹಾಗೂ ರಷ್ಯಾಗೆ ಮೀಥೋಸ್ ತೋರಿಸಿಕೊಟ್ಟಿದೆ. ಅಮೆರಿಕದೊಂದಿಗೆ ಎ.ಐ ಓಟದಲ್ಲಿ ಹಿಂದೆ ಬಿದ್ದರೆ ಎದುರಾಗಬಹುದಾದ ಭದ್ರತಾ ಪರಿಣಾಮಗಳನ್ನು ಇದು ಮನವರಿಕೆ ಮಾಡಿಕೊಟ್ಟಿದೆ. ಮೀಥೋಸ್ ಪರಮಾಣು ಬಾಂಬ್‌ಗಿಂತ ಭೀಕರ ಎಂದು ರಷ್ಯಾದ ಸರ್ಕಾರ ಪರ ಮಾಧ್ಯಮವೊಂದು ಹೇಳಿದೆ. ಇದು ಮೀಥೋಸ್‌ನ ಶಕ್ತಿಯನ್ನು ಬಹಿರಂಗಪಡಿಸಿದೆ.

ಆಂಥ್ರೋಪಿಕ್‌ನಲ್ಲಿ 25 ಶತಕೋಟಿ ಡಾಲರ್‌ ಹೂಡಿಕೆಗೆ ಅಮೆಜಾನ್ ಸಜ್ಜು

ಭೌಗೋಳಿಕ ರಾಜಕೀಯದಲ್ಲಿ ಎ.ಐ ಪ್ರಭಾವ

ಶಕ್ತಿಶಾಲಿ ಎ.ಐ ಮಾದರಿಗಳನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿರುವವರೇ ಭೌಗೋಳಿಕ ರಾಜಕೀಯದಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ ಎನ್ನುವುದನ್ನು ವಿಶ್ವ ನಾಯಕರ ಈ ಪ್ರತಿಕ್ರಿಯೆಗಳು ಪ್ರತಿಬಿಂಬಿಸುತ್ತವೆ. ಎ.ಐ ಕ್ಷೇತ್ರದ ಪ್ರಮುಖ ಆವಿಷ್ಕಾರಗಳು ಈಗ ಕೇವಲ ಉತ್ಪನ್ನಗಳ ಬಿಡುಗಡೆ ಮಾತ್ರವಲ್ಲ, ‌ಶಸ್ತ್ರಾಸ್ತ್ರಗಳ ಪರೀಕ್ಷೆಯಂತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ. ಈ ತಂತ್ರಜ್ಞಾನಗಳು ಹೇಗೆ ಕೆಲಸ ಮಾಡುತ್ತವೆ, ಯಾವ ರೀತಿಯ ರಕ್ಷಣೆ ಅಗತ್ಯ ಎಂಬ ಬಗ್ಗೆ ಹೆಚ್ಚಿನ ರಾಷ್ಟ್ರಗಳು ಯೋಚನೆ ಮಾಡುತ್ತಿವೆ.

'ಎ.ಐ. ಮಾದರಿಗಳು ಹೆಚ್ಚು ಪ್ರಭಾವಶಾಲಿಯಾಗುತ್ತಿರುವುದು ಭೌಗೋಳಿಕ ರಾಜಕೀಯದ ಪ್ರಮುಖ ವಿಷಯವಾಗುತ್ತದೆ. ಎ.ಐ ಅನ್ನು ನೀತಿ ನಿರೂಪಣೆಯ ಎಚ್ಚರಿಕೆಯ ಗಂಟೆಯಾಗಿ ತೆಗೆದುಕೊಳ್ಳಬೇಕು. ಸರ್ಕಾರಗಳು ಇನ್ನು ಮುಂದೆ ಈ ವಿಷಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ' ಎಂದು ಅರ್ಜೆಂಟೀನಾ ಸೆಂಟ್ರಲ್ ಬ್ಯಾಂಕ್‌ನ ಮಾಜಿ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಇಂಟರ್-ಅಮೆರಿಕನ್ ಡೆವಲಪ್‌ಮೆಂಟ್ ಬ್ಯಾಂಕ್‌ನ ಸಲಹೆಗಾರರಾದ ಎಡ್ವರ್ಡೊ ಲೆವಿ ಯೆಯಾತಿ ಅಭಿಪ್ರಾಯಪಟ್ಟಿದ್ದಾರೆ.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

ಅಮೆರಿಕಕ್ಕೂ ಮೀಥೋಸ್ ಬಗ್ಗೆ ಒಲವು

ಯುದ್ಧಗಳಲ್ಲಿ ತಮ್ಮ ಉತ್ಪನ್ನಗಳನ್ನು ಬಳಸುವುದನ್ನು ವಿರೋಧಿಸಿ ಅಮೆರಿಕ ಸರ್ಕಾರದೊಂದಿಗೆ ಮಾಡಿಕೊಂಡ ಬಹುಕೋಟಿ ಒಪ್ಪಂದವನ್ನು ಆಂಥ್ರೋಪಿಕ್ ಮುರಿದುಕೊಂಡಿತ್ತು. ಟ್ರಂಪ್ ಆಡಳಿತ ಹಾಗೂ ಆಂಥ್ರೋಪಿಕ್ ನಡುವೆ ವಾಗ್ಯುದ್ಧ ನಡೆದಿತ್ತು. ಇದೀಗ ಅಮೆರಿಕ ಸರ್ಕಾರ ಕೂಡ ಮಿಥೋಸ್ ಬಗ್ಗೆ ಒಲವು ತೋರಿದೆ. ಇದು ಹೊಸ ಮಾದರಿಯು ಕಂಪ್ಯೂಟರ್ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು ಎಂದು ಟ್ರಂಪ್ ಆಡಳಿತದ ಕೆಲವು ಅಧಿಕಾರಿಗಳು ಗಮನಿಸಿದ್ದರು. ಇದಾದ ಬಳಿಕ ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆ ಅವರು ಶ್ವೇತಭವನದ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಮೀಥೋಸ್ ಬಳಕೆಗೆ ಕಡಿವಾಣ

ಭದ್ರತಾ ಕಾರಣಗಳಿಗಾಗಿ ಮಿಥೋಸ್‌ನ ಬಳಕೆಯನ್ನು ಸೀಮಿತಗೊಳಿಸಿರುವುದಾಗಿ ಆಂಥ್ರೋಪಿಕ್ 'ದಿ ನ್ಯೂಯಾರ್ಕ್ ಟೈಮ್ಸ್'ಗೆ ತಿಳಿಸಿದೆ. ಇಂಟರ್ನೆಟ್ ಅಥವಾ ವಿದ್ಯುತ್ ಜಾಲಗಳಂತಹ ಪ್ರಮುಖ ಜಾಗತಿಕ ಮೂಲಸೌಕರ್ಯಗಳನ್ನು ನಿರ್ವಹಿಸುವ ತಂತ್ರಜ್ಞಾನವನ್ನು ಕಂಪನಿಗಳಿಗೆ ನೀಡುವ ಮುನ್ನ 40ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಅದನ್ನು ಹಂಚಿಕೊಳ್ಳಲು ಆಂಥ್ರೋಪಿಕ್ ನಿರ್ಧರಿಸಿದೆ. ಇದು ಗುರುತಿಸುವ ಭದ್ರತಾ ಲೋಪಗಳನ್ನು ಬಗೆಹರಿಸಲು ಅಮೆಜಾನ್, ಆಯಪಲ್ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ 11 ಸಂಸ್ಥೆಗಳು ಒಪ್ಪಿಕೊಂಡಿವೆ ಎಂದು ಆಂಥ್ರೋಪಿಕ್ ತಿಳಿಸಿದ್ದಾರೆ.

ಇದರ ಬಳಕೆಯನ್ನು ವ್ಯಾಪಕವಾಗಿ ವಿಸ್ತರಿಸುವ ಯಾವುದೇ ಉದ್ದೇಶ ಸದ್ಯಕ್ಕಿಲ್ಲ, ಆದರೆ ಮುಂದಿನ ಕ್ರಮಗಳ ಬಗ್ಗೆ ಅಮೆರಿಕ ಸರ್ಕಾರ ಮತ್ತು ಉದ್ಯಮ ಪಾಲುದಾರರೊಂದಿಗೆ ಚರ್ಚಿಸುವುದಾಗಿ ಆಂಥ್ರೋಪಿಕ್ ಹೇಳಿದೆ. ಈ ತಂತ್ರಜ್ಞಾವನ್ನು ಪಡೆದುಕೊಳ್ಳಲು ಹಾಗೂ ಮಾಹಿತಿ ಬಯಸಿ ವ್ಯಾಪಕ ಕರೆಗಳು ಬರುತ್ತಿದೆ ಎಂದು ಸಂಸ್ಥೆ ತಿಳಿಸಿದೆ. ಆದರೆ ಇಷ್ಟು ಶಕ್ತಿಶಾಲಿ ಎ.ಐ ಮಾದರಿಯನ್ನು ಸುರಕ್ಷಿತವಾಗಿ ಮೌಲ್ಯಮಾಪನ ಮಾಡಲು ಆ ಸಂಸ್ಥೆಗಳಿಗೆ ಅಗತ್ಯ ಪರಿಣತಿ ಇರುವುದಿಲ್ಲ ಎಂದು ಕಂಪನಿ ಅಭಿಪ್ರಾಯಪಟ್ಟಿದೆ.

ಇತರ ಸಂಸ್ಥೆಗಳು ಕೂಡ ಇದೇ ರೀತಿಯ ಸೈಬರ್ ಸಾಮರ್ಥ್ಯದ ಎ.ಐ ಮಾದರಿಗಳನ್ನು ಮುಂದಿನ 18 ತಿಂಗಳೊಳಗೆ ಬಿಡುಗಡೆ ಮಾಡಬಹುದು. ಆದ್ದರಿಂದ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಕಂಪನಿಗಳಿಗೆ ಸಮಯದ ಅಭಾವವಿದೆ ಎಂದು ಆಂಥ್ರೋಪಿಕ್ ಎಚ್ಚರಿಸಿದೆ.

ಜಗತ್ತಿನ ಯುದ್ಧಭೂಮಿಯಲ್ಲಿ ಒಂದೇ ಹೇಷಾರವ; ಏಯ್..ಏಯ್.. AI!

ಕಂಪನಿಗಳಿಗೆ ಗೊಂದಲ

ಎ.ಐ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರ ತೀರಾ ಕಡಿಮೆ ಇರುವುದರಿಂದ ಮಿಥೋಸ್ ಕುರಿತು ಗೊಂದಲ ಉಂಟಾಗಿದೆ. ಎ.ಐ ಕಂಪನಿಗಳು ಪರಸ್ಪರ ಸ್ಪರ್ಧಿಸುತ್ತಿರುವಾಗ ಸರ್ಕಾರಗಳು ಹಾಗೂ ಕಂಪನಿಗಳು ಒಬ್ಬರನ್ನೊಬ್ಬರು ಸಂಶಯದಿಂದ ನೋಡುತ್ತಿವೆ. ಮಿಥೋಸ್‌ನಂತಹ ಅತಿ ಗಂಭೀರ ವಿಷಯಗಳನ್ನು ನಿರ್ವಹಿಸಲು ಯಾವುದೇ ಒಪ್ಪಂದ, ನಿಯಮಗಳು ಹಾಗೂ ಜಾಗತಿಕ ವ್ಯವಸ್ಥೆಗಳು ಸದ್ಯಕ್ಕೆ ಅಸ್ಥಿತ್ವದಲ್ಲಿಲ್ಲ. ಆಂಥ್ರೋಪಿಕ್ ಸಂಸ್ಥೆಯು ಮಿಥೋಸ್ ಬಳಕೆಯನ್ನು ಸೀಮಿತಗೊಳಿಸಿದ್ದಕ್ಕೆ ಅನೇಕ ತಜ್ಞರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಅದರ ಅಪಾಯವನ್ನು ಎದುರಿಸಲು ಅಂತರರಾಷ್ಟ್ರೀಯ ಸಮನ್ವಯದ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಬ್ರಿಟನ್‌ನಿಂದ ಮಿಥೋಸ್ ಪರೀಕ್ಷೆ

ಸದ್ಯಕ್ಕೆ ಅಮೆರಿಕ ಬಿಟ್ಟರೆ, ಬ್ರಿಟನ್‌ಗೆ ಮಾತ್ರ ಮಿಥೋಸ್ ಮಾದರಿ ಲಭ್ಯವಾಗಿದೆ. ಇದನ್ನು ಸರ್ಕಾರಿ 'ಎಐ ಸೆಕ್ಯುರಿಟಿ ಇನ್‌ಸ್ಟಿಟ್ಯೂಟ್' ಪರೀಕ್ಷಿಸಿ ಕಳೆದ ವಾರ ವರದಿಯನ್ನು ಪ್ರಕಟಿಸಿದೆ. ಈ ಹಿಂದೆ ಯಾವುದೇ ಎ.ಐ ಮಾದರಿ ಮಾಡಲು ಸಾಧ್ಯವಾಗದ ಸಂಕೀರ್ಣ ಸೈಬರ್ ದಾಳಿಗಳನ್ನು ಮಿಥೋಸ ಮಾಡಬಲ್ಲದು ಎಂದು ಅದು ದೃಢಪಡಿಸಿದೆ.

'ಮಿಥೋಸ್ ಒಂದು ಎ.ಐ ಸೈಬರ್ ಸಾಮರ್ಥ್ಯದಲ್ಲಿನ ದೊಡ್ಡ ಪ್ರಗತಿಯಾಗಿದೆ. ಅದರಿಂದ ದೇಶದ ಪ್ರಮುಖ ರಾಷ್ಟ್ರೀಯ ಮೂಲಸೌಕರ್ಯಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಬ್ರಿಟನ್‌ನ ಎ.ಐ ಸಚಿವ ಕನಿಷ್ಕಾ ನಾರಾಯಣ್ ತಿಳಿಸಿದ್ದಾರೆ.

ಬೇರೆ ದೇಶಗಳಿಗೆ ಸಿಗದ ಮೀಥೋಸ್

ಈ ಎರಡು ದೇಶಗಳಿಗೆ ಹೊರತುಪಡಿಸಿ ಬೇರೆಯವರಿಗೆ ಮಿಥೋಸ್ ಬಗ್ಗೆ ಬಳಕೆಗೆ ಅವಕಾಶ ನೀಡಿಲ್ಲ. ಮಿಥೋಸ್ ಬಿಡುಗಡೆಯಾದ ನಂತರ ಆಂಥ್ರೋಪಿಕ್ ಸಂಸ್ಥೆಯೊಂದಿಗೆ ಯುರೋಪಿಯನ್ ಕಮಿಷನ್ ಕನಿಷ್ಠ ಮೂರು ಬಾರಿ ಮಾತುಕತೆ ನಡೆಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಇದನ್ನು ಹೇಗೆ ಹಸ್ತಾಂತರಿಸಬೇಕು ಎನ್ನುವುದರ ಬಗ್ಗೆ ಉಭಯ ಪಕ್ಷಗಳ ನಡುವೆ ಒಮ್ಮತ ಮೂಡದ ಕಾರಣ ಮಾತುಕತೆ ಪ್ರಗತಿ ಕಂಡಿಲ್ಲ.'"ಅಪೂರ್ವ ಸೈಬರ್ ಸಾಮರ್ಥ್ಯಗಳನ್ನು ಹೊಂದಿರುವ ಮಿಥೋಸ್‌ನಿಂದ ಉಂಟಾಗಬಹುದಾದ ಪರಿಣಾಮಗಳನ್ನು ವಿಶ್ಲೇಷಿಸುತ್ತಿರುವುದಾಗಿ ಯುರೋಪಿಯನ್ ಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ.

'ಮಿಥೋಸ್‌ಗೆ ನಮಗೆ ಪ್ರವೇಶ ಸಿಕ್ಕಿಲ್ಲ. ಆದರೆ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಬಗ್ಗೆ ಮಾಹಿತಿ ಪಡೆಯಲು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಂಥ್ರೋಪಿಕ್ ಸಿಬ್ಬಂದಿಯನ್ನು ಭೇಟಿ ಮಾಡಿದ್ದೇನೆ. ಅದರ ಸಾಮರ್ಥ್ಯಗಳು ಸೈಬರ್ ಭದ್ರತೆಯಲ್ಲಿ ದೊಡ್ಡ ಬದಲಾವಣೆ ಸೂಚಿಸುತ್ತದೆ ಎಂದು ಜರ್ಮನಿಯ ಸೈಬರ್ ಭದ್ರತಾ ಸಂಸ್ಥೆಯಾದ ಬಿಎಸ್‌ಐ (BSI) ಅಧ್ಯಕ್ಷೆ ಕ್ಲೌಡಿಯಾ ಪ್ಲ್ಯಾಟ್ನರ್ ಹೇಳಿದ್ದಾರೆ.

ಚೀನಾ, ರಷ್ಯಾದ ಮೌನ

ಚೀನಾ ಹಾಗೂ ರಷ್ಯಾ ಮಿಥೋಸ್ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ. ಚೀನಾದ ಸಂಶೋಧಕರು ಅಲ್ಲಿನ ಎ.ಐ ಸಮುದಾಯವು ಇದನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಚೀನಾದ ಅನೇಕ ಬ್ಯಾಂಕ್‌ಗಳು, ಇಂಧನ ಕಂಪನಿಗಳು ಮತ್ತು ಸರ್ಕಾರಿ ಏಜೆನ್ಸಿಗಳು ಮೀಥೋಸ್ ದೋಷಗಳನ್ನು ಪತ್ತೆಹಚ್ಚಿದ ಅದೇ ಸಾಫ್ಟ್‌ವೇರ್‌ನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಚಾಟ್ ಜಿಪಿಟಿ ಬಳಿಕ ಚೀನಾದ ಪಾಲಿಗೆ ಇದು ಎರಡನೇ ಎಚ್ಚರಿಕೆಯ ಗಂಟೆಯಾಗಿದೆ ಎಂದು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್‌ನ ಮ್ಯಾಟ್ ಶೀಹನ್ ಹೇಳಿದ್ದಾರೆ. ಚೀನಾಕ್ಕೆ ಸುಧಾರಿತ ಎ.ಐ ಸಿಸ್ಟಮ್‌ಗಳನ್ನು ನಿರ್ಮಿಸಲು ಅಗತ್ಯವಾದ ಸೆಮಿಕಂಡಕ್ಟರ್‌ಗಳು ಸಿಗದಂತೆ ಅಮೆರಿಕ ಮಾಡುತ್ತಿದೆ. ಇದುವೇ ಅಮೆರಿಕಕ್ಕೆ ವರದಾನ ಎಂದು ಅವರು ತಿಳಿಸಿದ್ದಾರೆ.

ಕೊಲ್ಲಿ ಸಂಘರ್ಷ: ಅಮೆರಿಕ-ಇರಾನ್ ಮಧ್ಯೆ ಸಿಲುಕಿ ನಲುಗಿದ 'ಗುಬ್ಬಚ್ಚಿ' ಕತಾರ್

ಎ.ಐ ಮಾದರಿಯನ್ನು ಮೊದಲು ನಿರ್ಮಿಸುವುದರಿಂದ ಸಿಗುವ ಲಾಭಗಳನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇದರಿಂದ ದೇಶವು ಇನ್ನಷ್ಟು ಹಿಂದೆ ಬೀಳಬಹುದು ಎಂದು ಚೀನಾದ ಕೆಲವು ಎ.ಐ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜೆಫ್ರಿ ಡಿಂಗ್ ಹೇಳಿದ್ದಾರೆ.

ಚೀನಾಕ್ಕೆ ಮಿಥೋಸ್‌ನ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಆದರೆ ತಾವು ಶಾಂತಿಯುತ ಮತ್ತು ಸುರಕ್ಷಿತ ಸೈಬರ್ ಜಗತ್ತನ್ನು ಬೆಂಬಲಿಸುವುದಾಗಿ ವಾಷಿಂಗ್ಟನ್‌ನಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರ ಲಿಯು ಪೆಂಗ್ಯು ತಿಳಿಸಿದ್ದಾರೆ.

ಶಕ್ತಿಯುತ ಕಂಪ್ಯೂಟಿಂಗ್ ಮೂಲಸೌಕರ್ಯ ಮತ್ತು ಎ.ಐ ಮಾದರಿಗಳನ್ನು ಹೊಂದಿರದ ರಾಷ್ಟ್ರಗಳು ಆಂಥ್ರೋಪಿಕ್, ಗೂಗಲ್, ಮತ್ತು ಓಪನ್ ಎಐ ನಂತಹ ಕಂಪನಿಗಳ ಮೇಲೆ ಅವಲಂಬಿತವಾಗುವ ಅಪಾಯವಿದೆ. ಅಷ್ಟೇ ಅಲ್ಲದೆ, ಆ ಉತ್ಪನ್ನಗಳನ್ನು ಹೇಗೆ ವಿನ್ಯಾಸಗೊಳಿಸಲಾಗಿದೆ ಅಥವಾ ಅವುಗಳ ಸುರಕ್ಷತೆಯ ಬಗ್ಗೆ ಈ ರಾಷ್ಟ್ರಗಳಿಗೆ ಯಾವುದೇ ಅಧಿಕಾರ ಇರುವುದಿಲ್ಲ ಎಂದು ಯೆಯಾತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

(ಆಧಾರ: ನ್ಯೂಯಾರ್ಕ್ ಟೈಮ್ಸ್)

ಎರಡು ದಶಕಗಳ ಕಾರ್ಯತಂತ್ರ: ಚೀನಾಗೆ ತಟ್ಟದ ಕೊಲ್ಲಿ ಯುದ್ಧದ 'ಇಂಧನ ಬಿಸಿ'
Dailyhunt
Disclaimer: This content has not been generated, created or edited by Dailyhunt. Publisher: Prajavani