Dailyhunt Logo
  • Light mode
    Follow system
    Dark mode
    • Play Story
    • App Story
ಅಮೆರಿಕ-ಇರಾನ್‌ ಶಾಂತಿ ಒಪ್ಪಂದ: ಕರಡು ಪ್ರತಿಯಲ್ಲಿರುವ ಪ್ರಮುಖ ಅಂಶಗಳಿವು..

ಅಮೆರಿಕ-ಇರಾನ್‌ ಶಾಂತಿ ಒಪ್ಪಂದ: ಕರಡು ಪ್ರತಿಯಲ್ಲಿರುವ ಪ್ರಮುಖ ಅಂಶಗಳಿವು..

ರಾನ್‌ ಜೊತೆಗಿನ ಒಪ್ಪಂದ ಪೂರ್ಣಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ.

ಅಮೆರಿಕ - ಇರಾನ್‌ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಷರೀಫ್‌ ಅವರು ಟ್ರಂಪ್‌ಗೂ ಮೊದಲೇ ಹೇಳಿಕೆ ನೀಡಿದ್ದರು.

ಒಪ್ಪಂದ ಸನ್ನಿಹಿತವಾಗಿದೆ. ಸ್ವಿಟ್ಜರ್‌ಲೆಂಡ್‌ನಲ್ಲಿ ಶುಕ್ರವಾರ ನಡೆಯುವ ಕಾರ್ಯಕ್ರಮದಲ್ಲಿ ಉಭಯ ರಾಷ್ಟ್ರಗಳು ಅಧಿಕೃತ ಸಹಿ ಹಾಕಲಿವೆ ಎಂದು ತಿಳಿಸಿದ್ದರು.

ಕರಡುವಿನಲ್ಲಿರುವ ಪ್ರಮುಖ ಅಂಶಗಳು

  • ಎಲ್ಲ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು ಇರಾನ್‌ ತಕ್ಷಣವೇ ಮುಕ್ತಗೊಳಿಸುವುದು.

  • ಇರಾನ್‌ನ ಬಂದರುಗಳ ಮೇಲೆ ವಿಧಿಸಿರುವ ನಿರ್ಬಂಧವನ್ನು ಅಮೆರಿಕ ತೆರವುಗೊಳಿಸಬೇಕು. ಈ ಪ್ರಕ್ರಿಯೆಯನ್ನು ಒಪ್ಪಂದಕ್ಕೆ ಸಹಿ ಹಾಕಿದ 30 ದಿನಗಳ ಒಳಗಾಗಿ ಪೂರ್ಣಗೊಳಿಸಬೇಕು.

  • ಲೆಬನಾನ್ ಸೇರಿದಂತೆ ಇತರೆಡೆ ನಡೆಯುತ್ತಿರುವ ಸೇನಾ ಕಾರ್ಯಚರಣೆಗಳನ್ನು ತಕ್ಷಣ ಮತ್ತು ಶಾಶ್ವತವಾಗಿ ನಿಲ್ಲಿಸಬೆಕು.

  • ಒಪ್ಪಂದ ಅಂತಿಮಗೊಳ್ಳುವವರೆಗೆ ಇರಾನ್‌ ಮೇಲೆ ಅಮೆರಿಕ ಯಾವುದೇ ರೀತಿಯ ಹೊಸ ನಿರ್ಬಂಧಗಳನ್ನು ಹೇರಬಾರದು.

  • ಅಂತಿಮ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅಮೆರಿಕ ಹಾಗೂ ವಿಶ್ವಸಂಸ್ಥೆ ವಿಧಿಸಿರುವ ಎಲ್ಲ ನಿರ್ಬಂಧಗಳನ್ನು ಎಲ್ಲರಿಗೂ ಒಪ್ಪಿತವಾದ ಕಾಲಮಿತಿಯೊಳಗಾಗಿ ತೆರವು ಮಾಡಬೇಕು.

  • ಇರಾನ್‌ ತನ್ನ ತೈಲ ಮಾರಾಟ ಮಾಡಿ ಆದಾಯಗಳಿಸುವುದಕ್ಕೆ ಅನುಕೂಲವಾಗುವಂತೆ ಅಮೆರಿಕ ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕು.

  • ಇರಾನ್‌ಗೆ ಸೇರಿದ 25 ಶತಕೋಟಿ ಡಾಲರ್‌ (ಅಂದಾಜು ₹2377 ಕೋಟಿ) ಮೌಲ್ಯದ ಸ್ವತ್ತುಗಳನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಂಡಿದ್ದು, ಇವುಗಳನ್ನು ಬಿಡುಗಡೆ ಮಾಡಬೇಕು.

  • ಅಮೆರಿಕ ತನ್ನ ಮಿತ್ರ ರಾಷ್ಟ್ರಗಳ ಸಮನ್ವಯದೊಂದಿಗೆ ಇರಾನ್‌ನ ಪುನರ್‌ಅಭಿವೃದ್ಧಿ ಮತ್ತು ಪುನರ್‌ನಿರ್ಮಾಣಕ್ಕೆ ಯೋಜನೆ ರೂಪಿಸಬೇಕು. ಈ ಕುರಿತು 60 ದಿನಗಳಲ್ಲಿ ಮಾತುಕತೆ ನಡೆಸಿ ಒಮ್ಮತಕ್ಕೆ ಬರಬೇಕು.

  • ಅಂತಿಮ ಒಪ್ಪಂದಕ್ಕೆ ಒಳಪಟ್ಟಂತೆ ಇರಾನ್‌ ತನ್ನ ಅಣ್ವಸ್ತ್ರ ಕಾರ್ಯಕ್ರಮದಲ್ಲಿ 'ಯಥಾಸ್ಥಿತಿ' ಕಾಪಾಡಲಿದೆ. ಅಂದರೆ ಯುರೇನಿಯಂ ಸಮೃದ್ಧೀಕರಣ ಮತ್ತು ಇದಕ್ಕೆ ಸಂಬಂಧಿಸಿದ ಸೌಲಭ್ಯಗಳ ವಿಸ್ತರಣೆ ಕೈಬಿಡಲಿದೆ.

  • ಅಮೆರಿಕ ಮತ್ತು ಇಸ್ರೇಲ್‌ ಪಡೆಗಳು ಫೆಬ್ರುವರಿ 28ರಂದು ದಾಳಿ ಆರಂಭಿಸಿದಾಗಿನಿಂದ, ಸುಮಾರು 270 ಬಿಲಿಯನ್‌ ಡಾಲರ್‌ (ಅಂದಾಜು ₹ 25 ಲಕ್ಷ ಕೋಟಿ) ನಷ್ಟ ಅನುಭವಿಸಿರುವುದಾಗಿ ಇರಾನ್‌ ಹೇಳಿಕೊಂಡಿದ್ದು. ಪರಿಹಾರ ಪಾವತಿ ಬಗ್ಗೆಯೂ ಉಲ್ಲೇಖಿಸಲಾಗಿದೆ.

  • 60 ದಿನಗಳ ಮಾತುಕತೆಯ ಅವಧಿಯಲ್ಲಿ ಅಮೆರಿಕವು ಈ ಪ್ರದೇಶಕ್ಕೆ ಹೆಚ್ಚುವರಿ ಮಿಲಿಟರಿ ಪಡೆಗಳನ್ನು ನಿಯೋಜಿಸುವುದಿಲ್ಲ ಅಥವಾ ಹೊಸ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಕರಡು ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.

ಅಂತಿಮ ಕರಡು ಸಿದ್ಧಪಡಿಸಿರುವ ಇರಾನ್

ಅಮೆರಿಕದೊಂದಿಗೆ ಮಾಡಿಕೊಳ್ಳಲಿರುವ ಒಪ್ಪಂದದ ಅಂತಿಮ ಕರಡನ್ನು ಇರಾನ್‌ ಸಿದ್ಧಪಡಿಸಿದ್ದಾಗಿ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ. ಅಣ್ವಸ್ತ್ರ ಕಾರ್ಯಕ್ರಮದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು, ಹಡಗುಗಳ ಸಂಚಾರಕ್ಕೆ ಹೊರ್ಮುಜ್‌ ಜಲಸಂಧಿಯನ್ನು ಮುಕ್ತಗೊಳಿಸುವುದು ಸೇರಿ ಹಲವಾರು ಅಂಶಗಳನ್ನು ಕರಡು ಒಳಗೊಂಡಿದೆ. ಎರಡೂ ದೇಶಗಳು ಒಪ್ಪಿದ ಬಳಿಕ 60 ದಿನಗಳಲ್ಲಿ ಒಪ್ಪಂದವನ್ನು ಅಂತಿಮಗೊಳಿಸುವ ಕುರಿತು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಅಮೆರಿಕ-ಇರಾನ್‌ ಶಾಂತಿ ಒಪ್ಪಂದಕ್ಕೆ ಸಹಿ ಸನ್ನಿಹಿತ: ಡೊನಾಲ್ಡ್‌ ಟ್ರಂಪ್‌

Dailyhunt
Disclaimer: This content has not been generated, created or edited by Dailyhunt. Publisher: Prajavani