ವಾಷಿಂಗ್ಟನ್: ಭಾರತದ ಅಣು ವಿದ್ಯುತ್ ಹೆಚ್ಚಳ ಯೋಜನೆ ಸೇರಿದಂತೆ ಹಲವು ವಿಷಯಗಳ ಕುರಿತು ಅಮೆರಿಕದ ಇಂಧನ ಸಚಿವ ಕ್ರಿಸ್ ರೈಟ್ ಅವರ ಜೊತೆ ಕೇಂದ್ರ ಇಂಧನ ಸಚಿವ ಮನೋಹರ್ ಲಾಲ್ ಖಟ್ಟರ್ ಚರ್ಚಿಸಿದರು.
ಹೂಸ್ಟನ್‌ನಲ್ಲಿ ನಡೆಯುತ್ತಿರುವ ಜಿ20 ಇಂಧನ ಸಚಿವರ ಸಭೆಯಲ್ಲಿ ಇವರಿಬ್ಬರ ಭೇಟಿ ನಡೆದಿದೆ ಎಂದು ಖಟ್ಟರ್ ಅವರ ಕಚೇರಿ ತಿಳಿಸಿದೆ.
ಕೃತಕ ಬುದ್ಧಿಮತ್ತೆ (ಎ.ಐ), ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಮತ್ತು ಡೇಟಾ ಸೆಂಟರ್‌ಗಳಂತಹ ಕ್ಷೇತ್ರಗಳಿಗೆ ಭಾರತಕ್ಕೆ ಅಗತ್ಯವಿರುವ ವಿದ್ಯುತ್ ಮೂಲಸೌಕರ್ಯ, ಅಣು ವಿದ್ಯುತ್ ವಿಸ್ತರಣೆ ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100 ಸುಂಕ: ಮಸೂದೆಗೆ ಅಮೆರಿಕ ಅಸ್ತುಸ್ವಚ್ಛ ಇಂಧನ ಕ್ಷೇತ್ರದಲ್ಲಿ ಸಹಕಾರ ಹೆಚ್ಚಿಸುವುದು, ಬಲಿಷ್ಠ ಇಂಧನ ಮೂಲಸೌಕರ್ಯ ನಿರ್ಮಾಣ ಹಾಗೂ ಹೊಸ ತಂತ್ರಜ್ಞಾನಗಳಲ್ಲಿನ ಸಹಕಾರದ ಬಗ್ಗೆಯೂ ಮಾತುಕತೆ ನಡೆಯಿತು.
2047ರ ವೇಳೆಗೆ ಅಣು ವಿದ್ಯುತ್ ಸಾಮರ್ಥ್ಯವನ್ನು 100 ಗಿಗಾವಾಟ್‌ಗೆ ಹೆಚ್ಚಿಸಲು ಭಾರತ ಗುರಿ ಹಾಕಿಕೊಂಡಿದೆ. ಹೀಗಾಗಿ ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅಮೆರಿಕದ ಕಂಪನಿಗಳು ಆಸಕ್ತಿ ತೋರುತ್ತಿವೆ. ಈ ಸಂದರ್ಭದಲ್ಲಿ ಈ ಭೇಟಿ ನಡೆದಿದೆ.
ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರ ನಿಯೋಜನೆಯನ್ನು ದೃಢಪಡಿಸಿದ ಅಮೆರಿಕ
