Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದಂತೆ ಇತರೆ ದೇಶಗಳಿಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ

ಭಾರತದಂತೆ ಇತರೆ ದೇಶಗಳಿಗೂ ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಅನುಮತಿ

ವಾಷಿಂಗ್ಟನ್: ಅಮೆರಿಕ-ಇರಾನ್ ನಡುವಿನ ಯುದ್ಧ ಸದ್ಯಕ್ಕೆ ಕೊನೆಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಈ ನಡುವೆ ಇರಾನ್ ಹೊರ್ಮುಜ್ ಜಲಸಂಧಿಯನ್ನು ಮುಚ್ಚಿರುವುದರಿಂದ ಜಾಗತಿಕವಾಗಿ ತೈಲ ಸರಬರಾಜಿಗೆ ತೊಡಕಾಗಿರುವ ಹಿನ್ನೆಲೆ ತಾತ್ಕಾಲಿಕವಾಗಿ ರಷ್ಯಾದಿಂದ ಕಚ್ಚಾತೈಲ ಆಮದಿಗೆ ಭಾರತದಂತೆ ಇತರೆ ದೇಶಗಳಿಗೂ ಅಮೆರಿಕ ಅನುಮತಿ ನೀಡಿದೆ.

ಹೊರ್ಮುಜ್ ಜಲಸಂಧಿ ಮುಚ್ಚಿರುವುದರಿಂದ ತೈಲ ಹೊತ್ತ ನೂರಾರು ಟ್ಯಾಂಕರ್‌ಗಳು ಸಾಗರದಲ್ಲೇ ಉಳಿದಿವೆ.

'ಇರಾನ್‌ನಿಂದ ತಲೆದೋರಿರುವ ಅಸ್ಥಿರತೆ ತೊಡೆದುಹಾಕಿ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡಲು ಮತ್ತು ಬೆಲೆ ನಿಯಂತ್ರಣದಲ್ಲಿಡುವ ದೃಷ್ಟಿಯಿಂದ ಅಮೆರಿಕ ಅಧ್ಯಕ್ಷರು ನಿರ್ಣಾಯಕ ಹೆಜ್ಜೆ ಇಟ್ಟಿದ್ದಾರೆ' ಎಂದು ಅಮೆರಿಕದ ಹಣಕಾಸು ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾರ್ಚ್ 3ರಂದು 30 ದಿನಗಳವರೆಗೆ ರಷ್ಯಾ ತೈಲ ಖರೀದಿಗೆ ಭಾರತಕ್ಕೆ ಅಮೆರಿಕ ಅನುಮತಿ ನೀಡಿತ್ತು.

'ಸದ್ಯದ ತೈಲ ಸರಬರಾಜನ್ನು ಗಮನದಲ್ಲಿಟ್ಟುಕೊಂಡು ರಷ್ಯಾದಿಂದ ತೈಲ ಆಮದಿಗೆ ಎಲ್ಲ ದೇಶಗಳಿಗೆ ಅಮೆರಿಕದ ಹಣಕಾಸು ಇಲಾಖೆ ಅನುಮತಿಸುತ್ತಿದೆ' ಎಂದು ಅವರು ತಿಳಿಸಿದ್ದಾರೆ.

'ಅಧ್ಯಕ್ಷ ಟ್ರಂಪ್ ಅವರ ಇಂಧನ ಪರ ನೀತಿಗಳು ಅಮೆರಿಕ ತೈಲ ಮತ್ತು ಅನಿಲ ಉತ್ಪಾದನೆಯನ್ನು ದಾಖಲೆಯ ಮಟ್ಟಕ್ಕೆ ಕೊಂಡೊಯ್ದಿವೆ. ಇದರಿಂದ ಕಷ್ಟಪಟ್ಟು ದುಡಿಯುವ ಅಮೆರಿಕನ್ನರಿಗೆ ಕಡಿಮೆ ಬೆಲೆಗೆ ಇಂಧನ ದೊರೆಯಲು ಅನುವು ಮಾಡಿಕೊಟ್ಟಿದೆ. ಸದ್ಯ, ತೈಲ ಬೆಲೆಗಳಲ್ಲಿನ ತಾತ್ಕಾಲಿಕ ಹೆಚ್ಚಳವು ಅಲ್ಪಾವಧಿಯ ಮತ್ತು ತಾತ್ಕಾಲಿಕ ಅಡ್ಡಿಯಾಗಿದ್ದು, ದೀರ್ಘಾವಧಿಯಲ್ಲಿ ನಮ್ಮ ನೀತಿಗಳು ರಾಷ್ಟ್ರ ಮತ್ತು ಆರ್ಥಿಕತೆಗೆ ಭಾರಿ ಪ್ರಯೋಜನವನ್ನು ನೀಡುತ್ತವೆ' ಎಂದೂ ಬೆಸೆಂಟ್ ಹೇಳಿದ್ದಾರೆ.

ಇರಾನ್ ಪರಮೋಚ್ಚ ನಾಯಕ ಮೊಜ್ತಬಾ ಖಮೇನಿ ಜೀವಕ್ಕೆ ಯಾವುದೇ ಖಾತ್ರಿ ಇಲ್ಲ: ನೆತನ್ಯಾಹು
Dailyhunt
Disclaimer: This content has not been generated, created or edited by Dailyhunt. Publisher: Prajavani