Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ ಎಐ ಶೃಂಗಸಭೆ ಅಸ್ತವ್ಯಸ್ತವಾಗಿತ್ತು: ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆ

ಭಾರತದ ಎಐ ಶೃಂಗಸಭೆ ಅಸ್ತವ್ಯಸ್ತವಾಗಿತ್ತು: ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆ

2026ರ ಫೆಬ್ರುವರಿಯಲ್ಲಿ ದೆಹಲಿಯಲ್ಲಿ ನಡೆದ ಭಾರತದ ಎ.ಐ ಶೃಂಗಸಭೆ ಅತ್ಯಂತ ಅಸ್ತವ್ಯಸ್ತವಾಗಿತ್ತು ಎಂದು ಆಂಥ್ರೋಪಿಕ್ ಸಿಇಒ ಡಾರಿಯೊ ಅಮೊಡೆ ಹೇಳಿದ್ದಾರೆ.

OpenAI vs Anthropic: ಎ.ಐ ದಿಗ್ಗಜರ ಸಮರಕ್ಕೆ ಭಾರತವೇ ಅಖಾಡ, ಯಾಕಿಷ್ಟು ಮುನಿಸು?

'ದಿ ಸರ್ಕ್ಯೂಟ್' ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಅವರು, 'ಆ ಶೃಂಗಸಭೆಯು ಅತ್ಯಂತ ಅಸ್ತವ್ಯಸ್ತವಾಗಿತ್ತು.

ನಾವೆಲ್ಲರೂ ಕೊನೆಯ ಕ್ಷಣದಲ್ಲಿ ವೇದಿಕೆಗೆ ಬಂದೆವು. ನಾವು ನಿಂತಿದ್ದ ಕ್ರಮವನ್ನು ಅವರು ಬದಲಾಯಿಸಿದರು. ಬಳಿಕ ಅವರು ನಮ್ಮ ಫೋಟೊ ತೆಗೆದರು. ಕೈ ಜೋಡಿಸುವಂತೆ ನಮಗೆಲ್ಲರಿಗೂ ಆದೇಶಿಸಿದರು' ಎಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ತನ್ನ ಎದುರಾಳಿ ಓಪನ್‌ಎಐ ಸಿಇಒ ಸ್ಯಾಮ್ ಆಲ್ಟ್‌ಮನ್ ಅವರ ಕೈ ಹಿಡಿಯಲು ನಿರಾಕರಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಆ ಕ್ಷಣದ ಬಗ್ಗೆ ಅವರು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.

ಎ.ಐ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಆಂಥ್ರೋಪಿಕ್‌ನ ಮಿಥೋಸ್: ಚೀನಾ, ರಷ್ಯಾಗೆ ನಡುಕ

'ನೀವು ಎಂದಾದರೂ ಇಂತಹ ಶೃಂಗಸಭೆಗಳಿಗೆ ಹೋಗಿದ್ದರೆ ನಿಮಗೆ ಗೊತ್ತಿರುತ್ತದೆ. ನಾನು ನಿರ್ದಿಷ್ಟವಾಗಿ ಭಾರತದ ಬಗ್ಗೆ ಯಾವುದೇ ಕೆಟ್ಟದ್ದನ್ನು ಹೇಳುತ್ತಿಲ್ಲ, ಆದರೆ ದೇಶದ ಮುಖ್ಯಸ್ಥರು ಭಾಗವಹಿಸುವ ಈ ರೀತಿಯ ಎಲ್ಲಾ ಅಂತರರಾಷ್ಟ್ರೀಯ ಮಟ್ಟದ ಶೃಂಗಸಭೆಗಳು ಅತ್ಯಂತ ಅಸ್ತವ್ಯಸ್ತವಾಗಿರುತ್ತವೆ' ಎಂದು ಹೇಳಿದ್ದಾರೆ.

'ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಣ್ಯರಿಗೆ ಕೈ ಜೋಡಿಸಿ ಎಂದು ಹಠಾತ್ತನೆ ಹೇಳಿದರು' ಎಂದು ಅವರು ಹೇಳಿದ್ದಾರೆ.

ಅಂದು ಆ ಘಟನೆ ನಡೆದ ನಂತರ, ಏನು ಮಾಡಬೇಕೆಂದು ನನಗೂ ಗೊತ್ತಾಗಿಲ್ಲ ಎಂದು ಸ್ಯಾಮ್ ಆಲ್ಟ್‌ಮನ್ ಕೂಡ ಹೇಳಿದ್ದರು. ನಾನು ಗೊಂದಲಕ್ಕೊಳಗಾಗಿದ್ದೆ ಎಂದು ಅವರು ಹೇಳಿದ್ದರು.

ಆಧಾರ: ಸರ್ಕ್ಯೂಟ್ ಪಾಡ್‌ಕಾಸ್ಟ್

ಒಂದು ಗುರಿ, ಭಿನ್ನ ಮಾರ್ಗ: ಅಮೆರಿಕ, ಚೀನಾದ ಎ.ಐ ಓಟದಲ್ಲಿ ಗೆಲ್ಲುವವರು ಯಾರು?
Dailyhunt
Disclaimer: This content has not been generated, created or edited by Dailyhunt. Publisher: Prajavani