Dailyhunt Logo
  • Light mode
    Follow system
    Dark mode
    • Play Story
    • App Story
ಭಾರತದ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ

ಭಾರತದ ಮೇಲೆ ಶೇ 100ರಷ್ಟು ಸುಂಕ ವಿಧಿಸಲು ಅಮೆರಿಕ ಸಂಸದರ ಪ್ರಸ್ತಾಪ

ವಾಷಿಂಗ್ಟನ್: ರಷ್ಯಾಕ್ಕೆ ನಿರ್ಬಂಧ ಹೇರುವ ಕಾನೂನಿಗೆ ಭಾರತ ಸೇರಿ ಆ ದೇಶದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳನ್ನು ಸೇರಿಸಬೇಕು ಎನ್ನುವ ತಿದ್ದುಪಡಿಗೆ ಅಮೆರಿಕ ಸಂಸದರು ಸೂಚಿಸಿದ್ದಾರೆ. ಅಲ್ಲದೆ ತೆರಿಗೆ ವಿಧಿಸುವ ಪ್ರಸ್ತಾಪವನ್ನೇ ತೆಗೆದುಹಾಕಬೇಕು ಎನ್ನುವ ತಿದ್ದುಪಡಿಯನ್ನು ಕೆಲವು ಸಂಸದರು ಮುಂದಿಟ್ಟಿದ್ದಾರೆ.

ಕಾನೂನು ವ್ಯಾಪ್ತಿಗೆ ಸೇರುವ ರಾಷ್ಟ್ರಗಳಿಗೆ ಶೇ 100 ತೆರಿಗೆ ವಿಧಿಸಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.

ವ್ಯಾಪಾರ ಮಾತುಕತೆ ವಿಫಲ: ಅಮೆರಿಕದ ಮೇಲೆ ಪ್ರತೀಕಾರದ ಸುಂಕ ಘೋಷಿಸಿದ ಕೆನಡಾ

ಕಳೆದ ತಿಂಗಳು ರಷ್ಯಾ ಹಾಗೂ ಇರಾನ್ ಮೇಲೆ ನಿರ್ಬಂಧ ಹೇರುವ ಮಸೂದೆಗೆ (ಲಿಂಡ್ಸೆ ಒ. ಗ್ರಹಾಂ ಸ್ಯಾಂಕ್ಷನಿಂಗ್ ರಷ್ಯಾ ಆಯಂಡ್ ಇರಾನ್ ಆಯಕ್ಟ್) ಅಮೆರಿಕ ಸಂಸತ್ 89-11 ಮತಗಳಿಂದ ಒಪ್ಪಿಗೆ ನೀಡಿತ್ತು.

ಈ ಮಸೂದೆಯು ರಷ್ಯಾದ ನಾಯಕತ್ವ ಮತ್ತು ಇಂಧನ ವಲಯದ ಮೇಲೆ ನಿರ್ಬಂಧ ವಿಧಿಸುವುದಲ್ಲದೆ, ರಷ್ಯಾದ ತೈಲ ಸಾಗಣೆಗೆ ನೆರವಾಗುತ್ತಿರುವ ಹಡಗುಗಳ ಗುಪ್ತಜಾಲಗಳ ಮೇಲೂ ನಿರ್ಬಂಧ ವಿಧಿಸುತ್ತದೆ.

ರಷ್ಯಾದ ಕಚ್ಚಾ ತೈಲ ವ್ಯಾಪಾರವು ಉಕ್ರೇನ್ ಮೇಲಿನ ಯುದ್ಧಕ್ಕೆ ಹಣಕಾಸು ಒದಗುತ್ತಿದೆ ಎಂಬುದು ಅಮೆರಿಕದ ವಾದ. ಹೀಗಾಗಿ, ರಷ್ಯಾದ ಪ್ರಮುಖ ತೈಲ ಖರೀದಿದಾರ ರಾಷ್ಟ್ರಗಳಾದ ಚೀನಾ ಮತ್ತು ಭಾರತ ಸೇರಿದಂತೆ ಇತರ ದೇಶಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಅಧಿಕಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ನೀಡುವ ಪ್ರಸ್ತಾವನೆಯೂ ಮಸೂದೆಯಲ್ಲಿದೆ.

ವ್ಯಾಪಾರ ಒಪ್ಪಂದ ವಿಫಲ: ಕೆನಡಾ ಸರಕುಗಳ ಮೇಲೆ ಅಮೆರಿಕದಿಂದ ಶೇ 50ರಷ್ಟು ಸುಂಕ

ಆಗಸ್ಟ್ 7ರಂದು ಸೆನೆಟ್ ಅಂಗೀಕರಿಸಿದ ಮಸೂದೆಯಲ್ಲಿ ರಷ್ಯಾದ ವ್ಯಾಪಾರ ಪಾಲುದಾರ ರಾಷ್ಟ್ರಗಳ ಹೆಸರುಗಳನ್ನು ನೇರವಾಗಿ ಉಲ್ಲೇಖಿಸಿರಲಿಲ್ಲ

ಮಸೂದೆ ಕಾನೂನಾಗಬೇಕಾದರೆ ಮೊದಲು ಪ್ರತಿನಿಧಿಗಳ ಸಭೆಯಲ್ಲಿ ಅಂಗೀಕಾರಗೊಳ್ಳಬೇಕು. ಬಳಿಕ ಅಧ್ಯಕ್ಷರ ಸಹಿಗೆ ಕಳುಹಿಸಲಾಗುತ್ತದೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿನಿಧಿಗಳ ಸಭೆ ಶೀಘ್ರದಲ್ಲೇ ರಜೆ ತೆರಳಲಿದ್ದು, ಅದಕ್ಕೂ ಮುನ ಕೇವಲ ನಾಲ್ಕು ದಿನಗಳು ಮಾತ್ರ ಉಳಿದಿವೆ.

ಈ ನಡುವೆ, ಡೆಮಾಕ್ರಟಿಕ್ ಪಕ್ಷದ ಸಂಸದ ಸ್ಟೆನಿ ಹೋಯರ್ ಮಂಡಿಸಿರುವ ತಿದ್ದುಪಡಿಯಲ್ಲಿ ಶೇ 100ರಷ್ಟು ಸುಂಕ ವಿಧಿಸಬಹುದಾದ ರಾಷ್ಟ್ರಗಳನ್ನು ಸ್ಪಷ್ಟವಾಗಿ ಹೆಸರಿಸಲಾಗಿದೆ. ಚೀನಾ, ಭಾರತ, ಟರ್ಕಿ, ಅಜರ್‌ಬೈಜಾನ್, ಹಂಗೇರಿ, ಸ್ಲೋವಾಕ್ ಗಣರಾಜ್ಯ, ಯುನೈಟೆಡ್ ಅರಬ್ ಎಮಿರೇಟ್ಸ್, ಸಿಂಗಪುರ, ಕಜಕಿಸ್ತಾನ ಮತ್ತು ಕಿರ್ಗಿಜ್ ಗಣರಾಜ್ಯಗಳು ಈ ಪಟ್ಟಿಯಲ್ಲಿವೆ.

ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100 ಸುಂಕ: ಭಾರತದ ಮೇಲೆ ಏನು ಪರಿಣಾಮ?

ಆದರೆ, ಟ್ರಂಪ್ ಅವರಿಗೆ ಹೆಚ್ಚುವರಿ ಸುಂಕ ವಿಧಿಸುವ ಅಧಿಕಾರ ನೀಡುವುದನ್ನು ತೀವ್ರವಾಗಿ ವಿರೋಧಿಸುತ್ತಿರುವ ಡೆಮಾಕ್ರಟಿಕ್ ಪಕ್ಷದ ಮತ್ತೊಬ್ಬ ಸಂಸದ ಗ್ರೆಗೊರಿ ಮೀಕ್ಸ್, ರಷ್ಯಾದ ವ್ಯಾಪಾರ ಪಾಲುದಾರ ರಾಷ್ಟ್ರಗಳ ಮೇಲೆ ದ್ವಿತೀಯ ಹಂತದ ಸುಂಕ ವಿಧಿಸಲು ಅಧ್ಯಕ್ಷರಿಗೆ ಅಧಿಕಾರ ನೀಡುವ ಮಸೂದೆಯ ಸೆಕ್ಷನ್ 113ನ್ನೇ ಸಂಪೂರ್ಣವಾಗಿ ರದ್ದುಪಡಿಸುವ ತಿದ್ದುಪಡಿಯನ್ನು ಮಂಡಿಸಿದ್ದಾರೆ. ಮೀಕ್ಸ್ ಅವರ ಈ ತಿದ್ದುಪಡಿಗೆ ಮೂವರು ಸಂಸದರು ಬೆಂಬಲ ನೀಡಿದ್ದಾರೆ.

ರಷ್ಯಾ ನಿರ್ಬಂಧ ಮಸೂದೆಗೆ ಸಂಬಂಧಿಸಿದ ತಿದ್ದುಪಡಿ ಪ್ರಸ್ತಾವಗಳನ್ನು ಜನ ಪ್ರತಿನಿಧಿಗಳ ಸಭೆಯ ನಿಯಮ ಸಮಿತಿ ಸೋಮವಾರ ಸಾರ್ವಜನಿಕಗೊಳಿಸಿದೆ.

ಭಾರತ ಸೇರಿ ರಷ್ಯಾ ತೈಲ ಖರೀದಿಸುವ ದೇಶಗಳ ಮೇಲೆ ಶೇ 100ರಷ್ಟು ಸುಂಕ: ಅಮೆರಿಕ ಅಸ್ತು
Dailyhunt
Disclaimer: This content has not been generated, created or edited by Dailyhunt. Publisher: Prajavani