ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲರ ಇತಿಹಾಸ ಸಾರುವ, ಪರಂಪರೆ ಮುಂದುವರಿಸುವ, ಹಿರಿಯರ ನೆನಪಿನಲ್ಲಿ ಕಟ್ಟಿದ 'ಕೋಲಾಟ ತಂಡ'ವು ಜಾನಪದ ಕಲೆಯನ್ನು ಇಂದಿಗೂ ಜೀವಂತವಾಗಿಸಿದೆ.
ಗುಬ್ಬಿ ತಾಲ್ಲೂಕು ಹಾಗಲವಾಡಿ ಹೋಬಳಿಯ ಅರಳಕಟ್ಟೆ ಗೊಲ್ಲರಹಟ್ಟಿಯ 'ಜುಂಜಪ್ಪ ಸ್ವಾಮಿ' ಕೋಲಾಟ ತಂಡವು ಹಲವು ತಲೆಮಾರುಗಳಿಂದ ಬರುತ್ತಿರುವ ಕಲೆಯನ್ನು ಉಳಿಸಿಕೊಂಡು ಬರುತ್ತಿದೆ.
ಕೋಲಾಟವು ಹಟ್ಟಿಯ ಜನರ ಬದುಕಿನ ಭಾಗವಾಗಿದೆ. ಗ್ರಾಮೀಣ ಕಲೆಯನ್ನು ಕೇವಲ ತಮ್ಮ ಹಳ್ಳಿಗೆ ಸೀಮಿತವಾಗಿಸದೆ, ಸರ್ವರಿಗೂ ಪರಿಚಯಿಸಲು ಮುಂದಾಗಿದೆ. 15 ಯುವಕರನ್ನು ಒಳಗೊಂಡ ತಂಡ ಈಗ ಜಿಲ್ಲೆಯ ಎಲ್ಲೆಡೆ ಕೋಲಾಟ ಪ್ರದರ್ಶಿಸುತ್ತಿದೆ.
ಕೋಲಾರ: ರಾಜ್ಯ ಕೊಕ್ಕೊ ತಂಡದಲ್ಲಿ ಎಳನೀರು ವ್ಯಾಪಾರಿ ಪುತ್ರಕೋಲಾಟ ತಲತಲಾಂತರದಿಂದ ಬಂದಿರುವ ಕಲೆ. ಅರಳಕಟ್ಟೆ ಗೊಲ್ಲರಹಟ್ಟಿಯಲ್ಲಿ ಕೆಲ ವರ್ಷಗಳ ಕಾಲ ಅಭ್ಯಾಸ ನಿಲ್ಲಿಸಿದ್ದರು. ಯುವಕರು ಮುಂದೆ ಬಂದು ಕೋಲಾಟ ಮುಂದುವರಿಸುವ ಪಣತೊಟ್ಟರು. ಅವರೇ ಒಂದು ತಂಡ ರಚಿಸಿಕೊಂಡು ಅದಕ್ಕೊಂದು ಹೆಸರಿಟ್ಟರು. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯರು ಹೆಜ್ಜೆ ಹಾಕುತ್ತಿದ್ದಾರೆ.
ಕೋಲಾಟ ಕೇವಲ ಮನರಂಜನೆ ನೀಡುವ ಕಲೆಯಾಗಿ ಉಳಿದಿಲ್ಲ, ಕಾಡುಗೊಲ್ಲರ ಜತೆಗೆ ಅವಿನಾಭಾವ ಸಂಬಂಧ ಹೊಂದಿದೆ. ಬುಡಕಟ್ಟು ಸಂಸ್ಕೃತಿಯ ಅಸ್ಮಿತೆ ಸಂಕೇತವಾಗಿದೆ. ಹಿಂದೆ ಬುಡಕಟ್ಟು ಜನಾಂಗದಲ್ಲಿ 9 ದಿನ ಮದುವೆ ಸಂಭ್ರಮ ಇರುತ್ತಿತ್ತು. ಆಗ ಪ್ರತಿ ದಿನ ಕೋಲಾಟದ ಪ್ರದರ್ಶನ ಸಾಮಾನ್ಯವಾಗಿರುತ್ತಿತ್ತು. ಹಲವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೋಲಾಟ ಹಾಜರಾತಿ ಕಡ್ಡಾಯ.
ಕೋಲಾಟದಲ್ಲಿ ತಾಳಗಡ್ಡಿ, ಸೀಳಗಡ್ಡಿ, ಕೊರವಂಜಿ, ಚಿತ್ತಲಾರ ಇತರೆ ವಿಧಗಳಿವೆ. ಜುಂಜಪ್ಪ ಸ್ವಾಮಿ ತಂಡ ದೇವರ ಮೇಲೆ ಪದಗಳನ್ನು ಕಟ್ಟಿ, ಹಾಡುವ ಮೂಲಕ ಕೋಲಾಟ ಪ್ರದರ್ಶಿಸುತ್ತಾರೆ. ದೇವರ ಕೆಲಸ, ಮದುವೆ ಸಮಯದಲ್ಲಿ ಹೆಚ್ಚಾಗಿ ಕೋಲಾಟ ಪ್ರದರ್ಶನ ಇರುತ್ತದೆ. ಆರ್ಕೆಸ್ಟ್ರಾ, ಡಿ.ಜೆಗಳ ಸದ್ದು ಇಲ್ಲದ ಕಾಲದಲ್ಲಿ ಕೋಲಾಟವೇ ಮನರಂಜನೆಯ ಮೂಲವಾಗಿತ್ತು. ಇಂತಹ ಅಪರೂಪದ ಕಲೆಯನ್ನು ಉಳಿಸುವ ಕೆಲಸ ಗೊಲ್ಲರಹಟ್ಟಿಯ ಜನ ತುಂಬಾ ಶ್ರದ್ಧೆಯಿಂದ ಮಾಡುತ್ತಿದ್ದಾರೆ.

'ಜುಂಜಪ್ಪ ಸ್ವಾಮಿ' ಕೋಲಾಟ ತಂಡ
ಕೋಲಾಟ, ಜಾನಪದ ನೃತ್ಯ, ಏಕಪಾತ್ರಾಭಿನಯ: ಮಹಿಳಾ ದಸರಾದಲ್ಲಿ ನಾರಿಯರ ಮಿಂಚುಈಗಾಗಲೇ ಜಾನಪದ ಕಲೆಗಳು ನಶಿಸುತ್ತಿವೆ. ಹಳ್ಳಿಗಳಿಂದಲೇ ಕಣ್ಮರೆಯಾಗುತ್ತಿವೆ. ಇಂತಹ ಸಮಯದಲ್ಲಿ ಗ್ರಾಮೀಣ ಕಲೆ ಉಳಿಸಿ, ಬೆಳೆಸುವ ಕಾಯಕ ಸದ್ದಿಲ್ಲದೆ ನಡೆಯುತ್ತಿದೆ. ತುಮಕೂರಿನ ಶಿರಾ, ಪಾವಗಡ ಭಾಗದ ಮೂಲ ಹಳ್ಳಿಗಳಲ್ಲಿ ಇಂದಿಗೂ ಕೋಲಾಟ ಕಲೆ ಪ್ರದರ್ಶಿಸಲಾಗುತ್ತಿದೆ.
ಕೋಲಾಟ ತಂಡದ ಎಲ್ಲ ಸದಸ್ಯರು ರೈತರು, ಕೂಲಿ ಕಾರ್ಮಿಕರು. ಹಗಲೆಲ್ಲಾ ಜಮೀನಿನಲ್ಲಿ ಕೆಲಸ ಮಾಡಿ, ಸಂಜೆಯ ನಂತರ ಕೋಲಾಟ ಅಭ್ಯಾಸ ನಡೆಸುತ್ತಾರೆ. ಕುರಿ- ಮೇಕೆ ಮೇಯಿಸುತ್ತಾ ಕೋಲಾಟದ ಹಾಡುಗಳನ್ನು ಹಾಡುತ್ತಾ ದಿನ ಕಳೆಯುತ್ತಾರೆ. ಹಾಡುಗಳ ಮೂಲಕ ಜುಂಜಪ್ಪನ ಧ್ಯಾನ ಮಾಡುತ್ತಾರೆ. ಜುಂಜಪ್ಪನ ಬಗ್ಗೆ ಪದಗಳಲ್ಲಿ ಕಟ್ಟಿ ಹಾಡುತ್ತಾರೆ. ಜಾನಪದ ಕಲಾವಿದರು ಎಂದು ಗುರುತಿನ ಚೀಟಿ ನೀಡುವಂತೆ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೆ ಇನ್ನೂ ಗುರುತಿನ ಚೀಟಿ ಅವರ ಕೈ ಸೇರಿಲ್ಲ. ಸರ್ಕಾರವು ಇವರಿಗೆ ಪೂರಕವಾದ ಕಾರ್ಯಕ್ರಮ ರೂಪಿಸಿದರೆ, ಕೋಲಾಟ ನಂಬಿದವರ ಬದುಕು ಹಸನಾಗುತ್ತದೆ.ರೈತರು, ಕೂಲಿ ಕಾರ್ಮಿಕರು...ಸರ್ಕಾರ ಜಾನಪದ ಕಲಾವಿದರಿಗೆ ಪ್ರೋತ್ಸಾಹಧನ ನೀಡಿ ಬೆಂಬಲಿಸುತ್ತಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಇಡೀ ತಂಡಕ್ಕೆ ಒಂದು ಬಾರಿ ₹20 ಸಾವಿರ ಹಣ ಬಿಡುಗಡೆ ಮಾಡಲಾಗಿತ್ತು. ಅದೇ ಹಣದಲ್ಲಿ ಗೆಜ್ಜೆ, ಟೀಶರ್ಟ್ ಖರೀದಿಸಿದ್ದರು. ಇದರ ಜತೆಗೆ ಜಿಲ್ಲೆಯ ವಿವಿಧೆಡೆ ಕೋಲಾಟ ಪ್ರದರ್ಶಿಸಿ ಬಹುಮಾನ ಪಡೆದಿದ್ದಾರೆ. ದೀಪಾವಳಿ, ಯುಗಾದಿ, ಗಣಪತಿ ಪ್ರತಿಷ್ಠಾಪನೆ ಸಮಯದಲ್ಲಿ 'ಜುಂಜಪ್ಪ ಸ್ವಾಮಿ' ತಂಡದಿಂದ ಕೋಲಾಟ ಪ್ರದರ್ಶನ ಇರಲೇಬೇಕು ಎಂಬುವಂತಾಗಿದೆ. ಅರಳಕಟ್ಟೆ ಗೊಲ್ಲರಹಟ್ಟಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹಬ್ಬದ ಸಮಯದಲ್ಲಿಯೂ ತಂಡ ಹಾಜರಾತಿ ಕಡ್ಡಾಯ. ತಮ್ಮ ಪ್ರದರ್ಶನ, ಜಾನಪದ ಗೀತೆಗಳ ಮೂಲಕ ಹಬ್ಬಕ್ಕೆ ಕಳೆ ತರುತ್ತಾರೆ.'ಗೆಜ್ಜೆ'ಗೆ ಸರ್ಕಾರದ ನೆರವು ...ಚಂದ್ರಯ್ಯ, ಕೋಲಾಟ ತಂಡದ ಸದಸ್ಯತಾತ, ಮುತ್ತಾತರ ಕಾಲದಿಂದಲೂ ಕೋಲಾಟ ನಮ್ಮ ಬದುಕಿನ ಭಾಗವಾಗಿದೆ. ಹಟ್ಟಿಯ ಜನರ ಉಸಿರಾಗಿದೆ. ಯುವ ಸಮೂಹ ಕೂಡ ಕಲೆಯ ಕಡೆಗೆ ಹೆಜ್ಜೆ ಹಾಕುತ್ತಿರುವುದು ಸಂತಸದ ವಿಚಾರಮೋಹನ್, ಜಾನಪದ ಗಾಯಕ, ತುಮಕೂರುಪ್ರತಿ ಹಟ್ಟಿಗೆ ತೆರಳಿ ಕೋಲಾಟ ಕಲೆ ಉಳಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಜನರು ಸ್ವ-ಇಚ್ಛೆಯಿಂದ ಮುಂದೆ ಬರುತ್ತಿದ್ದಾರೆ. ಇಂದಿನ ಪೀಳಿಗೆಗೆ ಕಲೆಯನ್ನು ಪರಿಚಯಿಸುತ್ತಿದ್ದಾರೆ. ಇದು ಸಂಸ್ಕೃತಿಯ ಭಾಗವಾಗಿದೆ
