Dailyhunt Logo
  • Light mode
    Follow system
    Dark mode
    • Play Story
    • App Story
ಚುನಾವಣೆಯಲ್ಲಿ ಸ್ಪರ್ಧಿಸದೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವೆ: ಅಖಿಲೇಶ್ ಯಾದವ್

ಚುನಾವಣೆಯಲ್ಲಿ ಸ್ಪರ್ಧಿಸದೆ ಉತ್ತರ ಪ್ರದೇಶ ಮುಖ್ಯಮಂತ್ರಿಯಾಗುವೆ: ಅಖಿಲೇಶ್ ಯಾದವ್

ವಾರಾಣಸಿ: ಉತ್ತರ ಪ್ರದೇಶ ವಿಧಾನಸಭೆಗೆ 2027ರಲ್ಲಿ ನಡೆಯುವ ಚುನಾವಣೆಯಲ್ಲಿ ತಾವು ಸ್ಪರ್ಧಿಸುವುದಿಲ್ಲ ಎಂಬುದನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣೆಯಲ್ಲಿ ಸ್ಪರ್ಧಿಸದೆ ನೇರವಾಗಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ತಮಾಷೆ ಮಾಡಿದ್ದಾರೆ.

'ನಾನು ಚುನಾವಣಾ ಅಖಾಡಕ್ಕೆ ಇಳಿಯದಿದ್ದಾಗ ಮುಖ್ಯಮಂತ್ರಿಯಾಗುತ್ತೇನೆ. ಹಾಗಾಗಿ, ಯಾವುದು ಒಳ್ಳೆಯದೋ ಅದನ್ನೇ ಮಾಡುತ್ತೇನೆ' ಎಂದಿದ್ದಾರೆ. ಆ ಮೂಲಕ, ಈ ಬಾರಿ ತಮ್ಮ ಪಕ್ಷವು ಅಧಿಕಾರಕ್ಕೇರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2012ರಲ್ಲಿಯೂ ತಾವು ಲೋಕಸಭಾ ಸದಸ್ಯರಾಗಿದ್ದಾಗಲೇ ಮುಖ್ಯಮಂತ್ರಿಯಾಗಿದ್ದು ಎಂಬುದನ್ನು ನೆನಪಿಸಿಕೊಂಡಿರುವ ಅವರು, ಈ ಬಾರಿಯೂ ಸಂಸತ್‌ ಸದಸ್ಯನಾಗಿದ್ದಾಗಲೇ ಸಿಎಂ ಗಾದಿಗೇರುವೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಸದ್ಯ ಅವರು ಕನೌಜ್‌ ಕ್ಷೇತ್ರದ ಸಂಸದರಾಗಿದ್ದಾರೆ.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 2027ರ ಆರಂಭದಲ್ಲಿ (ಫೆಬ್ರುವರಿ-ಮಾರ್ಚ್‌) ಚುನಾವಣೆ ನಡೆಯಲಿದೆ. 2017 ಹಾಗೂ 2022ರ ಚುನಾವಣೆಯಲ್ಲಿ ಭಾರಿ ಜಯ ಸಾಧಿಸಿ ಅಧಿಕಾರದಲ್ಲಿರುವ ಬಿಜೆಪಿ, ಹ್ಯಾಟ್ರಿಕ್‌ ಜಯದ ನಿರೀಕ್ಷೆಯಲಿದೆ. ಆದರೆ, ಅಖಿಲೇಶ್‌ ಪಕ್ಷವು 'ಕೇಸರಿ' ಪಡೆಗೆ ಸೋಲುಣಿಸುವ ಲೆಕ್ಕಾಚಾರ ಮಾಡುತ್ತಿದೆ.

ಇಂಡಿಯಾ ಮೈತ್ರಿಕೂಟದ ಸಭೆಗೆ ಅಖಿಲೇಶ್ ಯಾದವ್ ಗೈರು: ಕಾಂಗ್ರೆಸ್‌ಗೆ ಸ್ಪಷ್ಟ ಸಂದೇಶ!ಮೋದಿಯ ವಾರಾಣಸಿ ಚುನಾವಣಾ ಫಲಿತಾಂಶ ರದ್ದು ಮಾಡುವಂತೆ ಕಾಂಗ್ರೆಸ್ ಕೂಗು: ಕಾರಣವೇನು?ಬಿಜೆಪಿಗೆ ಹೊಸ ರಾಷ್ಟ್ರೀಯ ತಂಡ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮೇಲೆ ಕಣ್ಣು? ಮುಂದಿನ ದಿನಗಳಲ್ಲಿ ದೇಶದಲ್ಲಿ ಚುನಾವಣೆಗಳೇ ನಡೆಯದಿರಬಹುದು: ಅಖಿಲೇಶ್ ಯಾದವ್
Dailyhunt
Disclaimer: This content has not been generated, created or edited by Dailyhunt. Publisher: Prajavani