Dailyhunt Logo
  • Light mode
    Follow system
    Dark mode
    • Play Story
    • App Story
ದಯವಿಟ್ಟು ನಿಲ್ಲಿಸಿ.. ಇರಾನ್ ಮನವಿ ಮೇರೆಗೆ ಸೇನಾ ಕಾರ್ಯಾಚರಣೆ ಸ್ಥಗಿತ: ಟ್ರಂಪ್

ದಯವಿಟ್ಟು ನಿಲ್ಲಿಸಿ.. ಇರಾನ್ ಮನವಿ ಮೇರೆಗೆ ಸೇನಾ ಕಾರ್ಯಾಚರಣೆ ಸ್ಥಗಿತ: ಟ್ರಂಪ್

ವಾಷಿಂಗ್ಟನ್: ಇರಾನ್ ಮನವಿ ಮೇರೆಗೆ ಸೇನಾ ಕಾರ್ಯಾಚರಣೆ ಸದ್ಯಕ್ಕೆ ತಡೆಹಿಡಿಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

'ಏರ್ ಫೋರ್ಸ್ ಒನ್' ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇರಾನ್ ಜತೆ ಪ್ರಸ್ತುತ ನಡೆಯುತ್ತಿರುವ ರಾಜತಾಂತ್ರಿಕ ಬೆಳವಣಿಗೆಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಉಭಯ ದೇಶಗಳ ನಡುವಿನ ಸಂಧಾನ ಮಾತುಕತೆ ವಿಫಲವಾದರೆ ಮತ್ತೆ ದಾಳಿ ಮುಂದುವರಿಯಲಿದೆ ಎಂದೂ ಎಚ್ಚರಿಸಿದ್ದಾರೆ.

ದಯವಿಟ್ಟು ದಾಳಿ ನಿಲ್ಲಿಸಿ, ನಾವಿಬ್ಬರೂ ಭೇಟಿಯಾಗಿ ಮಾತುಕತೆ ನಡೆಸೋಣ ಎಂದು ಇರಾನ್ ಅತ್ಯಂತ ವಿನಮ್ರವಾಗಿ ಕೋರಿದೆ. ಹೀಗಾಗಿ ಸದ್ಯಕ್ಕೆ ದಾಳಿ ತಡೆದು ಮಾತುಕತೆಗೆ ಮುಂದಾಗಿದ್ದೇವೆ. ಹೊಸ ಒಪ್ಪಂದ ಸಾಧ್ಯವಾಗದಿದ್ದರೆ, ಮತ್ತೆ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕದೊಂದಿಗೆ ಒಪ್ಪಂದ ಅಸಾಧ್ಯ: ಹೊರ್ಮುಜ್ ನಮ್ಮ 'ಶಕ್ತಿ ಕೇಂದ್ರ' ಎಂದ ಇರಾನ್

ಇರಾನ್ ಜತೆ ನೇರವಾಗಿ ಮತ್ತು ಮಧ್ಯಸ್ಥಿಕೆದಾರರ ಮೂಲಕವೂ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆ ಸಕಾರಾತ್ಮಕವಾಗಿ ನಡೆಯುತ್ತಿದೆ. ನಾವು ತೀವ್ರ ದಾಳಿ ನಡೆಸಿದ್ದರಿಂದಲೇ ಇರಾನ್ ಇಂದು ಮಾತುಕತೆಗೆ ಮುಂದೆ ಬಂದಿದೆ ಎಂದೂ ಟ್ರಂಪ್ ಪ್ರತಿಪಾದಿಸಿದ್ದಾರೆ.

ದಾಳಿ ನಿಲ್ಲಿಸುವಂತೆ ಅಧಿಕಾರಿಗಳ ಸಲಹೆ:

ಯುದ್ಧ ಮುಂದುವರಿದರೆ, 'ಪೇಟ್ರಿಯಾಟ್' ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರಗಳ ಕೊರತೆ ಉಂಟಾಗಬಹುದು ಎಂದು ಸೇನಾಧಿಕಾರಿಗಳು ಮತ್ತು ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಎಚ್ಚರಿಸಿದ್ದರು. ಈ ಹಿನ್ನೆಲೆ ಟ್ರಂಪ್ ದಾಳಿ ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಆದರೆ ಯುದ್ಧ ಸಾಮಗ್ರಿಗಳ ಕೊರತೆಯನ್ನು ಟ್ರಂಪ್‌ ತಳ್ಳಿಹಾಕಿದ್ದಾರೆ.

ಅಗತ್ಯಕ್ಕಿಂತ ಹೆಚ್ಚೇ ಇವೆ: ಯುದ್ಧ ಸಾಮಗ್ರಿ ಕೊರತೆ ವರದಿ ತಳ್ಳಿ ಹಾಕಿದ ಟ್ರಂಪ್

ಆಧಾರ: ಎಎನ್‌ಐ

Dailyhunt
Disclaimer: This content has not been generated, created or edited by Dailyhunt. Publisher: Prajavani