ಬಹುನಿರೀಕ್ಷಿತ ಪ್ರೇಮ್ ನಿರ್ದೇಶನ ಹಾಗೂ ಧ್ರುವ ಸರ್ಜಾ ನಟನೆಯಲ್ಲಿ ಮೂಡಿಬರುತ್ತಿರುವ 'ಕೆಡಿ' ಸಿನಿಮಾದಲ್ಲಿ ತಾರಾ ನಟ ಬಾದ್‌ಷಾ ಸುದೀಪ್ ಅವರು ನಟಿಸಲಿದ್ದಾರೆ ಎಂದು ನಿರ್ದೇಶಕ ಪ್ರೇಮ್ ಸ್ಪಷ್ಟಪಡಿಸಿದ್ದಾರೆ.
'ಧುರಂಧರ್' ನಿರ್ದೇಶಕ ಆದಿತ್ಯಧರ್ ಪತ್ನಿ ಯಾಮಿ ಗೌತಮ್‌ಗಿದೆ ಚಂದನವನದ ನಂಟುSandalwood: 'ಬೃಂದಾವಿಹಾರಿ'ಯಲ್ಲಿ ರಾಮನ ಜಪ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್ಕೆಡಿ ಚಿತ್ರದಲ್ಲಿ ಕಿಚ್ಚ ಸುದೀಪ್ ಪಾತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಪರಿಚಯಿಸಿರುವ ಪ್ರೇಮ್ ಅವರು, 'ಕೆಲವು ಹೆಸರುಗಳು ಆತಂಕ ಮೂಡಿಸಿದರೆ, ಈ ಹೆಸರು ತಬ್ಬಿಬ್ಬಾಗಿಸುತ್ತದೆ.
ಈ ಚಿತ್ರದಲ್ಲಿ ನನ್ನ ಡಾರ್ಲಿಂಗ್ 'ಕಾಲ ಭೈರವ' ಪಾತ್ರದಲ್ಲಿ ನಟಿಸಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಪ್ರೇಮ್ ಹಂಚಿಕೊಂಡ ಪೋಸ್ಟರ್‌ನಲ್ಲಿ ಕಿಚ್ಚ ಸುದೀಪ್ ಅವರು ಹಿಮ್ಮುಖವಾಗಿ ರುದ್ರಾಕ್ಷಿ ಮಾಲೆ ಹಿಡಿದು ನಿಂತಿದ್ದಾರೆ. ಸದ್ಯ, ಚಿತ್ರ ನೋಡಿದ ಸುದೀಪ್ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದಲ್ಲಿ ಧ್ರುವ ಸರ್ಜಾ, ವಿ. ರವಿಚಂದ್ರನ್, ರಮೇಶ್ ಅರವಿಂದ್, ಕಿಚ್ಚ ಸುದೀಪ್ ರೀಷ್ಮಾ ನಾಣಯ್ಯ, ನೋರಾ ಫತೇಹಿ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಸೇರಿ ದೊಡ್ಡ ಬಳಗವನ್ನೇ ಹೊಂದಿರುವ ಈ ಚಿತ್ರವು 'ಕೆಡಿ' ಚಿತ್ರ 2026ರ ಏಪ್ರಿಲ್ 30ರಂದು ತೆರೆಕಾಣಲಿದೆ.

