ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಬೃಂದಾವಿಹಾರಿ' ಚಿತ್ರದ 'ರಾಮ ರಾಮ ದೇವಾ' ಹಾಡನ್ನು ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ.
ಲವ್ ಮಾಕ್ಟೇಲ್ ಕದ್ದಕಥೆ ಎಂದ ರಾಘವೇಂದ್ರಗೆ ಕೃಷ್ಣ-ಮಿಲನಾ ತಿರುಗೇಟುಲವ್ ಮಾಕ್ಟೇಲ್ ಕದ್ದಕಥೆ ಎಂದ ರಾಘವೇಂದ್ರಗೆ ಕೃಷ್ಣ-ಮಿಲನಾ ತಿರುಗೇಟುಯುಗಾದಿ ಹಬ್ಬದಂದು ಈ ಚಿತ್ರದ ಶೀರ್ಷಿಕೆ ಅನಾವರಣ ಮಾಡಲಾಗಿತ್ತು.
ರಾಮನವಮಿ ದಿನ ಈ ಸಿನಿಮಾದ ಮೊದಲ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಈ ಹಾಡಿನಲ್ಲಿ ಗಣೇಶ್ ಅವರಿಗೆ ಜೋಡಿಯಾಗಿ ದೇವಿಕಾ ಭಟ್ ಅವರು ಹೆಜ್ಜೆ ಹಾಕಿದ್ದಾರೆ. ಈ ಗೀತೆಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದರೆ, ಅನುರಾಗ್ ಕುಲಕರ್ಣಿ ಹಾಡಿಗೆ ಧ್ವನಿ ನೀಡಿದ್ದಾರೆ.
ಶ್ರೀನಿವಾಸರಾಜು ನಿರ್ದೇಶನದ 'ಬೃಂದಾವಿಹಾರಿ' ಚಿತ್ರಕ್ಕೆ ಸಮೃದ್ಧಿ ವಿ.ಮಂಜುನಾಥ್ ಅವರು ಹೂಡಿಕೆ ಮಾಡಿದ್ದಾರೆ .
ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕಾ ಶರ್ಮಾ ನಟಿಸಿತ್ತಿರುವ ಈ ಚಿತ್ರವು ಪ್ರೇಮಕಥೆಯನ್ನು ಹೊತ್ತ ಕೌಟುಂಬಿಕ ಸಿನಿಮಾವಾಗಿದೆ.
ಈ ಚಿತ್ರದ ಏಳೂ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರೇ ಬರೆಯಲಿದ್ದಾರೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

