Dailyhunt Logo
  • Light mode
    Follow system
    Dark mode
    • Play Story
    • App Story
ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವೆ: ಸಿಎಂ ವಿಜಯ್

ಡಿಎಂಕೆ ಸರ್ಕಾರದ ಆರ್ಥಿಕ ಸ್ಥಿತಿಗತಿಯ ಬಗ್ಗೆ ಶ್ವೇತಪತ್ರ ಹೊರಡಿಸುವೆ: ಸಿಎಂ ವಿಜಯ್

ಚೆನ್ನೈ: ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕ ವಿಜಯ್‌ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರುತ್ತಿದ್ದಂತೆ, ಗೃಹ ಬಳಕೆಯ 200 ಯೂನಿಟ್‌ ಉಚಿತ ವಿದ್ಯುತ್‌ ಸೇರಿದಂತೆ ಜನಪರವಾದ ಹಲವು ಯೋಜನೆಗಳನ್ನು ಜಾರಿಗೊಳಿಸುವುದಾಗಿ ಭಾನುವಾರ ಭರವಸೆ ನೀಡಿದ್ದಾರೆ.

ಪ್ರಮಾಣವಚನ ಸ್ವೀಕರಿಸಿದ ಬಳಿಕ ಡಿಎಂಕೆ ಸರ್ಕಾರದ ವಿರುದ್ಧ ಗುಡುಗಿರುವ ಅವರು, 'ಹಿಂದಿನ ಡಿಎಂಕೆ ಸರ್ಕಾರವು ರಾಜ್ಯದ ಮೇಲೆ ₹ 10 ಲಕ್ಷ ಕೋಟಿ ಸಾಲವನ್ನು ಉಳಿಸಿದೆ. ನನ್ನ ಮೇಲೆ ಎಷ್ಟು ಹೊರೆಯನ್ನು ಹೊರಿಸಿದ್ದಾರೆ ಎಂಬುದನ್ನು ನಿಮಗೆಲ್ಲ ತಿಳಿಸಲು ಬಯಸುತ್ತೇನೆ. 2021-2026 ಅವಧಿಗೆ ರಾಜ್ಯದ ಹಣಕಾಸು ವ್ಯವಹಾರದ ಕುರಿತು ಶ್ವೇತಪತ್ರ ಬಿಡುಗಡೆ ಮಾಡುತ್ತೇನೆ' ಎಂದು ಹೇಳಿದ್ದಾರೆ.

ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತದ ಭರವಸೆ ನೀಡಿರುವ ಸಿಎಂ, ಗುಣಮಟ್ಟದ ಶಿಕ್ಷಣ, ಉತ್ತಮ ಆಹಾರ, ಆರೋಗ್ಯ ಸುಧಾರಣೆ ಮತ್ತು ಮಹಿಳಾ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದಾಗಿ ಪುನರುಚ್ಚರಿಸಿದ್ದಾರೆ.

ಮಹಿಳೆಯರ ಸುರಕ್ಷತೆ ಸಲುವಾಗಿ ವಿಶೇಷ ಪಡೆಗಳನ್ನು ರಚಿಸುವುದು ಮತ್ತು ರಾಜ್ಯದಾದ್ಯಂತ ಮಾದಕವಸ್ತು ನಿರ್ಮೂಲನೆಗಾಗಿ ಪ್ರತಿ ಜಿಲ್ಲೆಯಲ್ಲೂ ಮಾದಕವಸ್ತು ವಿರೋಧಿ ಘಟಕಗಳನ್ನು ಸ್ಥಾಪಿಸುವುದಾಗಿಯೂ ಇದೇ ವೇಳೆ ಘೋಷಿಸಿದ್ದಾರೆ.

ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ: ದಾಖಲೆ ಬರೆದ ಟಿವಿಕೆ200 ಯುನಿಟ್ ಉಚಿತ ವಿದ್ಯುತ್, ಮಹಿಳೆಯರ ರಕ್ಷಣೆಗೆ ವಿಶೇಷ ಪಡೆ: ಸಿಎಂ ವಿಜಯ್ ಘೋಷಣೆ

234 ಸದಸ್ಯ ಬಲದ ವಿಧಾನಸಭಾ ಚುನಾವಣೆಗೆ ಏಪ್ರಿಲ್‌ 23ರಂದು ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಮೇ 4ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಿದೆ. 108 ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ವಿಜಯ್‌ ಪಕ್ಷ, ಅತಿದೊಡ್ಡ ಪಕ್ಷವೆನಿಸಿದರೂ ಬಹುಮತ ಸಾಧಿಸಲು ವಿಫಲವಾಗಿತ್ತು.

ಹೀಗಾಗಿ, ಐವರು ಶಾಸಕರನ್ನು ಹೊಂದಿರುವ ಕಾಂಗ್ರೆಸ್‌, ತಲಾ ಎರಡು ಕ್ಷೇತ್ರಗಳಲ್ಲಿ ಜಯ ಸಾಧಿಸಿರುವ ವಿಸಿಕೆ, ಸಿಪಿಐ, ಸಿಪಿಐ(ಎಂ), ಐಯುಎಂಎಲ್‌ ಬೆಂಬಲದೊಂದಿಗೆ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಚೆನ್ನೈನ ಜವಾಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ವಿಜಯ್‌ ಅವರೊಂದಿಗೆ 9 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.

- ವಿಜಯ್‌, ತಮಿಳುನಾಡು ಮುಖ್ಯಮಂತ್ರಿನೀವೆಲ್ಲರೂ ಸಹಕಾರ ನೀಡಿದರೆ, ನಾವು ನೀಡಿರುವ ಪ್ರತಿಯೊಂದು ಭರವಸೆಯನ್ನು ಈಡೇರಿಸಲು ಪ್ರಯತ್ನಿಸುತ್ತೇನೆಸಿನಿಮಾದಿಂದ ಸಿಂಹಾಸನದತ್ತ: ಉಡಾಫೆಗಳನ್ನು ಉಲ್ಟಾ ಮಾಡಿ 'ವಿಜಯ'ದ ಸೀಟಿ ಊದಿದ ದಳಪತಿತಮಿಳುನಾಡು | ವಿಜಯ್ ಯುಗಾರಂಭ: ದಳಪತಿ ಸಂಪುಟ ಸೇರಿದ 9 ಮಂದಿ ಸಚಿವರಿವರು
Dailyhunt
Disclaimer: This content has not been generated, created or edited by Dailyhunt. Publisher: Prajavani