ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಫಿನಾಲೆ ಹಂತದಲ್ಲಿದೆ. ಈ ವೇಳೆ ಗೀತಾ ಶಿವರಾಜ್ ಕುಮಾರ್ ದಂಪತಿ ಡಿಕೆಡಿಯ ಪ್ರತಿ ಸ್ಪರ್ಧಿಗೂ ₹50 ಸಾವಿರ ಧನಸಹಾಯ ಮಾಡಿರುವುದಕ್ಕೆ, ನಟ ಅಮೋಘ್ ಆದಿತ್ಯ ಅವರು ಕೃತಜ್ಞತೆ ತಿಳಿಸಿದ್ದಾರೆ.
ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅಮೋಘ್ ಆದಿತ್ಯ ಅವರು, 'ನನ್ನ ಡಿಕೆಡಿ ಪಯಣ ಮುಗಿದಿದೆ. ಈ ಸೆಟ್‌ನಲ್ಲಿ ಇಂದು ಒಂದು ಅದ್ಭುತ ನಡೆಯಿತು. ಶಿವಣ್ಣ ಅವರು ಪ್ರತಿಯೊಬ್ಬ ಸ್ಪರ್ಧಿಗೂ ₹50 ಸಾವಿರ ಧನಸಹಾಯ ಮಾಡಿದ್ದಾರೆ. ಅಷ್ಟು ಜನ ಸ್ಪರ್ಧಿಗಳಿಗೆ ಹಣ ನೀಡುವುದು ಸುಲಭದ ವಿಷಯವಲ್ಲ. ಎಲ್ಲರಿಗೂ ಒಳ್ಳೆಯತನ ಇರುತ್ತದೆ. ಆದರೆ, ಇವರಿಬ್ಬರಿಗೂ ಇಷ್ಟು ಒಳ್ಳೆಯ ಗುಣ ಇರಲು ಹೇಗೆ ಸಾಧ್ಯ ಅಂಥ ಪ್ರತಿಸ್ಪರ್ಧಿಗಳಿಗೂ ಕೂತೂಹಲ ಇದೆ. ಮೂರು ತಿಂಗಳು ನಾನು ಗೀತಕ್ಕ ಹಾಗೂ ಶಿವಣ್ಣ ಅವರನ್ನು ಹತ್ತಿರದಿಂದ ನೋಡುದ್ದೇನೆ ಅದು ನನ್ನ ಭಾಗ್ಯ. ಈ ಜೋಡಿ ಮೇಲೆ ಯಾರ ಕಣ್ಣು ಬೀಳದಿರಲಿ. ನನ್ನ ಡಿಕೆಡಿ ಪಯಣಕ್ಕೆ ಸಹಕರಿಸಿದವರೆಲ್ಲಾರಿಗೂ ಕೃತಜ್ಞತೆ ತಿಳಿಸಿಸುತ್ತೇನೆ' ಎಂದು ಹೇಳಿಕೊಂಡಿದ್ದಾರೆ.
ನಿರೂಪಕಿ ಅನುಶ್ರೀ ಅವರು ನಡೆಸಿಕೊಡುವ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ಅರ್ಜುನ್ ಜನ್ಯ, ರಚಿತಾ ರಾಮ್ ಅವರು ತೀರ್ಪುಗಾರರಾಗಿದ್ದಾರೆ.

